More

    ಹೂ ಬಿಡುವ ಮುಂಚೆ ಕಳೆ ಕೀಳಿ

    ಚಿಕ್ಕಮಗಳೂರು: ಪಾರ್ಥೇನಿಯಂ ಬೆಳೆಯನ್ನೇ ಆಪೋಷಣೆ ತೆಗೆದುಕೊಳ್ಳುತ್ತದೆ. ವಿಷಕಾರಿ ಕಳೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹರಡುವುದನ್ನು ತಡೆಯಬೇಕು. ಚೆನ್ನಾಗಿ ಕಳಿತ ಗೊಬ್ಬರವನ್ನು ಉಪಯೋಗಿಸಿದರೆ ಕಳೆ ಮೊಳಕೆಯೊಡೆಯುವುದು ಕಡಿಮೆಯಾಗುತ್ತದೆ ಎಂದು ಕೆವಿಕೆ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ ಹೇಳಿದರು. ಪಾರ್ಥೇನಿಯಂ ನಿಮೂಲನಾ ಸಪ್ತಾಹ ಅಂಗವಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೂ ಬಿಡುವ ಮುಂಚೆ ಕಿತ್ತು ಹಾಕುವುದರಿಂದ ಬೀಜೋತ್ಪಾದನೆ ಕಡಿಮೆಯಾಗಿ ಕಳೆ ವೃದ್ಧಿಯಾಗುವುದಿಲ್ಲ ಎಂದು ತಿಳಿಸಿದರು.

    ಕುಡಗೋಲಿನಲ್ಲಿ ಗಿಡವನ್ನು ಬುಡ ಕೊಯ್ದರೆ ಅದು ಮತ್ತೆ ಚಿಗುರುತ್ತದೆ. ಹಾಗಾಗಿ ಗುದ್ದಲಿಯಿಂದ ಬುಡ ಸಮೇತ ಕೀಳಬೇಕು. ಕೈಚೀಲ ಹಾಕಿಕೊಂಡು ಹಾಗೂ ಮೈಯನ್ನು ಚೆನ್ನಾಗಿ ಮುಚ್ಚಿಕೊಂಡು ಕೀಳಬೇಕು. ಕಳೆ ಚಿಕ್ಕದಿರುವಾಗ, ನಿಯಂತ್ರಣ ಸುಲಭ ಹಾಗೂ ಖರ್ಚು ಕಡಿಮೆ ಎಂದರು.

    ಪಾರ್ಥೇನಿಯಂ ಕಳೆ ನಿರ್ವಹಣೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ವಿಜ್ಞಾನಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಪಾರ್ಥೇನಿಯಂ ನಿಮೂಲನೆಯ ಅರಿವು ಮೂಡಿಸಿದರು. ಕೇಂದ್ರದ ಆವರಣದ ಹಾಗೂ ರಸ್ತೆಬದಿ ಪಾರ್ಥೇನಿಯಂ ಕಳೆ ಸ್ವಚ್ಛಗೊಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts