More

    ಹೇಮೆ ಸ್ವಾಗತಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಸಿದ್ಧ

    ತುಮಕೂರು: ದೇವಾಲಯದ ಸುತ್ತ ಸ್ವಚ್ಛಗೊಳಿಸಲು ಸಮಾನ ಮನಸ್ಕ ಯುವಕರ ಗುಂಪು ಆರಂಭಿಸಿದ ಅಭಿಯಾನವೇ ಈಗ ದೊಡ್ಡದಾಗಿ ನೂರಾರು ಜನರ ಸಹಕಾರದಿಂದ ಕೆರೆಯನ್ನೇ ಸ್ವಚ್ಛಗೊಳಿಸುವ ಸಂಕಲ್ಪವಾಗಿ ಮಾರ್ಪಾಡಾಗಿದೆ.

    ಕೆಲವೇ ದಿನಗಳಲ್ಲಿ ಹೇಮಾವತಿಯಿಂದ ಮೈತುಂಬಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಕೆರೆಯಲ್ಲಿ 10 ಜೆಸಿಬಿ, ಒಂದು ಹಿಟಾಚಿ ಸದ್ದು ಮಾಡಲಾರಂಭಿಸಿದೆ, ಸ್ಥಳೀಯರೇ ಸ್ವಂತ ಹಣದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
    ಸಾಸಲು ಕೆರೆಗೆ ಸರಾಗವಾಗಿ ಹೇಮಾವತಿ ಹರಿಯಲಾರಂಭಿಸಿದ್ದು ಇಲ್ಲಿಂದ ಮುಂದೆ ಶೆಟ್ಟೆಕೆರೆ ಕೆರೆಗೆ ಹರಿಯಲಿದೆ. ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಈ ಕೆರೆಗೆ ಮುಂದಿನ 20 ದಿನದೊಳಗೆ ಹೇಮಾವತಿ ಬರುವ ಸಾಧ್ಯತೆಯಿದ್ದು ಅದಕ್ಕೂ ಪೂರ್ವದಲ್ಲಿ ಕೆರೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಚಗೊಳಿಸಲು ಜನರೇ ಮುಂದಾಗಿದ್ದಾರೆ, ಸ್ವಂತ ಖರ್ಚಿನಲ್ಲಿಯೇ ಅನುಪಯುಕ್ತ ಗಿಡ, ಮರಗಳನ್ನು ತೆಗೆಯುವ ಕಾರ್ಯ ಭರದಿಂದ ನಡೆದಿದೆ.

    10 ವರ್ಷದ ನಂತರ ಕೆರೆಗೆ ನೀರು!: 71.83 ಎಂಸಿಎ್ಟಿ ನೀರಿನ ಸಾಮರ್ಥ್ಯದ ಕೆರೆ ಇಲ್ಲಿಯವರೆಗೂ ಮಳೆಯ ನೀರನ್ನೇ ಆಶ್ರಯಿಸಿದ್ದು ಕೋಡಿ ಹರಿದಿದ್ದು 2010ರಲ್ಲಿ, 10 ವರ್ಷದಿಂದ ಒಣಗಿ ನಿಂತಿರುವ ಶೆಟ್ಟಿಕೆರೆ ಕೆರೆಗೆ ಈಗ ಹೇಮಾವತಿಯಿಂದ ಮರು ಜೀವಬರಲಿದೆ. ಅಡಕೆ, ತೆಂಗು ಉಳಿಸಿಕೊಳ್ಳಲು ಕೊಳವೆಬಾವಿ ಮೊರೆ ಹೋಗಿದ್ದ ಈ ಭಾಗದ ರೈತರು ಲಕ್ಷಾಂತರ ರೂ. ಕಳೆದುಕೊಂಡು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈಗ ಕೆರೆಗೆ ನೀರು ಬರುವುದರಿಂದ ಸಾವಿರಾರು ರೈತರ ಬದುಕು ಹಸನಾಗುವ ಹಿನ್ನೆಲೆಯಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೆರೆ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ.

    ಅಭಿಯಾನ ಆರಂಭವಾಗಿದ್ದು ಹೇಗೆ?: ಕರೊನಾ ಕಾರಣಕ್ಕೆ ಕಳೆದ ಆರು ತಿಂಗಳಿನಿಂದ ಗ್ರಾಮದಲ್ಲಿಯೇ ಉಳಿದಿರುವ ಸ್‌ಟಾ ವೇರ್ ಇಂಜಿನಿಯರ್ ಪ್ರಶಾಂತ್ ಹಾಗೂ ಅವರ ಯುವ ಮಿತ್ರರು ವಿಶೇಷ ಆಸಕ್ತಿಯ ಹಿನ್ನೆಲೆಯಲ್ಲಿ ಹೇಮೆಯನ್ನು ಸ್ವಾಗತಿಸಲು ಗ್ರಾಮದ ದೇವಾಲಯದ ಸುತ್ತಮುತ್ತ ಸ್ವಚ್ಛಗೊಳಿಸಲು ಅಭಿಯಾನ ಆರಂಭಿಸಿದರು. ಇದೇ ಈಗ ರೂಪಾಂತರವಾಗಿದ್ದು ಸ್ಥಳೀಯರ ಸಹಕಾರದಿಂದ ಕೆರೆಯಲ್ಲಿರುವ ಜಂಗಲ್ ತೆಗೆಸಲು ಮುಂದಾಗಿದೆ. ಈ ಅಭಿಯಾನಕ್ಕೆ ಪ್ರಸ್ತುತ ನೂರಾರು ಜನರು ಹಣ ನೀಡಿದ್ದು 100ರೂಪಾಯಿಂದ 10 ಸಾವಿರ ರೂಪಾಯಿ ವರೆಗೂ ನೆರವು ನೀಡಿದ್ದಾರೆ. ಮೊದಲ ದಿನವೇ 40 ಸಾವಿರ ಸಂಗ್ರಹವಾಗಿದೆ. ಶೆಟ್ಟಿಕೆರೆಯಲ್ಲಿ ಸಾಕಷ್ಟು ಸ್ಥಿತಿವಂತರಿದ್ದು ಅಭಿಯಾನಕ್ಕೆ ಕೈಜೋಡಿಸುವ ಭರವಸೆ ಪ್ರಶಾಂತ್ ಹಾಗೂ ಅವರ ಸ್ನೇಹಿತರದ್ದಾಗಿದೆ.

    ಸಚಿವರಿದ್ದರೂ ಅನುದಾನಕ್ಕೆ ಕೊರತೆಯೇ?: ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರದಲ್ಲಿ ಕೆರೆ ಸ್ವಚ್ಛಗೊಳಿಸಲು ಜನರೇ ಹಣ ಹಾಕುತ್ತಿರುವುದು ಆಶ್ಚರ್ಯ ಮೂಡಿಸಿದೆ. ಇಲಾಖೆ ಇಂಜಿನಿಯರ್‌ಗಳು ಮಾಡಿಸಬೇಕಾದ ಕೆಲಸವನ್ನು ಜನರೇ ಮಾಡುತ್ತಿದ್ದಾರೆ. ನಾನ್ ಪ್ಲಾನಿಂಗ್‌ನಲ್ಲಿ ಸಾಕಷ್ಟು ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರಿಗಳು ಈ ಸಾರ್ಥಕ ಕೆಲಸ ಮಾಡಿಸಲು ಮೀನಮೇಷ ಎಣಿಸುತ್ತಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಈಗಲಾದರೂ ಸರ್ಕಾರ ಸ್ಥಳೀಯರ ಆಸಕ್ತಿಗೆ ಅನುದಾನದ ಆಸರೆ ನೀಡಬೇಕಿದೆ.

    ಸಚಿವರಿದ್ದರೂ ಅನುದಾನಕ್ಕೆ ಕೊರತೆಯೇ?: ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರದಲ್ಲಿ ಕೆರೆ ಸ್ವಚ್ಛಗೊಳಿಸಲು ಜನರೇ ಹಣ ಹಾಕುತ್ತಿರುವುದು ಆಶ್ಚರ್ಯ ಮೂಡಿಸಿದೆ. ಇಲಾಖೆ ಇಂಜಿನಿಯರ್‌ಗಳು ಮಾಡಿಸಬೇಕಾದ ಕೆಲಸವನ್ನು ಜನರೇ ಮಾಡುತ್ತಿದ್ದಾರೆ. ನಾನ್ ಪ್ಲಾನಿಂಗ್‌ನಲ್ಲಿ ಸಾಕಷ್ಟು ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರಿಗಳು ಈ ಸಾರ್ಥಕ ಕೆಲಸ ಮಾಡಿಸಲು ಮೀನಮೇಷ ಎಣಿಸುತ್ತಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಈಗಲಾದರೂ ಸರ್ಕಾರ ಸ್ಥಳೀಯರ ಆಸಕ್ತಿಗೆ ಅನುದಾನದ ಆಸರೆ ನೀಡಬೇಕಿದೆ.

    ಸಾಕಷ್ಟು ವರ್ಷದ ಬರ ಈ ಭಾಗದ ಜನರ ಬದುಕು ಕಿತ್ತುಕೊಂಡಿದೆ, ತೋಟ ಉಳಿಸಿಕೊಳ್ಳಲು ಕೊರೆಸಿದ ಸಾವಿರಾರು ಕೊಳವೆಬಾವಿಗಳು ಜನರನ್ನು ಬಡವರನ್ನಾಗಿಸಿದೆ. ಸಾಕಷ್ಟು ಜನರ ಶ್ರಮದಿಂದ ನಮ್ಮೂರಿನ ಕೆರೆಗೆ ನೀರು ಬರುತ್ತಿದ್ದು ಈ ಸಂದರ್ಭದಲ್ಲಿ ಕೆರೆ ಸ್ವಚ್ಛಗೊಳಿಸಲು ಸಣ್ಣದಾಗಿ ಆರಂಭಿಸಿದ ಅಭಿಯಾನಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ, ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛಗೊಳಿಸುತ್ತೇವೆ.
    ಪ್ರಶಾಂತ್ ಸ್‌ಟಾವೇರ್ ಇಂಜಿನಿಯರ್, ಶೆಟ್ಟಿಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts