More

    ಹು-ಧಾ ಮಹಾನಗರ ಪಾಲಿಕೆಗೆ 25ರವರೆಗೆ ಗಡುವು

    ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಕೋರಿ ಹಿಂದು ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿಯ ಪಾಲಿಕೆ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಆಗಸ್ಟ್ 25ರೊಳಗೆ ಅನುಮತಿ ನೀಡಬೇಕೆಂದು ಪಾಲಿಕೆಗೆ ಅಂತಿಮ ಗಡುವು ನೀಡಿದ್ದಾರೆ.
    ರಾಣಿ ಚನ್ನಮ್ಮ ಮೈದಾನ (ಈದ್ಗಾ) ಗಣೇಶ ಉತ್ಸವ ಸಮಿತಿ ವತಿಯಿಂದ ಪ್ರತಿಭಟನಾರ್ಥವಾಗಿ ಪಾಲಿಕೆ ಕಚೇರಿ ಆವರಣದಲ್ಲಿ ಧರಣಿ, ಭಜನೆ, ಕಲ್ಪಿತ ಪ್ರದರ್ಶನ ಸಹ ನಡೆಸಲಾಯಿತು. ವಿಶ್ವ ಹಿಂದು ಪರಿಷತ್, ಬಜರಂಗದಳ, ಶ್ರೀರಾಮ ಸೇನಾ, ಹಿಂದು ಜಾಗರಣ ವೇದಿಕೆ ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
    ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರಿಗೆ ಮನವಿ ಸಲ್ಲಿಸಿದ ಸಮಿತಿ ಸಂಚಾಲಕ ಹನುಮಂತಸಾ ನಿರಂಜನ ಮಾತನಾಡಿ, ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಕೋರಿ ಈಗಾಗಲೇ ಪಾಲಿಕೆಗೆ 2 ಬಾರಿ ಮನವಿ ಸಲ್ಲಿಸಿದ್ದೇವೆ. ಇದು ಅಂತಿಮ ಮನವಿ. ಆ. 25ರೊಳಗೆ ಅನುಮತಿ ನೀಡದಿದ್ದರೆ ಮುಂದಿನ ಹೋರಾಟ ಬೇರೆ ಸ್ವರೂಪದ್ದಾಗಿರಲಿದೆ ಎಂದು ಹೇಳಿದರು.
    ಇದಕ್ಕೂ ಮೊದಲು ಸಮಿತಿ ವತಿಯಿಂದ ದುರ್ಗದಬೈಲ್​ನಿಂದ ಪಾಲಿಕೆ ಕಚೇರಿಯವರೆಗೆ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಪರವಾಗಿ 1,556 ಜನರು ಸಹಿ ಹಾಕಿದ್ದಾರೆ ಎಂದು ಸಮಿತಿ ತಿಳಿಸಿದೆ. ಎಲ್ಲರ ಸಹಿಯುಳ್ಳ ದಾಖಲೆಯನ್ನು ಪಾಲಿಕೆ ಆಯುಕ್ತರಿಗೆ ನೀಡಿದರು.
    ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅಣ್ಣಪ್ಪ ದೆವಟಗಿ, ಸಂತೋಷ ಕಠಾರೆ, ರಾಜಶ್ರೀ ಜಡಿ, ಮಂಜುನಾಥ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts