More

    ಹೊಲಕ್ಕೆ ಹೋಗಲು ಹಿಂದೇಟು

    ನೀಲಪ್ಪ ಹೆಗ್ಗಣ್ಣವರ ನವಲಗುಂದ

    ಮುಂಗಾರು ಬಿತ್ತನೆಗಾಗಿ ತಾಲೂಕಿನ ರೈತರು ಭೂಮಿ ಹದಗೊಳಿಸಿ ಬೀಜ, ಗೊಬ್ಬರ ಸಂಗ್ರಹಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಆದರೆ, ಮಳೆ ಪ್ರಮಾಣ ಕ್ಷೀಣಿಸಿದ್ದರಿಂದ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

    ಮೇ 24ಕ್ಕೆ ರೋಹಿಣಿ ಮಳೆ ಉತ್ತಮವಾಗಿ ಸುರಿದರೆ ಹೆಸರು, ಶೇಂಗಾ, ಉಳ್ಳಾಗಡ್ಡಿ, ಹತ್ತಿ, ಗೋವಿನಜೋಳ, ಮೆಣಸಿನಕಾಯಿ ಬಿತ್ತನೆ ಮಾಡಲು ರೈತರು ಉತ್ಸುಕರಾಗಿದ್ದರು. ಆದರೆ, ಇನ್ನೂವರೆಗೆ ಹದವರ್ತಿ ಮಳೆಯಾಗಿಲ್ಲ.

    ತಾಲೂಕಿನ ಒಟ್ಟು ಭೌಗೋಳಿಕ ಕ್ಷೇತ್ರ 1,19,530 ಹೆಕ್ಟೇರ್. ಈ ಪೈಕಿ 83,881 ಹೆಕ್ಟೇರ್ ಸಾಗುವಳಿ, 55,147 ಹೆಕ್ಟೇರ್ ಬೆಳೆ ಆವರಿಸಿದ ಕ್ಷೇತ್ರವಾಗಿದೆ. ತಾಲೂಕಿನ 42,231 ರೈತರಲ್ಲಿ 18,007 ಸಣ್ಣ ಹಿಡುವಳಿ, 11,211 ಅತೀ ಸಣ್ಣ, 17,203 ದೊಡ್ಡ ಹಿಡುವಳಿ ಹೊಂದಿದ್ದಾರೆ. ಈ ವರ್ಷ ಮುಂಗಾರಿನಲ್ಲಿ 63,088 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 28,700 ಹೆಕ್ಟೇರ್ ಹೆಸರು, 18,839 ಹೆಕ್ಟೇರ್ ಹತ್ತಿ, 9,500 ಹೆಕ್ಟೇರ್ ಗೋವಿನಜೋಳ, 5,49 ಹೆಕ್ಟೇರ್ ತೊಗರಿ, 4,544 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ.

    ಕಳೆದ ವರ್ಷ ಅತಿವೃಷ್ಟಿಗೆ ಬೆಳೆ ಹಾನಿ: ಕಳೆದ ವರ್ಷ ಮುಂಗಾರಿನಲ್ಲಿ ಬಿತ್ತನೆ ಗುರಿ 55147 ಹೆ.ಗಿಂತ ಹೆಚ್ಚು 59,316 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಿ ಸಾಧನೆ ಮಾಡಲಾಗಿತ್ತು. 19500 ಹೆ. ಬಿತ್ತನೆ ಗುರಿ ಪೈಕಿ 10,351 ಹೆ. ಬಿತ್ತಿದ ಹೆಸರು ಬೆಳೆ ಅತಿವೃಷ್ಟಿಗೆ ಹಾಳಾಗಿತ್ತು. 4,533 ಹೆ. ಬಿತ್ತನೆ ಗುರಿ ಪೈಕಿ 2,494 ಹೆ. ನಲ್ಲಿ ಬೆಳೆದ ಶೇಂಗಾ, 16333 ಹೆ. ಬಿತ್ತನೆ ಗುರಿ ಪೈಕಿ 4506 ಹೆ. ನಲ್ಲಿ ಬೆಳೆದ ಗೋವಿನಜೋಳ ಹಾನಿಗೀಡಾಗಿತ್ತು. ಇದರಿಂದ ರೈತರು ನಷ್ಟ ಅನುಭವಿಸಿದ್ದರು.

    ಬೀಜ, ಗೊಬ್ಬರ ದಾಸ್ತಾನು ಎಷ್ಟು?: ನವಲಗುಂದದಲ್ಲಿ ಹೆಚ್ಚುವರಿ ರೈತ ಸಂಪರ್ಕ ಕೇಂದ್ರ, ಮೊರಬ, ಅಣ್ಣಿಗೇರಿ ಸೇರಿ ಮೂರು ರೈತ ಸಂಪರ್ಕ ಕೇಂದ್ರಗಳಿವೆ. 20 ಕ್ವಿಂಟಾಲ್ ಹೆಸರು ದಾಸ್ತಾನಿದೆ. ಕೃಷಿ ಇಲಾಖೆ ಕೇಂದ್ರೀಕರಿಸಿದ ಮಾರಾಟ ಕೇಂದ್ರಗಳಲ್ಲಿ ಡಿಎಪಿ-280 ಟನ್, ಕಾಂಪ್ಲೆಕ್ಸ್-200 ಟನ್, ಯೂರಿಯಾ-50 ಟನ್ ಹಾಗೂ ಹತ್ತಿ ಬೀಜ ದಾಸ್ತಾನಿದೆ. ಶೇಂಗಾ, ತೊಗರಿ, ಗೋವಿನಜೋಳ ಬೀಜಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಅವರ ಬೇಡಿಕೆಯಂತೆ ಉಳಿದ ಬೀಜಗಳ ಸಂಗ್ರಹಕ್ಕೆ ಕೃಷಿ ಇಲಾಖೆ ಮುಂದಾಗಿದೆ.

    ರೈತರಿಗೆ ಸರ್ಕಾರದ ಸಹಾಯಧನದಲ್ಲಿ ವಿತರಿಸಲು ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿದ್ದೇವೆ. ಈ ಬಾರಿ ರೈತರು ಹತ್ತಿ, ಗೋವಿನಜೋಳ, ಹೆಸರು ಮತ್ತಿತರ ಬೆಳೆ ಬೆಳೆಯಲು ಹೆಚ್ಚು ನಿರೀಕ್ಷೆ ಹೊಂದಿದ್ದಾರೆ.

    | ಎಂ.ಆರ್. ದಂಡಗಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ, ನವಲಗುಂದ

    ಕಳೆದ ವರ್ಷದಂತೆ ಈ ಬಾರಿಯೂ ಶೇಂಗಾ, ಹೆಸರು ಬಿತ್ತಲು ಭೂಮಿ ಹದಗೊಳಿಸುತ್ತಿದ್ದೇವೆ. ಆದರೆ, ಮಳೆ ಕ್ಷೀಣಿಸಿದ್ದರಿಂದ ಬಿತ್ತನೆಗೆ ಹಿಂದೇಟು ಹಾಕಿದ್ದೇವೆ. ಕರೊನಾದಿಂದ ಕಷ್ಟಕ್ಕೀಡಾಗಿದ್ದೇವೆ. ಸರ್ಕಾರ ಉಚಿತ ಬೀಜ, ಗೊಬ್ಬರ ಒದಗಿಸಬೇಕು.

    | ಸಿದ್ದಪ್ಪ ಬಾಳಿಕಾಯಿ, ರೈತ, ಗೊಬ್ಬರಗುಂಪಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts