More

    ಹೈವೋಲ್ಟೇಜ್ ಕಣದಲ್ಲಿ ್ರೆಂಡ್ಲಿ ೈಟ್

    ಚಾಮರಾಜನಗರ: ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಯಾಗಿರುವ, ಬಿರು ಬಿಸಿಲಿನಷ್ಟೇ ರಾಜಕೀಯ ರಂಗೇರಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿ ‘್ರೆಂಡ್ಲಿ ೈಟ್’ ನಡೆಯುತ್ತಿದೆ.


    ಕ್ಷೇತ್ರದ ಹ್ಯಾಟ್ರಿಕ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ವರುಣದೊಂದಿಗೆ ಚಾಮರಾಜನಗರದಲ್ಲೂ ಅದೃಷ್ಟ ಪರೀಕ್ಷೆಗಿಳಿದಿರುವ ಬಿಜೆಪಿ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಡುವಿನ ಕದನ ಕಣದಲ್ಲಿ ಟೀಕೆ ಟಿಪ್ಪಣಿಗಳಿಲ್ಲ, ವಾಕ್ಸಮರಗಳಿಲ್ಲ, ಆರೋಪ-ಪ್ರತ್ಯಾರೋಪಗಳಿಲ್ಲ…


    ಕಳೆದ 15 ವರ್ಷಗಳಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕ್ಷೇತ್ರವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರ ಗೋವಿಂದರಾಜನಗರದಲ್ಲೇ ಸೋಮಣ್ಣ ಗೆದ್ದು ಬೀಗಿದವರು. ಇಬ್ಬರು ಘಟಾನುಘಟಿಗಳು ಮುಖಾಮುಖಿಯಾದರೂ ಘರ್ಷಣೆಗಿಳಿದಿಲ್ಲ.


    ಇಬ್ಬರೂ ಸ್ನೇಹಿತರು: ಸೋಮಣ್ಣ ಮತ್ತು ಪುಟ್ಟರಂಗಶೆಟ್ಟಿ ಇಬ್ಬರೂ ಬಹುಕಾಲದ ಸ್ನೇಹಿತರು. ಸೋಮಣ್ಣ ಕಾಂಗ್ರೆಸ್‌ನಲ್ಲಿದ್ದಾಗ ಪುಟ್ಟರಂಗಶೆಟ್ಟಿ ನಡುವಿನ ಗೆಳೆತನ ಬೆಸೆದುಕೊಂಡಿತು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಸೋಮಣ್ಣ ಬಿಜೆಪಿ ಸೇರಿದರು. ಪಕ್ಷ ಬದಲಾವಣೆಗೂ ಬಾಂಧವ್ಯ ಕ್ಷೀಣಿಸುವುದಕ್ಕೂ ಸಂಬಂಧವಿಲ್ಲದಂತೆ ಇಬ್ಬರೂ ನೋಡಿಕೊಂಡಿದ್ದಾರೆ. ನಗರದಲ್ಲಿ ಸೋಮಣ್ಣ ಖರೀದಿ ಮಾಡಿದ್ದ ಮನೆಯನ್ನು ಪುಟ್ಟರಂಗಶೆಟ್ಟಿಗೆ ಕೊಟ್ಟುಬಿಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಭೆಗಳಲ್ಲಿ ಪುಟ್ಟರಂಗಶೆಟ್ಟಿ ಅವರನ್ನು ಮನಸಾರೆ ಹೊಗಳುತ್ತಿದ್ದರು. ಪುಟ್ಟರಂಗಶೆಟ್ಟಿ ಕೂಡ ಸೋಮಣ್ಣ ಮೇಲೆ ಮೃದುಧೋರಣೆ ಹೊಂದಿದ್ದಾರೆ.


    ರಾಜಕೀಯ ಪ್ರಬುದ್ಧತೆ: ಈ ಇಬ್ಬರು ಅಭ್ಯರ್ಥಿಗಳ ನಡುವಿನ ಚುನಾವಣೆ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಸಾಗುತ್ತಿದೆ. ಶಾಸಕರಾದರೂ ಗ್ರಾಮೀಣ ನಡೆ-ನುಡಿ ಬಿಟ್ಟುಕೊಡದ ಪುಟ್ಟರಂಗಶೆಟ್ಟಿ ರಾಜಕೀಯ ಹೇಳಿಕೆಗಳನ್ನು ನೀಡುವಾಗ ಜಾಣತನ ಪ್ರದರ್ಶಿಸುತ್ತಾರೆ. ಸುಖಾಸುಮ್ಮನೆ ಯಾರ ವಿರುದ್ಧವೂ ಟೀಕೆಗಿಳಿಯುವುದಿಲ್ಲ. ಹಿರಿಯ ರಾಜಕಾರಣಿಯಾಗಿರುವ ಸೋಮಣ್ಣ ಕೂಡ ಎದುರಾಳಿಗಳ ವಿರುದ್ಧ ಲಯವಿಲ್ಲದ ವಾಗ್ದಾಳಿ ಮಾಡುವುದಿಲ್ಲ. ಇಬ್ಬರಲ್ಲೂ ಇರುವ ರಾಜಕೀಯ ಪ್ರಬುದ್ಧತೆ ವಾಕ್ಸಮರ ನಡೆಯದಂತೆ ಪರಿಣಾಮ ಬೀರಿದೆ. ಪುಟ್ಟರಂಗಶೆಟ್ಟಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ ಕೇಳುತ್ತಿದ್ದಾರೆ. ಸೋಮಣ್ಣ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆಂದು ಹೇಳುತ್ತಾರೆ. ಇಷ್ಟರಲ್ಲೇ ನಾಯಕರ ಹೇಳಿಕೆ-ಪ್ರತಿ ಹೇಳಿಕೆಗಳು ಹೊರಬೀಳುತ್ತಿವೆ. ಲಿತಾಂಶವನ್ನು ಮತದಾರರು ತೀರ್ಮಾನ ಮಾಡ್ತಾರೆ ಎನ್ನುವುದಷ್ಟೇ ಇಬ್ಬರ ಒಮ್ಮತದ ಹೇಳಿಕೆ.


    ಇದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೂ ಅನ್ವಯಿಸುತ್ತಿದೆ. ಪುಟ್ಟರಂಗಶೆಟ್ಟಿ ಪರ ಮತ ಪ್ರಚಾರ ಮಾಡುತ್ತಿರುವ ನಾಯಕರು, ಸೋಮಣ್ಣ ಗೆಲುವಿಗಾಗಿ ಕೆಲಸ ಮಾಡುತ್ತಿರುವ ಮುಖಂಡರು ಎಲ್ಲೂ ನಾಲಿಗೆ ಹರಿಬಿಡುತ್ತಿಲ್ಲ. ತಮ್ಮ ಪಾಡಿಗೆ ತಮ್ಮ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಯಕರ್ತರ ವಲಯದಲ್ಲಿ ಟೀಕೆ, ಟಿಪ್ಪಣಿಗಳು ಇವೆ. ಚುನಾವಣೆ ಕಾವೇರಿದಂತೆ ವಾಕ್ಸಮರ ಹೆಚ್ಚಾಗುವ ಸಾಧ್ಯತೆಯೂ ಇದ್ದು, ಅಭ್ಯರ್ಥಿಗಳಾದ ಸೋಮಣ್ಣ-ಪುಟ್ಟರಂಗಶೆಟ್ಟಿ ಅವರೇ ್ರೆಂಡ್ಲಿ ೈಟ್ ನಡೆಸುತ್ತಿರುವಾಗ ಕಾರ್ಯಕರ್ತರು ಜಗಳಕ್ಕೆ ಬೀಳುವುದರಲ್ಲಿ ಅರ್ಥವಿಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts