More

    ಹೊಟ್ಟೆಪಾಡಿಗೆ ಶೌಚಗೃಹ ಸ್ವಚ್ಛಗೊಳಿಸಿದ ಚಿಣ್ಣರು

    ಧಾರವಾಡ: ಗಲೀಜು, ದುರ್ವಾಸನೆ, ನಿರ್ವಹಣೆಯೇ ಇಲ್ಲ. ಮುರಿದ ನಳ, ಸಿಂಕ್, ಪೈಪ್​ಗಳು, ಸುರಿಯುವ, ಹರಿಯುವ, ಚಿಮ್ಮುವ ನೀರು.. ಛೇ..!

    ಹುಬ್ಬಳ್ಳಿÛ-ಧಾರವಾಡ ಮಹಾನಗರ ಪಾಲಿಕೆ ಅಡಿ ಖಾಸಗಿಯವರು ಟೆಂಡರ್ ಪಡೆದು ನಿಭಾಯಿಸುತ್ತಿರುವ ಧಾರವಾಡ ಸಿಬಿಟಿ ಪಕ್ಕದ ಶೌಚಗೃಹದ ದುಸ್ಥಿತಿ ಇದು.

    ‘ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಸರ್ಗ ಕರೆ ಪೂರೈಸಲು ನಾನು ಅಚಾನಕ್ ಆಗಿ ಈ ಶೌಚಗೃಹಕ್ಕೆ ಹೋದೆ. ಸ್ವಾಗತಕಾರ ಮಾಸ್ಕ್ ಕೂಡ ಧರಿಸಿರಲಿಲ್ಲ. ಆತನ ಮಾಸ್ಕ್ ಗಂಟಲಿಗೆ ಇಳಿದಿತ್ತು. ಸ್ಯಾನಿಟೈಸರ್ ಲಭ್ಯವಿರಲಿಲ್ಲ. ಕೈಗವಸು ಸಹ ಇರಲಿಲ್ಲ. ದರ್ಪದಿಂದ ಕೂಗುತ್ತಿದ್ದ ಬೇರೆ !

    ಒಳಗೆ ಹೋಗುತ್ತಲೇ ಅಂದಾಜು 6-7 ವರ್ಷದ ಲಕ್ಷೀ ್ಮ ಮತ್ತು 5 ವರ್ಷದೊಳಗಿನ ಮೀನಾಕ್ಷಿ (ತಂದೆ-ತಾಯಿ ಇಬ್ಬರೂ ಇಲ್ಲವಂತೆ) ಬಹುಶಃ ಅಕ್ಕತಂಗಿಯರು. ಶೌಚಗೃಹ ಸ್ವಚ್ಛಗೊಳಿಸುತ್ತಿದ್ದರು. ಪೊರಕೆ, ನೀರು ಸಾರಿಸುವ ರಬ್ಬರ ಮಾಪ್ ಸ್ಟಿಕ್ ಹಿಡಿದು ಒರೆಸುತ್ತಿದ್ದರು. ಸ್ವಾಗತಕಾರ ಕುಳಿತಲ್ಲೇ ಮಕ್ಕಳಿಗೆ ನಿರ್ದೇಶನ ನೀಡುತ್ತಿದ್ದ.

    ಮಕ್ಕಳು ಶೌಚಗೃಹವನ್ನು ಸ್ವಚ್ಛಗೊಳಿಸಿದ ಮೇಲೆ ಏನೂ ಕೊಡದೇ ಹೊರದಬ್ಬಿದ. ಬೆದರಿಸಿ ಓಡಿಸಿದ.

    ಮಕ್ಕಳನ್ನು ತಡೆದು ನಿಲ್ಲಿಸಿ ವಿಚಾರಿಸಿದೆ. ಕನ್ನಡ ಮಿಶ್ರಿತ ತೆಲುಗು ಭಾಷೆಯಲ್ಲಿ ಮಕ್ಕಳು ಮಾತನಾಡಿದವು. ಟೋಲ್ ನಾಕಾ ಬಳಿ ಯಾರದೋ ಸಂಬಂಧಿಕರ ಮನೆಯ ಪುಟ್ಟ ಕೋಣೆಯಲ್ಲಿ ಇರುವುದಾಗಿ ಹೇಳಿದರು.

    ‘ಅಕ್ಕ ಅನ್ನ, ಸಾರು ಮಾಡ್ತಾಳೆ.. ಅದನ್ನೇ ಉಣ್ತೀನಿ‘ ಅಂತ ತಂಗಿ ಹೇಳಿದಳು. ಇಡಿ ದಿನ ಭಿಕ್ಷೆ ಬೇಡಿ ಬಂದ ಹಣದಲ್ಲಿ ಏನೋ ತಿಂದು ಹೋಗುವುದಾಗಿ ಹೇಳಿದರು. ಯಾರಿಗೋ ಒಂದಿಷ್ಟು ದುಡ್ಡು ಕೊಡಬೇಕು ಅಂತಲೂ ಅಳಲು ತೋಡಿಕೊಂಡರು.

    ಈ ಶೌಚಗೃಹದ ನಿರ್ವಾಹಕ ಕೆಲಸ ಮಾಡಿಸಿಕೊಂಡು ಏನೂ ಕೊಡದೇ ಓಡಿಸಿದ ಅಂತ ಮಕ್ಕಳು ಅವಲತ್ತುಕೊಂಡವು..

    ಬಾಲ ಕಾರ್ವಿುಕರನ್ನು ಕೆಲಸಕ್ಕೆ ನೇಮಿಸುವಂತಿಲ್ಲ. ಅವರಿಂದ ಕೆಲಸ ಮಾಡಿಸುವಂತಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಈ ನಡೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ? ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ ?




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts