More

    ಹೆಲ್ಪ್​ಡೆಸ್ಕ್ ಆರಂಭಿಸಲು ಸೂಚನೆ

    ಹಳಿಯಾಳ: ಕೋವಿಡ್-ಕೇರ್ ಸೆಂಟರ್​ನಲ್ಲಿರುವ ಸೋಂಕಿತರ ಆರೋಗ್ಯ ಕುರಿತು ಮಾಹಿತಿಯನ್ನು ಅವರ ಕುಟುಂಬದವರೊಂದಿಗೆ ಹಂಚಿ ಕೊಳ್ಳಲು ಹಾಗೂ ಕುಟುಂಬದ ಸಂದೇಶವನ್ನು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ತಿಳಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

    ಸೋಮವಾರ ಸಂಜೆ ಮಿನಿ ವಿಧಾ ಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಕರೊನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯ ಬದಲು ಭಯವಿದೆ. ಹೀಗಿರುವಾಗ ಕೋವಿಡ್ ಚಿಕಿತ್ಸಗೆ ತೆರಳಿದವರ ಹಾಗೂ ಅವರ ಕುಟುಂಬದವರಲ್ಲಿ ಮೂಡಿರುವ ಭಯ ಆತಂಕವನ್ನು ದೂರ ಮಾಡುವ ಪ್ರಯತ್ನ ಆಗಬೇಕಾಗಿದೆ ಎಂದರು.

    ಸೋಂಕಿತ ಮತ್ತು ಅವರ ಕುಟುಂಬದವರ ನಡುವೆ ಸಂಹವನ ನಡೆಸುವುದಕ್ಕಾಗಿ ಜಿಲ್ಲೆಯಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದು, ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೆನೆ ಎಂದರು.

    ರ್ಯಾಪಿಡ್ ಟೆಸ್ಟ್ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ, ಅದಕ್ಕಾಗಿ ಹಳಿಯಾಳ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿ 1500 ರ್ಯಾಪಿಡ್ ಟೆಸ್ಟ್ ಮಾಪಕಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಇನ್ನೆರೆಡು ದಿನಗಳಲ್ಲಿ ಈ ಮಾಪಕಗಳು ಬರಲಿವೆ. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿ ಕೊಳ್ಳಲಿ ಎಂದರು.

    ಸೇನಾನಿಗಳಿಗೆ ಪ್ರೋತ್ಸಾಹ: ಕರೊನಾ ಸೇನಾನಿಗಳಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಕಂದಾಯ, ಪೊಲೀಸ್, ಶಿಶು ಅಭಿವೃದ್ಧಿ, ಶಿಕ್ಷಣ ಇಲಾಖೆಗಳ ಸೇವೆಯು ಅಭಿನಂದನಾರ್ಹವಾಗಿದೆ. ರಾಜ್ಯ ಸರ್ಕಾರವು ಕರೊನಾ ಸೇನಾನಿಗಳ ಸೇವೆಯನ್ನು ಗುರುತಿಸಿ ಪ್ರಶಂಸಿಸುತ್ತಿದೆ. ಆದರೆ ಪ್ರಶಂಸೆಯ ಜೊತೆಯಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ಇನ್ಸೆಟಿವ್ ನೀಡಬೇಕಾದ ಅವಶ್ಯಕತೆಯಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಕರೊನಾ ಸೇನಾನಿಗಳಿಗೆ ಇನ್ಸೆಟಿವ್ ನೀಡಲು ಮುಂದಾಗಬೇಕು ಎಂದರು.

    ಸುದ್ದಿಗೋಷ್ಠಿಯಲ್ಲಿ ವಿ.ಪ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾ.ಪಂ ಅಧ್ಯಕ್ಷೆ ರೀಟಾ ಸಿದ್ದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ್ ಕೊರ್ವೆಕರ, ಹಳಿಯಾಳ ಮತ್ತು ಜೋಯಿಡಾ ಜಿ.ಪಂ ಸದಸ್ಯರು ಇದ್ದರು.

    ಆಶ್ರಯ ಹಣ ಬಾಕಿ: ಹಳಿಯಾಳ ತಾಲೂಕಿನಲ್ಲಿ 5.62ಕೋಟಿ ಹಾಗೂ ಜೋಯಿಡಾ ತಾಲೂಕಿನಲ್ಲಿ 1.17ಕೋಟಿ ಆಶ್ರಯ ಬಾಕಿ ಅನುದಾನ ಬರಬೇಕಾಗಿದ್ದು, ವಸತಿ ಸಚಿವರಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದೆನೆ ಎಂದರು. ಕೋವಿಡ್ ಅವದಿಯಲ್ಲಿ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ನೀಡಲು ಘೊಷಿಸಿದ ಪರಿಹಾರ ಧನದ ಯೋಜನೆಯಲ್ಲಿ ಹಳಿಯಾಳ ತಾಲೂಕಿನ ಬೆಳೆಗಾರರಿಗೆ 11.71ಲಕ್ಷ ಪರಿಹಾರ ಬರಬೇಕಾಗಿದೆ. ಹಳಿಯಾಳದಲ್ಲಿ ಜಿ-ಪ್ಲಸ್ 2 ವಸತಿ ಯೋಜನೆಯು ಅಂತೀಮ ಹಂತದಲ್ಲಿದ್ದು, ಅದನ್ನು ಅತೀ ಶೀಘ್ರವೇ ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts