More

    ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ- ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್

    ದಾವಣಗೆರೆ: ಸಂಬಂಧಗಳೊಂದಿಗೆ ಹೊಂದಾಣಿಕೆ ಮಾಡಿ ಬದುಕಬೇಕು, ಬದುಕು ಬಂದಂತೆ ಸ್ವೀಕರಿಸು ಎಂಬ ಸದಾಶಯ ಹೊಂದಿರುವ ‘ಹೊಂದಿಸಿ ಬರೆಯಿರಿ’ ಚಿತ್ರ ಐದನೇ ವಾರದತ್ತ ಹೆಜ್ಜೆ ಇಟ್ಟಿದ್ದು, ಮೈಸೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹೇಳಿದರು.
    ದಾವಣಗೆರೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತೆರೆ ಕಂಡ ಹೊಸ ಸಿನಿಮಾಗಳ ಪೈಕಿ ನಮ್ಮ ಸಿನಿಮಾ ಐದನೇ ವಾರದತ್ತ ಲಗ್ಗೆ ಇಟ್ಟಿದೆ ಎಂದು ಹೇಳಿದರು.
    ಚಿತ್ರದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್,ಶ್ರೀಮಹದೇವ್, ಅನಿರುದ್ಧ ಆಚಾರ್ಯ, ಭಾವನಾ ರಾವ್, ಸಂಯುಕ್ತಾ ಹೊರನಾಡು, ಅರ್ಚನಾ ಜೋಯಿಸ್, ಐಶಾನಿಶೆಟ್ಟಿ, ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಿತ್ರದಲ್ಲಿ 9 ಹಾಡುಗಳಿವೆ. ಚಿತ್ರಕತೆಗೆ ಪೂರಕವಾಗಿ ಕೆಲವು ಹಾಡುಗಳು ಸಾಗುತ್ತವೆ ಎಂದು ಹೇಳಿದರು.
    ನಾಲ್ಕು ಹುಡುಗರ ನಡುವಿನ ಕಾಲೇಜು ನಂತರರ ಬದುಕಿನ ಕಥಾಹಂದರ ಸಿನಿಮಾದಲ್ಲಿದೆ. ಒಂದೊಂದು ಪಾತ್ರವೂ ಜೀವನಕ್ಕೆ ಹತ್ತಿರ ಇರುವುದಾಗಿ ವಿಮರ್ಶೆಯಲ್ಲಿ ವ್ಯಕ್ತವಾಗಿದೆ. ಚಿತ್ರವನ್ನು ಕುಟುಂಬ ಸದಸ್ಯರು ನೋಡಬಹುದಾಗಿದೆ ಎಂದರು.
    ನಾಯಕನಟ ಪ್ರವೀಣ್ ತೇಜ್ ಮಾತನಾಡಿ ನಿರ್ದೇಶಕರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಚಿತ್ರ ಹೊಸಬರದು ಎಂದೆನಿಸುವುದಿಲ್ಲ. ಸಿನಿಮಾದ ಕಥೆಯೇ ಇದರ ಶಕ್ತಿ. ಸಂಗೀತ, ಚಿತ್ರೀಕರಣ ಎಲ್ಲ ದೃಷ್ಟಿಯಿಂದಲೂ ಸಿನಿಮಾ ಗಮನ ಸೆಳೆಯುತ್ತಿದೆ. ದಾವಣಗೆರೆಯಲ್ಲಿ ಚಿತ್ರೀಕರಣ ಆಗದಿದ್ದರೂ ಇಲ್ಲಿಯ ನೆನಪುಗಳು ಸಾದರಗೊಂಡಿದ್ದು ದಾವಣಗೆರೆ ಜನರು ನೋಡಲೇಬೇಕಾದ ಚಿತ್ರ ಇದಾಗಿದೆ ಎಂದರು.
    ಮತ್ತೊಬ್ಬ ನಟ ಅನಿರುದ್ಧ ಆಚಾರ್ಯ ಮಾತನಾಡಿ ಈ ಚಿತ್ರ ನೋಡಿದ ಕೆಲ ಪ್ರೇಕ್ಷಕರ ಜೀವನದಲ್ಲಿ ಉತ್ತಮ ಪರಿಣಾಮ ಬೀರಿದೆ. ಇದುವೇ ಚಿತ್ರದ ಯಶಸ್ಸು ಎಂದು ಹೇಳಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts