More

    ಹೈ ವೋಲ್ಟೇಜ್​ನಿಂದ ಸುಟ್ಟು ಕರಕಲಾದ ಟಿವಿ, ಮಿಕ್ಸರ್

    ಮುಂಡಗೋಡ: ತಾಲೂಕಿನ ಪಾಳಾ ವಾರ್ಡ್ ನಂ.2ರಲ್ಲಿ ವಿದ್ಯುತ್ ಹೈ ವೋಲ್ಟೇಜ್​ನಿಂದ ಟಿವಿ, ಮಿಕ್ಸರ್ ಇನ್ನಿತರ ಗೃಹೋಪಯೋಗಿ ವಿದ್ಯುತ್ ಉಪಕರಣಗಳು ಸುಟ್ಟು ಹಾನಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

    ಭೀಮಣ್ಣ ಭೋವಿ ಎಂಬುವರ ಒಂದು ಟಿವಿ, ಒಂದು ಮೊಬೈಲ್ ಮತ್ತು 6 ಬಲ್ಬ್​ಗಳು ಸುಟ್ಟಿವೆ. ಮಂಜುನಾಥ ದಾವಣಗೇರಿ ಎಂಬುವರ ಒಂದು ಟಿವಿ, ದುರ್ಗಪ್ಪ ಭೋವಿ ಎಂಬುವರ ಒಂದು ಟಿವಿ, ಒಂದು ಮಿಕ್ಸರ್, ಒಂದು ಮೊಬೈಲ್, ಇಸ್ತ್ರಿ ಪೆಟ್ಟಿಗೆ ಸುಟ್ಟು ಹೋಗಿವೆ. ಭೀಮಣ್ಣ ಎನ್. ಭೋವಿ ಎಂಬುವರ ಒಂದು ಟಿವಿ, ಒಂದು ಮಿಕ್ಸರ್, ಹೋಂ ಥಿಯೇಟರ್ ಮತ್ತು ಒಂದು ಮೊಬೈಲ್ ಸುಟ್ಟಿವೆ. ಪುಟ್ಟಪ್ಪ ಭೋವಿ ಎಂಬುವರ ಒಂದು ಟಿವಿ, ಒಂದು ಮೊಬೈಲ್ ಮತ್ತು ಎರಡು ಬಲ್ಬ್​ಗಳು ಸುಟ್ಟಿವೆ. ಸುರೇಶ ಭೋವಿ ಒಂದು ಟಿವಿ, ಒಂದು ಫ್ಯಾನ್ ಸುಟ್ಟಿವೆ. ಪರಶುರಾಮ ಶೇದಿಯಣ್ಣನವರ ಎಂಬುವರ ಎರಡು ಬಲ್ಬ್, ಒಂದು ಟಿವಿ ಮತ್ತು ಫ್ಯಾನ್ ಸುಟ್ಟಿವೆ. ಶಂಬಣ್ಣ ದೊಡ್ಡಮನಿ ಒಂದು ಬಲ್ಬ್ ಹಾಗೂ ಒಂದು ಟಿವಿ ಸುಟ್ಟಿವೆ. ಜ್ಯೋತಿ ಸೊರೇಬಾನ್ ಎಂಬುವರ 4 ಬಲ್ಬ್​ಗಳು ವಿದ್ಯುತ್ ಹೈ ವೋಲ್ಟೇಜ್​ನಿಂದ ಸುಟ್ಟಿವೆ.

    ಇದಲ್ಲದೆ, ಪಟ್ಟಣದ ಕೆಎಚ್​ಬಿ ಕಾಲನಿಯ ಕೆಲವು ಮನೆಗಳಲ್ಲಿಯೂ ಶನಿವಾರ ಬೆಳಗ್ಗೆ ವಿದ್ಯುತ್ ಹೈ ವೋಲ್ಟೇಜ್​ನಿಂದ ಕಂಪ್ಯೂಟರ್, ಯುಪಿಎಸ್, ಮೊಬೈಲ್, ಚಾರ್ಜರ್ ಮತ್ತು ಇನ್ನಿತರ ವಿದ್ಯುತ್ ಉಪಕರಣಗಳು ಸುಟ್ಟು ಹಾನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts