More

    ಹೆಚ್ಚು ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುವೆ

    ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿಗೆ ಹೆಚ್ಚಿನ ಅನುದಾನ ತಂದು ಈ ಭಾಗದ ಅಭಿವೃದ್ಧಿಯ ವೇಗ ಹೆಚ್ಚಿಸುವುದಲ್ಲದೇ ಹೊಸ ಹೊಸ ಯೋಜನೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರೂ ಆಗಿರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಭರವಸೆ ನೀಡಿದರು.
    ಮಂಡಳಿ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಈ ಭಾಗದ ಬಗ್ಗೆ ಹೆಚ್ಚಿನ ಗಮನಹರಿಸಿದ್ದು, ಹೆಚ್ಚಿನ ಅನುದಾನ ನೀಡುವಂತೆ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.
    ಸಂಸದ ಡಾ.ಉಮೇಶ್ ಜಾಧವ್ ಅವರು ಮಾತನಾಡಿ, ಇದೇ 5ರಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಯ ಕೋವಿಡ್ -19 ಲ್ಯಾಬ್ ಶುರುವಾಗಲಿದೆ. ಅದೇ ರೀತಿ ಇಎಸ್ಐಸಿಯಲ್ಲೂ ಲ್ಯಾಬ್ ಸ್ಥಾಪನೆ ಸಂಬಂಧ ಶೇ. 95 ಕೆಲಸ ಮುಗಿದಿದೆ. ಸದ್ಯದಲ್ಲೇ ಆರಂಭವಾಗಲಿದೆ. ಕೆಬಿಎನ್ ಆಸ್ಪತ್ರೆ ಸೇರಿ ಒಟ್ಟು 5 ಪ್ರಯೋಗಾಲಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
    ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚಿನಸೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಶಾಸಕ ಸುಭಾಷ್ ಗುತ್ತೇದಾರ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಮಂಡಳಿ ಕಾರ್ಯದರ್ಶಿಯೂ ಆದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ. ಪ್ರಸಾದ್, ಕಲಬುರಗಿ ಪೊಲೀಸ್ ಕಮೀಷನರ್ ಎನ್. ಸತೀಶ್ ಕುಮಾರ್, ಜಿಲ್ಲಾಧಿಕಾರಿ ಶರತ್ ಬಿ., ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಿಇಒ ಡಾ. ರಾಜಾ ಪಿ. ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಮಂಡಳಿಯ ಜಂಟಿ ನಿರ್ದೇಶಕರಾದ ಪ್ರವೀಣ್ ಪ್ರಿಯಾ ಡೇವಿಡ್ ಇದ್ದರು.
    ಎಚ್ಕೆಆರ್ ಡಿಬಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ. ಶಶೀಲ್ ನಮೋಶಿ, ಎಪಿಎಂಸಿ ಅಧ್ಯಕ್ಷ ಗುರುಬಸಪ್ಪ ಕಣಕಿ, ಉಪಾಧ್ಯಕ್ಷ ರಾಜಕುಮಾರ ಕೋಟೆ, ಮುಖಂಡರಾದ ದಯಾಘನ್ ಧಾರವಾಡಕರ್, ಹಣಮಂತರಾಯ ಮಲಾಜಿ, ರೇವಣಸಿದ್ದಪ್ಪ ಸಂಕಾಲಿ, ವಿಶಾಲ ದರ್ಗಿ , ಪ್ರಲ್ಹಾದ ಭಟ್ ಪೂಜಾರಿ, ಶರಣಬಸವಪ್ಪ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ ಓಕಳಿ, ರಾಜು ವಾಡೇಕರ್, ವಿಜಯಕುಮಾರ ಸೇವಲಾನಿ, ಸೂರಜಪ್ರಸಾದ ತಿವಾರಿ, ಶಿವಾನಂದ ಪಾಟೀಲ್ ಅಷ್ಟಗಿ, ಉದಯಕುಮಾರ ಜೇವರ್ಗಿ , ರಾಜು ದೇವದುರ್ಗ, ಮಲ್ಲಿನಾಥ ಪಾಟೀಲ್ ಯಲಗೋಡ, ಜಗನ್ನಾಥ ಮಾಲಿಪಾಟೀಲ್ ಅವರಾದ, ಮಂಜುರಡ್ಡಿ, ಸಂಗಮೇಶ ನಾಗನಹಳ್ಳಿ, ಬಸವರಾಜ ಪಾಟೀಲ್ ಕುಕನೂರ, ಶ್ರೀನಿವಾಸ ದೇಸಾಯಿ, ಅಪ್ಪಾಸಾಹೇಬ ಪಾಟೀಲ್, ಶಿವುಸ್ವಾಮಿ, ಸಾಲಿಮಠ ಸೇರಿ ಶುಭ ಹಾರೈಸಿದರು.
    ಮಂಡಳಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ ಮತ್ತು ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್ ಅವರು ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆ ನಡೆಸಿಕೊಟ್ಟು ಶುಭ ಕೋರಿದರು.
    ಕರೊನಾ ನಿಯಂತ್ರಣಕ್ಕೆ ಮಂಡಳಿ ಸಾಥ್
    ಕರೊನಾ ಓಡಿಸಲು ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಯಾವ ತೆರನಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನೆರವು ನೀಡಬಹುದು ಎಂಬುದರ ಕುರಿತು ಚರ್ಚೆ ನಡೆಸಿ ಹೆಜ್ಜೆ ಇಡಲಾಗುವುದು. ಅಲ್ಲದೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮಂಡಳಿ ನೂತನ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts