More

    ಹೊಂದಾಣಿಕೆಯಿಂದ ಜೀವನ ಸಾಗಿಸಿ

    ಮುಂಡರಗಿ: ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸುವ ಮೂಲಕ ಅವರ ಅನುಭಾವವನ್ನು ನಾಡಿಗೆ ತಿಳಿಯಪಡಿಸುವ ಕೆಲಸವಾಗಬೇಕು ಎಂದು ಗದಗ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸತಿಪತಿಗಳು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಪತಿಯಾದವನು ದುಶ್ಚಟದಿಂದ ದೂರವಾಗಿ ಸತಿಯೊಂದಿಗೆ ಉತ್ತಮ ಜೀವನ ನಡೆಸಬೇಕು. ಸತಿಯು ಪತಿ ಮತ್ತು ಕುಟುಂಬದ ಜೊತೆಗೆ ಸಹಬಾಳ್ವೆಯಿಂದ ಬಾಳಬೇಕು ಎಂದರು.

    ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ‘ನೂತನ ದಂಪತಿಗಳು ಸುಂದರ ಜೀವನ ಕಟ್ಟಿಕೊಂಡು ಉತ್ತಮ ಬದುಕು ನಡೆಸಿ ಮತೊಬ್ಬರಿಗೆ ಮಾದರಿಯಾಗಬೇಕು. ವಿವಾಹ ನಂತರ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವಂತ ಪದ್ಧತಿ ತೊಲಗಬೇಕು. ಗೌರವದಿಂದ ಜೋಪಾನ ಮಾಡಬೇಕು. ಸುಂದರ ಸುಖ ಸಂಸಾರ ಕಟ್ಟಿಕೊಂಡು ನಗುವಿನಿಂದ ಬಾಳಬೇಕು’ ಎಂದರು.

    ಜಿ.ಪಂ. ಸದಸ್ಯೆ ಶೋಭಾ ಮೇಟಿ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 12 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಡಾ. ಚನ್ನಮಲ್ಲ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಮಡಿವಾಳೇಶ್ವರ ಶಿವಾಚಾರ್ಯರು, ಮಹಾದೇವ ದೇವರು, ಶಿವಯೋಗೀಶ್ವರ ಸ್ವಾಮೀಜಿ, ಶಿಕ್ಷಣ ಇಲಾಖೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಪವನ ಮೇಟಿ, ಎಸ್.ಎನ್. ಹಳ್ಳಿಗುಡಿ, ಡಾ.ಬಿ.ಜಿ. ಜವಳಿ, ಇತರರು ಉಪಸ್ಥಿತರಿದ್ದರು. ಡಾ. ಸಂತೋಷ ಹಿರೇಮಠ ನಿರ್ವಹಿಸಿದರು.

    ತೋಟಗಾರಿಕೆ ವಸ್ತು ಪ್ರದರ್ಶನಕ್ಕೆ ಚಾಲನೆ

    ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನಕ್ಕೆ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.

    ಸಿರಿಧಾನ್ಯ, ಬೀಜ, ಗೊಬ್ಬರ ಕೀಟನಾಶಕ, ಟೊಮ್ಯಾಟೊ, ಬಾಳೆ, ದಾಳಿಂಬೆ, ಮೊದಲಾದ ಬೆಳೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುವುದು, ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾಹಿತಿ, ಕೃಷಿ ಸಾಮಗ್ರಿಗಳ ಮಾಹಿತಿ, ಟೊಮ್ಯಾಟೊ, ಬಾಳೆ, ದಾಳಿಂಬೆ, ಮೊದಲಾದ ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರೇಶ ಸೊಪ್ಪಿನ, ಗೌರಿಶಂಕರ ಸಜ್ಜನರ, ಎ.ಡಿ. ಹೊಸಮನಿ, ಭೀಮಣ್ಣ ಸುಗ್ನಳ್ಳಿ, ವೀರೇಶ ಬಳಿಗಾರ, ಮಂಜುನಾಥ ಗೌಡರ ಇತರರು ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts