More

    ಹೊಳೆಹೊನ್ನೂರು: ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ ಮುಳುಗಡೆ

    ಹೊಳೆಹೊನ್ನೂರು: ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿರುವುದರಿಂದ ತುಂಗಭದ್ರಾ ಸಂಗಮದ ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಗೊಂಡಿದೆ.
    ಸಾಗರದಂತೆ ಕಾಣುತ್ತಿರುವ ಸಂಗಮದ ಸ್ಥಳವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರು ಸಂಗಮಕ್ಕೆ ಲಗ್ಗೆ ಇಡುತ್ತಿದ್ದಾರೆ. ತುಂಗಭದ್ರಾ ನದಿಗೆ ಅಡ್ಡಲಾಗಿ ಎಸ್.ಕೆ ಮಗ್ಗಿಯ ಬಳಿ ನಿರ್ಮಾಣವಾಗಿರುವ ಹೊಸ ಸೇತುವೆ ಮೇಲೆ ನಿಂತು ನೀರಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ.
    ಹೊಳೆಹೊನ್ನೂರು, ಹೊಳಲೂರು ವಾಪ್ತಿಯಲ್ಲಿ 180ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ. ಕಲ್ಲಿಹಾಳ್, ಆನವೇರಿ ನಾಡಕಚೇರಿ ವ್ಯಾಪ್ತಿಯಲ್ಲಿ 65 ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಹೊಳಲೂರು, ಕೊಮ್ಮನಾಳ್, ಹರಮಘಟ್ಟ, ಸೈದರಕಲ್ಲಹಳ್ಳಿ, ಇಟ್ಟಿಗೆಹಳ್ಳಿ, ವಿಠಲಾಪುರ, ಕಲ್ಲಾಪುರ ಭಾಗದಲ್ಲಿ ಖುಷ್ಕಿ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಕಚ್ಚಿದೆ. ಮಳೆಗೆ ಸಿಲುಕಿ ಬಹುತೇಕ ತೋಟಗಳಲ್ಲಿ ಅಡಕೆ ಗೊನೆಗಳಲ್ಲಿ ತೊಟ್ಟು ಕೊಳೆತು ಕಾಯಿಗಳು ಉದುರಲಾರಂಬಿಸಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ತೋಟಗಳಲ್ಲಿ ನೀರು ನಿಂತು ಬಸಿಗಾಲುವೆಗಳು ಭರ್ತಿಯಾಗಿ ಕೊಳೆ ರೋಗ ಹೆಚ್ಚಾಗುವ ಭೀತಿ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts