More

    ಹುಬ್ಬಳ್ಳಿ ಪೂರ್ವ ಭಾಗದಲ್ಲಿ ಡೇಂಜರ್!

    ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 45 ಜನರಲ್ಲಿ ಕರೊನಾ ವೈರಸ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆಯಾಗಿದೆ. ಈವರೆಗೆ 238 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಹುಬ್ಬಳ್ಳಿ ಪೂರ್ವ ಭಾಗದಲ್ಲಿ ಹೆಚ್ಚು ಪ್ರಕರಣ ಕಂಡುಬರುತ್ತಿದ್ದು, ಅಪಾಯದ ಮುನ್ಸೂಚನೆಯಾಗಿದೆ.

    ಧಾರವಾಡ ತಾಲೂಕು: ಜೂ. 23ರಂದು ಸೋಂಕಿತ ಮಿಚಗನ್ ಕಾಂಪೌಂಡ್ ಲೋಬೊ ಅಪಾರ್ಟ್​ವೆುಂಟ್​ನ 55 ವರ್ಷದ ಪುರುಷನಿಂದ ಮೆಹಬೂಬ ನಗರದ 53 ವರ್ಷದ ಮಹಿಳೆ, ಜೂ. 30ರಂದು ಸೋಂಕು ತಗುಲಿದ್ದ ಅರಣ್ಯ ಇಲಾಖೆ ವಸತಿ ಗೃಹದ 36ರ ಪುರುಷನಿಂದ ಅದೇ ಪ್ರದೇಶದ 34, 64, 50 ವರ್ಷದ ಮಹಿಳೆಯರು, 7 ವರ್ಷದ ಬಾಲಕ, 3 ವರ್ಷದ ಬಾಲಕಿ, ಜು. 2ರಂದು ಯು.ಬಿ.ಹಿಲ್​ನಲ್ಲಿ ಸೋಂಕು ದೃಢಪಟ್ಟ 48 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 55 ವರ್ಷದ ಪುರುಷ, ಜೂ. 29ರಂದು ಸೋಂಕು ತಗುಲಿದ್ದ ಮದಿಹಾಳ ಆದಿಶಕ್ತಿ ಕಾಲನಿಯ 46 ವರ್ಷದ ಪುರುಷನಿಂದ ಅದೇ ಪ್ರದೇಶದ 17ರ ಬಾಲಕ; ಕೆಮ್ಮು, ನೆಗಡಿ, ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಂಕೂರದ 30 ವರ್ಷದ ಪುರುಷ, ಎಂ.ಆರ್. ನಗರದ 33 ವರ್ಷದ ಪುರುಷ, ನವಲೂರಿನ 40 ವರ್ಷದ ಪುರುಷ, ಕೆಲಗೇರಿ ಗುಡ್ಡದಮಠ ಪ್ಲಾಟ್​ನ 34 ವರ್ಷದ ಪುರುಷ, ಶ್ರೀನಗರ 7ನೇ ಕ್ರಾಸ್​ನ 35 ವರ್ಷದ ಪುರುಷ, ನರೇಂದ್ರ ಗ್ರಾಮದ ಮಸೂತಿ ಓಣಿ 33 ವರ್ಷದ ಮಹಿಳೆ; ಬಾಗಲಕೋಟೆ ಜಿಲ್ಲೆ ಪ್ರಯಾಣ ಹಿನ್ನೆಲೆಯಿರುವ ಮುದಿ ಮಾರುತಿ ಗುಡಿ ಓಣಿಯ 41 ವರ್ಷದ ಪುರುಷ, ಬಳ್ಳಾರಿ ಪ್ರವಾಸ ಹಿನ್ನೆಲೆಯಿರುವ ತಡಕೋಡ ಗ್ರಾಮದ ತಿಮ್ಮಾಪುರ ಓಣಿ 48 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಹುಬ್ಬಳ್ಳಿ ತಾಲೂಕು: ಜೂ. 27ರಂದು ಸೋಂಕು ತಗುಲಿದ್ದ 30 ವರ್ಷದ ಮಹಿಳೆಯಿಂದ ಜನ್ನತ್ ನಗರದ 33 ವರ್ಷದ ಮಹಿಳೆ, ಜು. 4ರಂದು ಸೋಂಕಿತ ಯಲ್ಲಾಪುರ ಓಣಿ ಪಾಟೀಲ ಗಲ್ಲಿಯ 65ರ ಪುರುಷನಿಂದ ಜನ್ನತ್​ನಗರದ 29 ವರ್ಷದ ಪುರುಷ, ಜು. 1ರಂದು ಸೋಂಕು ದೃಢಪಟ್ಟಿದ್ದ ಕೇಶ್ವಾಪುರದ ವ್ಯಕ್ತಿಯಿಂದ ಅದೇ ಪ್ರದೇಶದ 57 ವರ್ಷದ ಪುರುಷ, ಜೂ. 26ರಂದು ಸೋಂಕಿತ ಗಣೇಶಪೇಟೆ ಬಿಂದರಗಿ ಓಣಿ 54 ವರ್ಷದ ಪುರುಷನಿಂದ ಹಳೇಹುಬ್ಬಳ್ಳಿ ಸದರಸೋಫಾದ 64ರ ಪುರುಷನಿಗೆ; ಕೆಮ್ಮು-ನೆಗಡಿ, ಜ್ವರ,ತೀವ್ರ ಉಸಿರಾಟದ ತೊಂದರೆಯಿರುವ ತಾಜ್​ನಗರದ 21 ವರ್ಷದ ಪುರುಷ, ಕೇಶ್ವಾಪುರ ಯುರೇಕಾ ಕಾಲನಿಯ 50 ವರ್ಷದ ಪುರುಷ, ಹಳೇಹುಬ್ಬಳ್ಳಿಯ 63 ವರ್ಷದ ಪುರುಷ, ಲಕ್ಷ್ಮೀ ಕಾಲನಿಯ 24 ವರ್ಷದ ಯುವಕ, ಲೋಹಿಯಾನಗರ (ರಾಮಲಿಂಗೇಶ್ವರ ನಗರದ) 72 ವರ್ಷದ ವೃದ್ಧ, ಕ್ಲಬ್ ರಸ್ತೆಯ 35 ವರ್ಷದ ಪುರುಷ, ಗದಗ ರಸ್ತೆ ಚೇತನಾ ಕಾಲನಿಯ 26, 58 ವರ್ಷದ ಮಹಿಳೆ, 67 ವರ್ಷದ ವೃದ್ಧ, 28 ವರ್ಷದ ಯುವಕ, ಗುರುನಾಥ ನಗರದ 67 ವರ್ಷದ ವೃದ್ಧೆ; ಬಳ್ಳಾರಿ ಜಿಲ್ಲೆ ಪ್ರವಾಸ ಹಿನ್ನೆಲೆಯಿರುವ ಅರುಣ ಕಾಲನಿ ಅಮರ ರೆಸಿಡೆನ್ಸಿಯ 36 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಗಿರಣಿ ಚಾಳದ 88 ವರ್ಷದ ವೃದ್ಧ, ಎಂ.ಡಿ. ಕಾಲನಿಯ 33 ವರ್ಷದ ಪುರುಷ, ಎನ್.ಎ.ನಗರದ 28 ವರ್ಷದ ಯುವಕ, ಶಾಂತಿನಿಕೇತನ ಕಾಲನಿ 8ನೇ ಕ್ರಾಸ್​ನ 50 ವರ್ಷದ ಪುರುಷ, ಕೆಎಸ್​ಆರ್​ಟಿಸಿ ವಸತಿ ಗೃಹದ 41 ವರ್ಷದ ಪುರುಷ, 36 ವರ್ಷದ ಮಹಿಳೆ, ಯಲ್ಲಾಪುರ ಓಣಿಯ 6 ವರ್ಷದ ಬಾಲಕಿ, ನೇಕಾರ ನಗರದ 21 ವರ್ಷದ ಮಹಿಳೆ, ಗದಗ ರಸ್ತೆ ವೆರ್ನಂತನ್ ಕಾಲನಿಯ 22 ವರ್ಷದ ಯುವತಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

    ಇತರ ತಾಲೂಕು: ಜು. 2ರಂದು ಸೋಂಕು ದೃಢಪಟ್ಟಿದ್ದ ನವಲಗುಂದ ಶಿರಕೋಳ ಗ್ರಾಮದ 34ರ ಪುರುಷನಿಂದ ಅದೇ ಪ್ರದೇಶದ 32, 55 ವರ್ಷದ ಮಹಿಳೆಯರು; ಜ್ವರ-ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ಕಲಘಟಗಿ ನಿಂಗನಕೊಪ್ಪದ 70 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. ಗದಗ ರಾಮನಗರದ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಕೋವಿಡ್​ಗೆ ಮಹಿಳೆ ಸಾವು: ಹುಬ್ಬಳ್ಳಿ ಗುರುನಾಥನಗರದ ಮಹಿಳೆಯೊಬ್ಬರು (67) ಕೋವಿಡ್ ತಗುಲಿ ಮೃತಪಟ್ಟಿದ್ದಾರೆ. ಜೂ. 26ರಂದು ಜ್ವರ-ಕೆಮ್ಮು, ಉಸಿರಾಟದ ಸಮಸ್ಯೆ ಇದೆ ಎಂದು ಕಿಮ್ಸ್​ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ವ್ಯಕ್ತಿ ಸಂಪರ್ಕವಿರಲಿಲ್ಲ. ಜು. 1ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ವಾ ಹೊಡೆದಿತ್ತು ಎನ್ನಲಾಗಿದೆ. ತೀವ್ರ ನಿಗಾ ವಹಿಸಿದ್ದ ವೈದ್ಯಕೀಯ ಸಿಬ್ಬಂದಿ ಕೋವಿಡ್ ವರದಿಗಾಗಿ ಕಾಯುತ್ತಿತ್ತು. ಶನಿವಾರ ಸಂಜೆ ವರದಿ ಕೈ ಸೇರಿದ್ದು, ಸುರಕ್ಷತಾ ಕ್ರಮದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗಿದೆ.

    ಬಸ್ ಚಾಲಕ ಸೂಪರ್ ಸ್ಪ್ರೆಡ್ಡರ್: ಗದಗ ಜಿಲ್ಲೆಯ ನರಗುಂದ ಪಟ್ಟಣದ ಗಾಡಿ ಓಣಿಯ ನಿವಾಸಿ 39 ವರ್ಷದ ಪುರುಷ (ಪಿ-15320) 10 ಜನರಿಗೆ ಸೋಂಕು ಹಬ್ಬಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಜೂ. 30ರಂದು ಸೋಂಕು ದೃಢಪಟ್ಟಿದೆ. ನಂತರ ಅವರ ಪ್ರಥಮ ಸಂರ್ಪತರಾದ ಅವರ ಇಬ್ಬರು ಮಕ್ಕಳು, ತಾಯಿ, ಇಬ್ಬರು ಸಹೋದರಿಯರು, ಸಹೋದರಿಯ ಮಗಳು, ಜತೆಗೆ ಇವರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಇರುವುದರಿಂದ ಮನೆಯ ಮಾಲೀಕ ಮತ್ತು ಅವರ ಪುತ್ರ ಹಾಗೂ ಪಕ್ಕದ ಮನೆಯ ಇಬ್ಬರಿಗೆ ಸೇರಿ ಒಟ್ಟು 10 ಜನರಿಗೆ ಸೋಂಕು ತಗುಲಿದೆ. ಈ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದ 55ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts