More

    ಹೊಗೆಮಯವಾದ ತರೀಕೆರೆ-ಚಿಕ್ಕಮಗಳೂರು ಮುಖ್ಯರಸ್ತೆ

    ಲಿಂಗದಹಳ್ಳಿ: ತರೀಕೆರೆ-ಚಿಕ್ಕಮಗಳೂರು ಮುಖ್ಯ ರಸ್ತೆಯ ದೊರನಾಳು, ಭೈರಾಪುರ, ಲಿಂಗದಹಳ್ಳಿ ಗ್ರಾಮಗಳ ವ್ಯಾಪ್ತಿಯ ಅಡಕೆ ಬೆಳೆಗಾರರು ಅಡಕೆ ಸಿಪ್ಪೆಯನ್ನು ರಸ್ತೆ ಬದಿಗೆ ಸುರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಾಹನ ಚಾಲಕ ರಾಜಕುಮಾರ್ ಆರೋಪಿಸಿದ್ದಾರೆ.

    ಪ್ರತಿ ವರ್ಷ ಅಡಕೆ ಕೊಯ್ಲಿನ ಸಂದರ್ಭದಲ್ಲಿ ಅಡಕೆ ಸಿಪ್ಪೆಯನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿದೆ. ಹೀಗೆ ಸುರಿದು ಅಡಕೆ ಸಿಪ್ಪೆಗಳು ರಸ್ತೆ ಬದಿಯಿಂದ ಮಧ್ಯ ಭಾಗದವರೆಗೂ ಹರಡಿಕೊಳ್ಳುವುದರಿಂದ ರಸ್ತೆಯಲ್ಲಿ ಸಂಚರಿಸುವ ಅನೇಕ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದಿದ್ದಾರೆ. ಹಲವು ವಾಹನ ಅಪಘಾತಗಳು ಸಂಭವಿಸಿವೆ.

    ಕಳೆದ 4-5 ತಿಂಗಳಿಂದ ರಸ್ತೆ ಬದಿಯಲ್ಲಿ ಸುರಿದಿರುವ ಅಡಕೆ ಸಿಪ್ಪೆ ಒಣಗುವ ಹಂತದಲ್ಲಿದ್ದು ಇತ್ತೀಚೆಗೆ ಕೆಲ ಕಿಡಿಗೇಡಿಗಳು ಅಡಕೆ ಸಿಪ್ಪೆಗೆ ಬೆಂಕಿ ಹಚ್ಚುತ್ತಿರುವುದರಿಂದ ರಸ್ತೆಯ ಎರಡು ಬದಿಗಳಲ್ಲೂ ಬೆಂಕಿ ಜತೆಗೆ ಹೊಗೆ ಸೇರಿಕೊಂಡು ರಸ್ತೆ ಮೇಲೆ ಹರಡಿಕೊಳ್ಳುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಬೆಂಕಿ ಮತ್ತು ಹೊಗೆಯಿಂದ ಕಣ್ಣು ಮಂಜಾಗಿ ರಸ್ತೆ ಕಾಣದೆ ಅನೇಕ ಅಪಘಾತಗಳಾಗಿವೆ. ಇನ್ನಾದರೂ ರಸ್ತೆ ಬದಿಗೆ ಅಡಕೆ ಸಿಪ್ಪೆ ಸುರಿಯುವುದು ಮತ್ತು ಸಿಪ್ಪೆಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts