More

    ಹೊಳೆಆಲೂರ ಭಾಗದಲ್ಲಿ ಪ್ರವಾಹ ಭೀತಿ

    ಹೊಳೆಆಲೂರ: ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹ ಮಟ್ಟ ಏರಿಕೆಯಾಗಿದೆ. ಇದರಿಂದ ಹೊಳೆಆಲೂರಿನಿಂದ ಬದಾಮಿ ಸಂಪರ್ಕ ಕಲ್ಪಿಸá-ವ ಮಲಪ್ರಭಾ ಸೇತುವೆ ಮುಳಗಡೆಯಾಗಿದೆ. ಮತ್ತೊಂದೆಡೆ ಮೆಣಸಗಿ ಹತ್ತಿರದ ಸೇತುವೆ ಮುಳುಗಡೆಯಾಗಿ ಹೊಳೆಆಲೂರ- ಕೊಣ್ಣೂರ ರಸ್ತೆ ಸಂಪರ್ಕವೂ ಕಡಿತವಾಗಿದ್ದರಿಂದ ಹೋಬಳಿಯ ಬಹುತೇಕ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
    ಈ ಭಾಗದಲ್ಲಿ ಇನ್ನೂ ದಟ್ಟ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಂಭವವಿದೆ. ಜತೆಗೆ ಹುಬ್ಬಳ್ಳಿ- ಧಾರವಾಡ, ನವಲಗುಂದ ಅಥವಾ ಕುಂದಗೋಳ ತಾಲೂಕಿನಲ್ಲಿ ಮಳೆಯಾದರೂ ಬೆಣ್ಣೆ ಹಳ್ಳದ ಪ್ರವಾಹ ಮಟ್ಟ ಏರಿಕೆಯಾಗುತ್ತದೆ. ಅಲ್ಲದೆ, ನವೀಲುತೀರ್ಥ ಅಣೆಕಟ್ಟಿನಿಂದ ಶುಕ್ರವಾರ 3000 ಕ್ಯೂಸೆಕ್ ನೀರು ಹೊರಬಿಟ್ಟರೆ, ಶನಿವಾರ 7500 ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಬಿಡುಗಡೆಯಾಗಿದೆ. ಡ್ಯಾಂನಿಂದ ಬಿಟ್ಟ ನೀರು ಭಾನುವಾರ ಮಧ್ಯಾಹ್ನದ ಹೊತ್ತಿಗೆ ಹೊಳೆಆಲೂರ ಹೋಬಳಿಯ ಹತ್ತಿರ ಆಗಮಿಸುವುದರಿಂದ ಯಾವಾಗ ಬೇಕಾದರೂ ಪ್ರವಾಹದ ಮಟ್ಟ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
    ಈಗಾಗಲೇ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿಯ ನೀರಿನಿಂದ
    ಹೊಳೆಆಲೂರ ಹೋಬಳಿ ವ್ಯಾಪ್ತಿಯ ಗುಳಗಂದಿ, ಮೆಣಸಗಿ, ಹೊಳೆಮಣ್ಣೂರ, ಗಾಡಗೋಳಿ, ಹೊಳೆಆಲೂರ, ಅಮರಗೋಳ, ಹೊಳೆಹಡಗಲಿ. ಬಸರಕೋಡ. ಬಿ.ಎಸ್. ಬೇಲೇರಿ ಗ್ರಾಮದ ನದಿ ಪಾತ್ರದ ನೂರಾರು ಎಕರೆಯಲ್ಲಿ ಬೆಳೆದ ಗೋವಿನಜೋಳ, ಹತ್ತಿ, ಉಳ್ಳಾಗಡ್ಡಿ ಇತ್ಯಾದಿ ಬೆಳೆ ನೀರಿನಿಂದ ಆವೃತವಾಗಿದೆ.
    ಬಿಕೋ ಎನ್ನುತ್ತಿವೆ ಶಾಲೆಗಳು: ಪ್ರವಾಹ ಪರಿಸ್ಥಿತಿಯನ್ನು ಯುದ್ಧೋಪಾದಿಯಲ್ಲಿ ಎದುರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಹ ಆತಂಕದಲ್ಲಿರುವ ಗ್ರಾಮಸ್ಥರನ್ನು ತೆರವು ಮಾಡಿಸುವುದು, ಗ್ರಾಮದಲ್ಲಿ ಡಂಗುರ ಸಾರಿ ಜನರಿಗೆ ಪ್ರವಾಹ ಸ್ಥಿತಿಯ ಮುನ್ನೆಚ್ಚರಿಕೆ ನೀಡುವಂತಹ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಶಾಲಾ ಕಾಲೇಜುಗಳು ಆರಂಭವಿದ್ದರೂ ಪಾಲಕರು ಭಯದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸá-ತ್ತಿಲ್ಲ. ಹೀಗಾಗಿ ಬಹುತೇಕ ಶಾಲೆಗಳು ಬಿಕೋ ಎನ್ನುತ್ತಿವೆ.
    ಜನಪ್ರತಿನಿಧಿಗಳಿಗೆ ಹಿಡಿಶಾಪ: 60-70 ವರ್ಷಗಳ ಹಿಂದೆ ನಿರ್ವಿುಸಿರುವ ಹೊಳೆಆಲೂರ- ಬದಾಮಿ ಸಂರ್ಪಸುವ ಮಲಪ್ರಭಾ ಸೇತುವೆ ಅತ್ಯಂತ ತಳಮಟ್ಟದಲ್ಲಿದೆ. ಮೇಲ್ಭಾಗದಲ್ಲಿ ಅಲ್ಪ ಮಳೆಯಾದರೂ ಸಂಪರ್ಕ ಕಡಿತವಾಗಿ ಈ ಭಾಗದ 15-20 ಗ್ರಾಮಗಳ ಜನರು ವರ್ಷದಲ್ಲಿ ಹಲವಾರು ಸಲ ಸಮಸ್ಯೆ ಅನುಭವಿಸುವಂತಾಗಿದೆ. 15 ವರ್ಷಗಳಿಂದ ನೂತನ ಸೇತುವೆ ನಿರ್ವಿುಸುವಂತೆ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರೂ ಈ ಭಾಗದ ಜನಪ್ರತಿನಿಧಿಗಳು ಲಕ್ಷ್ಯ ವಹಿಸುತ್ತಿಲ್ಲ. ಕಳೆದ ವರ್ಷ 25 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ಕಂ ಬ್ರಿಜ್ ಕಾಮಗಾರಿ ಮಂಜೂರಾಗಿ ಕಾಮಗಾರಿ ಪೂಜೆಯ ನಂತರ ಗುತ್ತಿಗೆದಾರರು ಕೆಲಸ ಆರಂಭ ಮಾಡಿದ್ದರೂ ಕಾಣದ ಕೈಗಳ ಕುತಂತ್ರದಿಂದ ಅದು ತಟಸ್ಥವಾಗಿತ್ತು. ನಂತರ ಹಣವೂ ವಾಪಸ್ ಹೋಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts