More

    ಹೆಕ್ಟೇರ್​ಗೆ ರು. 50 ಸಾವಿರ ಪರಿಹಾರ ನೀಡಿ

    ಆಳಂದ: ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಸಮೀಕ್ಷೆ ನಡೆಸಿ ಪ್ರತಿ ಹೆಕ್ಟೇರ್​ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದರು.

    ಪಟ್ಟಣದ ಹಳೇ ಚೆಕ್ ಪೋಸ್ಟ್​ನಿಂದ ಸಂಗೋಳಗಿ ಮಾರ್ಗವಾಗಿ ಅಮರ್ಜಾ ಅಣೆಕಟ್ಟೆವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಸೋಮವಾರ ಪಾದಯಾತ್ರೆ ನಡೆಸಿ, ಬಾಗಿನ ಅರ್ಪಸಿ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿದ್ದು, ಹೆಸರು, ಉದ್ದು, ಎಳ್ಳು, ಸಜ್ಜೆ, ತೊಗರಿ, ಸೋಯಾಬೀನ್, ಶೇಂಗಾ ಬೆಳೆಗಳು ಹಾಳಾಗಿವೆ. ಸಾಕಷ್ಟು ರೈತರು ಫಸಲ್ ಬಿಮಾ ಯೋಜನೆಯಡಿ ವಿಮೆ ತುಂಬಿದ್ದು, ಇದೀಗ ಅನ್ನದಾತರ ನೆರವಿಗೆ ಬರಬೇಕಿದೆ ಎಂದು ಆಗ್ರಹಿಸಿದರು.

    ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ್ ಕೋರಳ್ಳಿ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಜಿಲ್ಲಾ ಕಾಂಗ್ರೆಸ್ ಮುಖಂಡ ಮಜರ್ ಹುಸೇನ್, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್ ಚಿತಲಿ, ಪ್ರಮುಖರಾದ ಶಂಕರರಾವ ದೇಶಮುಖ, ಲಿಂಗರಾಜ ಪಾಟೀಲ್, ವೈಜುನಾಥ ಪಾಟೀಲ್, ಗಣೇಶ ಪಾಟೀಲ್, ಜಯಚಿತ್ರ ವೇದಶೆಟ್ಟಿ, ಸುಭಾಷ ಪೋಜಿ, ರಾಜಶೇಖರ ಎಕಂಚಿ, ರವೀಂದ್ರ ಕೋರಳ್ಳಿ, ಮಲ್ಲಿನಾಥ ಹತ್ತರಕಿ, ಮಲ್ಲಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts