More

    ಹುಲ್ಲತ್ತಿಯಲ್ಲಿ ರಾಗಿ ದೋಸೆ ಹಬ್ಬ

    ರಟ್ಟಿಹಳ್ಳಿ: ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ರಾಗಿ ದೋಸೆ ಹಬ್ಬವು ಭಾನುವಾರ ವಿಶಿಷ್ಟವಾಗಿ ನೆರವೇರಿತು.

    ಗ್ರಾಮದ ಅಗಸಿಬಾಗಿಲ ಭರಮಪ್ಪ ದೇವರಿಗೆ ನೈವೇದ್ಯ ಸಲ್ಲಿಸಿ ಜಾನುವಾರುಗಳಿಗೆ ಅರ್ಪಿಸುವುದರ ಮೂಲಕ ದನಕರುಗಳಿಗೆ ರೋಗ ರುಜಿನಗಳು ಬಾರದಂತೆ ಪ್ರಾರ್ಥಿಸಲಾಯಿತು.

    ಸುಮಾರು 120 ವರ್ಷಗಳ ಹಿಂದೆ ಗ್ರಾಮದಲ್ಲಿ ಅನೇಕ ದನಕರುಗಳು ವಿವಿಧ ಬಗೆಯ ರೋಗರುಜಿನಗಳಿಂದ ಸಾಯುತ್ತಿದ್ದವು. ಯಾವುದೇ ಚಿಕಿತ್ಸೆ ನೀಡಿದರೂ ಖಾಯಿಲೆಗಳು ವಾಸಿಯಾಗುತ್ತಿರಲಿಲ್ಲ. ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ವಾಸವಾಗಿದ್ದ ಓರ್ವ ಸಾಧು ಬಳಿ ಈ ವಿಚಾರವಾಗಿ ಪ್ರಸ್ತಾಪಿಸಲಾಯಿತು. ಅವರ ಸಲಹೆಯಂತೆ ಪ್ರತಿ ವರ್ಷ ಆಷಾಢ ತಿಂಗಳಿನ ಕೊನೆಯ ಗುರುವಾರ ಅಥವಾ ಭಾನವಾರ ಗ್ರಾಮದ ಪ್ರತಿ ಮನೆಯಲ್ಲಿ ರಾಗಿ ದೋಸೆ ಮಾಡಬೇಕು. ಊರಿನ ದ್ವಾರಬಾಗಿಲು (ಅಗಸಿಬಾಗಿಲ) ಬಳಿ ಒಂದು ಲಿಪಿಗಲ್ಲನ್ನು ಇಟ್ಟು ಅದಕ್ಕೆ ದೋಸೆ ಭರಮಪ್ಪ ಎಂದು ನಾಮಕರಣ ಮಾಡಬೇಕು. ಸಂಜೆ 4 ಗಂಟೆಯ ಬಳಿಕ ದನಕರುಗಳು ಗ್ರಾಮಕ್ಕೆ ಬಂದ ವೇಳೆ ನೈವೇದ್ಯ ಅರ್ಪಿಸಿ ಅದನ್ನು ದನಕರುಗಳಿಗೆ ಇಟ್ಟು ಪ್ರಾರ್ಥಿಸಿ ಎಂದು ತಿಳಿಸಿದರು.

    ಗ್ರಾಮಸ್ಥರು ಈ ರೀತಿ ಮಾಡಿದ ಬಳಿಕ ದನಕರುಗಳಿಗೆ ಬರುತ್ತಿದ್ದ ರೋಗಗಳು ಮಾಯವಾದವು. ಅಂದಿನಿಂದ ಗ್ರಾಮದಲ್ಲಿ ರಾಗಿ ದೋಸೆ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತ ಬರಲಾಯಿತು. ತಮ್ಮ ನೆಂಟರು, ಬಂಧು ಬಳಗಕ್ಕೆ ರಾಗಿ ದೋಸೆಯನ್ನು ಕಳುಹಿಸುವ ಪದ್ಧತಿಯನ್ನು ಇಂದಿಗೂ ಪಾಲಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts