More

    ಹೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ

    ಬ್ಯಾಡಗಿ: ಕಾಗಿನೆಲೆ ವಿದ್ಯುತ್ ಪರಿವರ್ತಕ ಕೇಂದ್ರದಿಂದ ರೈತರ ಪಂಪ್​ಸೆಟ್​ಗಳಿಗೆ ಎರಡು ದಿನಕ್ಕೊಮ್ಮೆ ವಿದ್ಯುತ್ ಪೂರೈಸುವುದನ್ನು ಖಂಡಿಸಿ ತಾಲೂಕು ರೈತ ಸಂಘ ಹಾಗೂ ಚಿಕ್ಕಬಾಸೂರು, ಘಾಳಪೂಜಿ, ದುಮ್ಮಿಹಾಳ, ಗುಡ್ಡದಮಲ್ಲಾಪುರ ಗ್ರಾಮಸ್ಥರು ಹೆಸ್ಕಾಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ತಾಲೂಕಿನ ಅರಬಗೊಂಡ ವಿದ್ಯುತ್ ಪರಿವರ್ತಕ ಸೇರಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ 8 ತಾಸು ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಕಾಗಿನೆಲೆ ವಿದ್ಯುತ್ ಕೇಂದ್ರದಲ್ಲಿ ಎರಡು ದಿನಕ್ಕೊಮ್ಮೆ ವಿದ್ಯುತ್ ಪೂರೈಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ರೈತರಿಗೆ ಸಮರ್ಪಕ ಬೆಳೆ ಪರಿಹಾರ ಬಿಡುಗಡೆಯಾಗುತ್ತಿಲ್ಲ. ವಾರದಿಂದ ಪಹಣಿ ಪತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ ರೈತರೊಂದಿಗೆ ಸಂಧಾನಕ್ಕೆ ಯತ್ನಿಸಿದರು. ಓವರ್​ಲೋಡ್ ಸಮಸ್ಯೆಯಿಂದ ಟಿಸಿಗಳು ಕೈಕೊಡುತ್ತಿವೆ. ಮೇಲ್ಮಟ್ಟದಿಂದ ವ್ಯವಸ್ಥೆ ಸರಿಪಡಿಸಲು ಈಗಾಗಲೇ ಪತ್ರ ಬರೆಯಲಾಗಿದೆ. ಗುರುವಾರದಿಂದ ಪ್ರತಿದಿನ ತ್ರಿಫೇಸ್ ವಿದ್ಯುತ್ ಪೂರೈಸಲಾಗುವುದು. ವಾರದ ಬಳಿಕ ಬೆಳಗ್ಗೆ 6 ರಿಂದ 12 ಗಂಟೆ ಹಾಗೂ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ದಿನವೂ 7 ತಾಸು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

    ರೈತರಾದ ರುದ್ರಗೌಡ್ರ ಕಾಡನಗೌಡ್ರ, ಘಾಳಪೂಜಿ ಗ್ರಾಪಂ ಅಧ್ಯಕ್ಷ ಗಂಗಾಧರಗೌಡ್ರ ದೊಡ್ಡಗೌಡ್ರ, ಶಿವಲಿಂಗಪ್ಪ ನವಲಿ, ಮೃತ್ಯುಂಜಯ ನವಲಿ, ಸಿದ್ದಪ್ಪ ಅಜಗೊಂಡ್ರ, ಬಸವರಾಜ ಅಜಗೊಂಡ್ರ, ಮುರ್ತಜಾ ಹಜ್ಜಪ್ಪಳವರ, ನಿಂಗಪ್ಪ ಮಾಸಣಗಿ, ಮಲ್ಲೇಶ ಡಂಬಳ, ಷಣ್ಮುಖಪ್ಪ ಚಿಕ್ಕಬಾಸೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts