More

    ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಿ | ಚಿತ್ರ ನಟಿ ಅನುಪ್ರಭಾಕರ ಸಲಹೆ

    ಜಮಖಂಡಿ: ಹೆಣ್ಣು ಶಕ್ತಿಯಾಗಿದ್ದು, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಂಡರೆ ಮನೆ ಬೆಳಗುತ್ತದೆ. ಮಹಿಳೆಯರಿಗೆ ಶಿಕ್ಷಣ ಬಹಳ ಮುಖ್ಯ. ಕಷ್ಟದಲ್ಲಿ ಶಿಕ್ಷಣ ಕೈಹಿಡಿಯುತ್ತದೆ, ಮನೆಗೆಲಸದ ಜೊತೆ ಪಾಲಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಟಿ ಅನುಪ್ರಭಾಕರ ಹೇಳಿದರು.
    ನಗರದ ಬಸವ ಭವನದಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಹಿಳೆಯರು ಇನ್ನೊಬ್ಬರ ಬಗ್ಗೆ ಅಸೂಯೆ ಪಡುವುದನ್ನು ಬಿಟ್ಟು ಒಗ್ಗಟ್ಟಿನಿಂದ ಇರಬೇಕು. ಹೆಣ್ಣು ಇದ್ದಕಡೆ ಸ್ನೇಹ, ಬಾಂಧವ್ಯವಿದೆ ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕು. ಮನೆಯಲ್ಲಿ ಹೆಣ್ಣನ್ನು ಗೌರವಿಸುವುದನ್ನು ಗಂಡುಮಕ್ಕಳಿಗೆ ಕಲಿಸಿದರೆ ಸಮಾಜ ತನ್ನಿಂದ ತಾನೇ ಸುಧಾರಣೆಯಾಗುತ್ತದೆ. ಪ್ರತಿಯೊಬ್ಬ ಪುರುಷ ಮಹಿಳೆಯರಿಗೆ ಬೆಂಬಲ ನೀಡಬೇಕು. ಹೆಣ್ಣು ಮಕ್ಕಳು ಸಂಸಾರದ ಜೊತೆ ಉಳಿತಾಯ ಮಾಡುವುದನ್ನು ಕಲಿಯಬೇಕು. ನೀವು ಮಾಡಿರುವ ಉಳಿತಾಯ ಮಾಡುವ ಹಣ ಕಷ್ಟಕಾಲದಲ್ಲಿ ಸಹಾಯವಾಗುತ್ತದೆ ಎಂದರು.

    ಬಿಜೆಪಿ ಮುಖಂಡ, ನಾಡೋಜ ಜಗದೀಶ ಗುಡಗುಂಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಚಿಕ್ಕವರಿದ್ದಾಗ ತಂದೆಯಾಸರೆ, ಮದುವೆಯ ನಂತರ ಗಂಡನಾಸರೆ, ವಯಸ್ಸಾದ ಮೇಲೆ ಮಕ್ಕಳಾಸರೆ ಪಡೆಯದೆ ಸ್ವಂತ ನಿರ್ಧಾರ ತೆಗೆದುಕೊಂಡು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.
    ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸುನಂದಾ ಶಿರೂರ, ವರ್ಷಾ ಹಿರೇಮಠ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ವಿಜಯಲಕ್ಷ್ಮೀ ಉಕುಮನಾಳ ಮಾತನಾಡಿದರು.

    ವೇದಿಕೆಯಲ್ಲಿ ಸುನಂದಮ್ಮ ತಾಯಿ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ರಾಜ್ಯ ಮಾಳಿ ಸಮಾಜದ ಅಧ್ಯಕ್ಷ ಕಾಡು ಮಾಳಿ, ಸುರೇಶಗೌಡ ಪಾಟೀಲ, ರಾಜೇಶ್ವರಿ ಹಿರೇಮಠ, ಶಂಕರ ಹಣಗಂಡಿ, ವಾದಿರಾಜ ದೇಶಪಾಂಡೆ ಇತರರಿದ್ದರು.

    ರಕ್ಷಿತಾ ಕರಡಿ ವಚನ ಪ್ರಾರ್ಥನೆ ಮಾಡಿದರು. ದಾನೇಶ್ವರಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಛಾಯಾ ಕೋಪರ್ಡೆ ಸ್ವಾಗತಿಸಿದರು. ಚಂದ್ರಕಲಾ ತುಪ್ಪದ ನಿರೂಪಿಸಿದರು. ಸಾವಿತ್ರಿ ಗೊರನಾಳ ವಂದಿಸಿದರು.

    ದೇಸಾಯಿ ಸರ್ಕಲ್‌ನಿಂದ ಬಸವ ಭವನದವರೆಗೆ ಚಿತ್ರನಟಿ ಅನುಪ್ರಭಾಕರ ಅವರನ್ನು ತೆರೆದ ವಾಹನದಲ್ಲಿ ವಾದ್ಯಮೇಳದೊಂದಿಗೆ ಮಹಿಳೆಯರು ಪುಷ್ಪಾರ್ಚನೆ ಮಾಡುತ್ತ ಭವ್ಯ ಮೆರವಣಿಗೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts