More

    ಹೂಳು ತೆಗೆಯಲು ಡಿಸಿಎಂ ಸೂಚನೆ

    ಮದ್ದೂರು: ಪಟ್ಟಣದ ವ್ಯಾಪ್ತಿಯಲ್ಲಿ ಹರಿಯುವ ಸಂಪರ್ಕ ನಾಲೆಗಳಾದ ಬೈರನ್ ಮತ್ತು ವೈದ್ಯನಾಥಪುರ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಕೂಡಲೇ ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
    ಈ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ ಮಾಡಿದ್ದ ಮನವಿಗೆ ಸ್ಪಂದಿಸಿರುವ ಡಿ.ಕೆ. ಶಿವಕುಮಾರ್, ಕೂಡಲೇ ಕ್ರಮ ವಹಿಸುವಂತೆ ಗುರುವಾರ ಲಿಖಿತ ಆದೇಶ ನೀಡಿದ್ದಾರೆ.
    ಬೈರನ್ ಮತ್ತು ವೈದ್ಯನಾಥಪುರ ಕಾಲುವೆಗಳು ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಹರಿಯುವ ಸಂಪರ್ಕ ನಾಲೆಗಳಾಗಿವೆ. ಇಲ್ಲಿ ಹೂಳು ತುಂಬಿ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ದೇಶಹಳ್ಳಿ ಕೆರೆಯ ಪ್ರಾರಂಭದಿಂದ ಈ ಎರಡು ನಾಲೆಗಳು ಹರಿಯುವ ಕೊನೆಯ ಭಾಗದವರೆಗೂ ಹೂಳು ತುಂಬಿದೆ. ರೈತರ ಸಾವಿರಾರು ಎಕರೆ ಜಮೀನಿಗೆ ಸರಾಗವಾಗಿ ನೀರು ಹರಿಯುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಬಹಳ ಸಮಸ್ಯೆಯಾಗುತ್ತಿದೆ ಎಂದು ದಿನೇಶ್ ಗೂಳಿಗೌಡ ಮನವಿ ಪತ್ರದಲ್ಲಿ ಕೋರಿದ್ದರು.
    ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ಡಿಸಿಎಂ ಸೂಚನೆ ನೀಡಿರುವುದು ತಾಲೂಕಿನ ಕೃಷಿಕರಿಗೆ ಆಶಾಭಾವ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts