More

    ಹೂವಿಗೆ ಬೆಲೆ ಇಲ್ಲದೆ ಗುಲಾಬಿ ಗಿಡಕ್ಕೆ ಕತ್ತರಿ; ಲಾಕ್‌ಡೌನ್ ಎೆಕ್ಟ್, ಮಾರಾಟಕ್ಕೆ ಅಡ್ಡಿ

    ಚನ್ನರಾಯಪಟ್ಟಣ: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ದೇಶವನ್ನು ಲಾಕ್‌ಡೌನ್ ಮಾಡಿರುವ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಗುಲಾಬಿ ಬೆಳೆಗಾರರು, ಹೂವು ಬಿಡುತ್ತಿರುವ ಗಿಡಗಳನ್ನೇ ಕತ್ತರಿಸುತ್ತಿದ್ದಾರೆ.

    ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಸುತ್ತಮುತ್ತಲ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗುತ್ತಿದೆ. ಪ್ರತಿ ದಿನ ಈ ಭಾಗದಿಂದ ಗುಲಾಬಿ ತುಂಬಿಕೊಂಡು ಎರಡು ಲಾರಿಗಳು ಚೆನ್ನೈಗೆ ಹೋಗುತ್ತಿದ್ದವು. ದೇಶ ಲಾಕ್‌ಡೌನ್ ಆದ ನಂತರ ಈ ಲಾರಿಗಳು ಬರುತ್ತಿಲ್ಲ. ತೋಟಗಳಲ್ಲೇ ಹೂವು ಒಣಗುತ್ತಿವೆ.

    ಹೂವು ಬಿಡುತ್ತಿರುವ ಸಮಯ ಇದಾಗಿದ್ದರೂ, ಖರೀದಿ ಆಗುತ್ತಿಲ್ಲ. ಮಾರುಕಟ್ಟೆಗೆ ಹೂವು ಕೊಂಡೊಯ್ಯುವಂತಿಲ್ಲ. ಇದೇ ಪರಿಸ್ಥಿತಿ ಇನ್ನೆಷ್ಟು ದಿನವೋ? ಗಿಡಗಳನ್ನು ಹಾಗೇ ಬಿಡುವ ಬದಲು ಕಟಾವು ಮಾಡಿದರೆ ಮೂರು ತಿಂಗಳ ನಂತರ ಮತ್ತೆ ಹೂವು ಬಿಡುತ್ತದೆ. ಆಗ ಮಾರಾಟ ಮಾಡಬಹುದು. ಒಂದುವೇಳೆ ಗಿಡಗಳನ್ನು ಕತ್ತರಿಸದಿದ್ದರೆ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯ ತುರ್ತು ಪರಿಸ್ಥಿತಿ ಹತೋಟಿಗೆ ಬರುವವರೆಗೂ ಗಿಡಗಳನ್ನು ಜೋಪಾನ ಮಾಡಿದರೆ ಮುಂದಿನ ದಿನಗಳಲ್ಲಿ ಲಾಭದಾಯಕವಾಗಲಿದೆ ಎಂಬುದು ರೈತರ ಲೆಕ್ಕಾಚಾರ.

    ಬೇಸಿಗೆಯಲ್ಲಿ ಹೂವು ಬೆಳೆದರೂ ಯಾವುದೇ ಪ್ರತಿಫಲ ಇಲ್ಲದಂತಾಗಿದೆ. ಸಾವಿರಾರು ರೂ. ಬಂಡವಾಳ ಹಾಕಿ ನೀರಿಲ್ಲದ ಕಾಲದಲ್ಲೂ ಖಾಸಗಿ ಟ್ಯಾಂಕರ್ ನೀರು ಬಳಸಿ ಹೂ ಬೆಳೆದೆ. ಬೇಸಿಗೆಯಲ್ಲಿ ಗಿಡಕ್ಕೆ ಕತ್ತರಿ ಹಾಕುವುದರಿಂದ ಉಳಿಯುವುದೋ, ಅಳಿಯುವುದೋ ಎಂಬ ಚಿಂತೆಯೂ ಕಾಡುತ್ತಿದೆ.
    ಚಿಕ್ಕರಾಮು, ಗುಲಾಬಿ ಬೆಳೆಗಾರ, ದೇವನಾಯಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts