More

    ಹೆಚ್ಚು ಕಬ್ಬಿಣಾಂಶವಿರುವ ಆಹಾರ ಸೇವಿಸಿ

    ಕಮಲನಗರ: ಗಭರ್ಿಣಿಯರು, ಬಾಣಂತಿಯರು ಪ್ರತಿದಿನ ಊಟದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕೆಂದು ಕಮಲನಗರ ತಾಲೂಕು ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮೀ ಸ್ವಾಮಿ ಹೇಳಿದರು.

    ಹೊಳಸಮುದ್ರ ಗ್ರಾಮದ ಹೊರವಲಯದ ಮಹಾದೇವವಾಡಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನದಡಿ ಶುಕ್ರವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರದಲ್ಲಿ ಮಾತನಾಡಿದ ಅವರು, ಗಭರ್ಿಣಿಯರು ನಿತ್ಯ ಸೇವಿಸುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಸಾಮಾನ್ಯ ಮಹಿಳೆಗಿಂತ ಗಭರ್ಿಣಿಯರು ಮೂರು ಪಟ್ಟು ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವಿಸಬೇಕು. ಶಕ್ತಿ ನೀಡುವ ಪೋಷಕಾಂಶಗಳಿರುವ ಸಿರಿಧಾನ್ಯ, ಸೊಪ್ಪು, ತರಕಾರಿ, ಹಣ್ಣು, ಹಾಲು, ಮೊಸರು, ಮಜ್ಜಿಗೆ, ನುಗ್ಗೆಕಾಯಿ, ಬಟಾಣಿ ಸೇವಿಸುವುದರಿಂದ ಎಲ್ಲ ಪೋಷಕಾಂಶಗಳು ಲಭಿಸುತ್ತವೆ ಎಂದರು.

    ಗಭರ್ಿಣಿಯರಿಗೆ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಗರ್ಭದಲ್ಲಿರುವ ಭ್ರೂಣಕ್ಕೆ ಚೆನ್ನಾಗಿ ಕ್ಯಾಲ್ಸಿಯಂ ಪೂರೈಕೆಯಾದಾಗ ಶಿಶುವಿನ ಮೂಳೆಗಳು ಶಕ್ತಿಯುತವಾಗುತ್ತವೆ. ಹಲ್ಲುಗಳು ಬೆಳೆಯಲು ಸಹಕಾರಿಯಾಗುತ್ತದೆ. ಕಡಿಮೆ ಕ್ಯಾಲೋರಿಗಳಿರುವ ಆಹಾರ ಸೇವಿಸುವುದರಿಂದ ತಾಯಿ ದೇಹದಲ್ಲಿ ಜಿಡ್ಡಿನಾಂಶ ಅಧಿಕವಾಗಿ ಕೆರೋಟಿನ್ಸ್ ಉತ್ಪತ್ತಿಯಾಗುತ್ತದೆ. ಇದರಿಂದ ಬುದ್ಧಿಮಾಂಧ್ಯ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದರು.

    ಹೊಳಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಳರಾವ ಪಾಟೀಲ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕಾರ್ಯಕತರ್ೆಯರ ಪಾತ್ರ ದೊಡ್ಡದು. ಗಣರ್ಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಮಾತೃಪೂರ್ಣ ಯೋಜನೆಯಡಿ ನೀಡುತ್ತಿರುವ ಅನ್ನ, ತರಕಾರಿಯುಕ್ತ ಸಾಂಬಾರ, ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ ಸೇವಿಸಬೇಕು ಎಂದರು.

    ಗ್ರಾಪಂ ಉಪಾಧ್ಯಕ್ಷ ಸತೀಶ ಭೂರೆ, ರಾಹುಲ ಪಾಟೀಲ್, ಮಹಾದೇವ ಬೆಣ್ಣೆ, ಅಂಕುಶ ಗಾಯಕವಾಡ, ಅಂಗನವಾಡಿ ಕಾರ್ಯಕತರ್ೆಯರಾದ ಮಹಾದೇವಿ ನುದನೂರೆ, ನಂದಾ ವಡಗಿರೆ, ಶಿವಗಂಗಾ ಹಳಕೆ, ವಷರ್ಾ ಬಸನಾಳ, ಶಾಲಿವಾನ ಸಿರಸಗೆ, ಪದ್ಮಾವತಿ, ಚಿತ್ರಾಬಾಯಿ, ಲಕ್ಷ್ಮೀಬಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts