More

    ಹೆಸರು ಖರೀದಿ ಕೇಂದ್ರ ಆರಂಭಕ್ಕೆ ಅಧಿಸೂಚನೆ

    ಲಕ್ಷೆ್ಮೕಶ್ವರ: ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ್ರು ಎಂಬಂತೆ ಈಗ ರಾಜ್ಯ ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಿದೆ. ಆದರೆ, ಇನ್ನೂ ಹೆಸರು ಮಾರಾಟ ಮಾಡದ ರೈತರಿಗೆ ಕೊಂಚ ನೆಮ್ಮದಿ ತಂದಿದೆ.

    ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ 7196 ರೂ.ಗಳ ಬೆಂಬಲ ಬೆಲೆಯಡಿ ಖರೀದಿಸಲು 2020ರ ಸೆಪ್ಟೆಂಬರ್ 14ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸೆ.15ರಿಂದಲೇ ಬೆಂಬಲಬೆಲೆಯಡಿ ಹೆಸರು ಖರೀದಿ ಪ್ರಾರಂಭಿಸಲು ಸೂಚಿಸಲಾಗಿದೆ. ಈ ಅಧಿಸೂಚನೆ ಪ್ರಕಾರ ಒಟ್ಟು 90 ದಿನಗಳ ಕಾಲ ಈ ಖರೀದಿ ಪ್ರಕ್ರಿಯೆ ನಡೆಯಲಿದೆ. 30 ದಿನಗಳ ಕಾಲ ರೈತರು ತಮ್ಮ ಬೆಳೆ ಮಾರಾಟಕ್ಕೆ ತರಲು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡುವುದಕ್ಕೆ ಅವಕಾಶವಿದೆ. ಅದರಂತೆ ಅಲ್ಲಿಂದ 60 ದಿನಗಳ ಕಾಲ ಖರೀದಿ ಮಾಡಲಾಗುವುದು. ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿದೆ.

    ಪ್ರತಿ ರೈತರಿಂದ ಕನಿಷ್ಠ 10 ಕ್ವಿಂಟಾಲ್ ಹೆಸರನ್ನಾದರೂ ಖರೀದಿಸಬೇಕು. ಇಲ್ಲದಿದ್ದರೆ ಖರೀದಿ ಕೇಂದ್ರ ಪ್ರಾರಂಭಿಸುವುದೇ ಬೇಡ ಸರ್ಕಾರದ ಈ ಕ್ರಮ ಖಂಡನೀಯ.

    | ಪದ್ಮರಾಜ ಪಾಟೀಲ

    ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ

    ಸೆ. 18ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವ ಸ್ಥಳ ಮತ್ತು ದಿನಾಂಕಗಳನ್ನೊಳಗೊಂಡ ಪೂರ್ಣ ಮಾಹಿತಿ ಪ್ರಕಟಿಸಲಾಗುವುದು.

    | ಡಿ.ಬಿ. ಡೊಕ್ಕಣ್ಣನವರ

    ವ್ಯವಸ್ಥಾಪಕ, ಜಿಲ್ಲಾ ಕೆಎಸ್​ಸಿಎಂಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts