More

    ಹೈನುಗಾರಿಕೆಯಿಂದ ರೈತರ ಬದುಕು ಹಸನು


    ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ


    ಚನ್ನರಾಯಪಟ್ಟಣ: ಕೃಷಿಯೊಂದಿಗೆ ಹೈನುಗಾರಿಕೆ ಮಾಡುವುದರಿಂದ ರೈತರ ಬದುಕು ಉತ್ತಮವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


    ತಾಲೂಕಿನ ಎ.ಚೋಳೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಬಲ್ಕ್ ಮಿಲ್ಕ್ ಕೂಲಿಂಗ್ ಸೆಂಟರ್(ಬಿಎಂಸಿ) ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 20-25 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದ ಪರಿಣಾಮ ರೈತರು ಹೈನುಗಾರಿಕೆ ಅವಲಂಬಿಸುವಂತಾಯಿತು. ಇದರಿಂದ ಮಕ್ಕಳ ಶಿಕ್ಷಣ, ಕೃಷಿ ಹಾಗೂ ಮನೆ ನಿರ್ವಹಣೆಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು ಎಂದರು.


    3-4 ವರ್ಷಗಳಿಂದ ಹಿರೀಸಾವೆ-ಜುಟ್ಟನಹಳ್ಳಿ, ನುಗ್ಗೇಹಳ್ಳಿ, ಬಾಗೂರು, ನವಿಲೆ ಹಾಗೂ ಕಲ್ಲೇಸೋಮನಹಳ್ಳಿ ಏತನೀರಾವರಿ ಯೋಜನೆಯಡಿ ತಾಲೂಕಿನ ನೂರಾರು ಕೆರೆಗಳನ್ನು ತುಂಬಿಸಲಾಗುತ್ತಿದ್ದು,ಅಂತರ್ಜಲ ಚೇತರಿಕೆ ಕಂಡಿದೆ. ಈ ಬಾರಿ ಪೂರ್ವ ಮುಂಗಾ ರಿನಿಂದಲೂ ನಿರೀಕ್ಷೆ ಮೀರಿದಂತೆ ಮಳೆಯಾಗುತ್ತಿದ್ದು ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ ಎಂದು ತಿಳಿಸಿದರು.


    ಸಂಘದ ಬಿಎಂಸಿ ಕಟ್ಟಡದ ನಿರ್ಮಾಣಕ್ಕೆ ಕೆಎಂಎಫ್ ವತಿಯಿಂದ 4.5 ಲಕ್ಷ ರೂ., ಹಾಸನ ಹಾಲು ಒಕ್ಕೂಟದಿಂದ 2 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.5 ಲಕ್ಷ ರೂ. ಸಹಾಯಧನ ಲಭ್ಯವಾಗಲಿದ್ದು ಉಳಿಕೆ ಮೊತ್ತವನ್ನು ಸಂಘದಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.


    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ಆರ್‌ಎಂಸಿ ನಿರ್ದೇಶಕ ಅನಿಲ್‌ಕುಮಾರ್, ಸಂಘದ ಉಪಾಧ್ಯಕ್ಷ ರಮೇಶ್, ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಸಿ.ಸಿ.ಯೋಗೇಶ್, ಕಾರ್ಯದರ್ಶಿ ಭರತ್‌ಕುಮಾರ್, ನಿರ್ದೇಶಕರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts