More

    ಹುಬ್ಬಳ್ಳಿ- ಧಾರವಾಡ ಮಹಾನಗರದ ಪರಿಷ್ಕೃತ ಸಿಡಿಪಿ ನಕ್ಷೆಯಲ್ಲಿ ರಸ್ತೆ ನಮೂದಿಸಿ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದ ಪರಿಷ್ಕೃತ ಸಿಡಿಪಿ (ಸಮಗ್ರ ಅಭಿವೃದ್ಧಿ ಯೋಜನೆ)ಯಲ್ಲಿ ಮೊದಲಿನ ಕೆಲ ರಸ್ತೆಗಳನ್ನು ಕೈಬಿಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

    ಹಳೇ ಸಿಡಿಪಿಯಲ್ಲಿದ್ದ ಸುತಗಟ್ಟಿ- ರಾಯಾಪುರ ರಸ್ತೆಯನ್ನು ಹೊಸ ಸಿಡಿಪಿ ನಕ್ಷೆಯಲ್ಲಿ ನಮೂದಿಸದೇ ಇರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರಿಗೆ ಸರಿಪಡಿಸಲು ಮನವಿ ಸಲ್ಲಿಸಿದ್ದಾರೆ.

    ಹು-ಧಾ ರಸ್ತೆಗೆ ಸಂಪರ್ಕ ಕಲ್ಪಿಸುವ 24 ಮೀ. ಅಗಲದ ರಸ್ತೆಯು ಅರಣ್ಯ ಇಲಾಖೆಯ ಪ್ರಾಣಿ ಸಂಗ್ರಹಾಲಯಕ್ಕೆ ಹೊಂದಿಕೊಂಡು ಸುತಗಟ್ಟಿ ಗ್ರಾಮಕ್ಕೆ ಹಾಗೂ ಅಲ್ಲಿರುವ ಪುರಾತನ ಉದ್ಭವ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಮಾರ್ಗ ಕಲ್ಪಿಸುತ್ತದೆ. ಅಲ್ಲದೆ, ಸುತ್ತಮುತ್ತಲಿನ ಜಮೀನುಗಳಿಗೆ ಹೋಗುವ ರೈತರಿಗೆ ರಸ್ತೆಯಾಗಿದೆ. ಸಾರ್ವಜನಿಕ ವಾಹನಗಳಿಗೆ ಇದೇ ರಸ್ತೆ ಬಳಕೆಯಾಗುತ್ತಿತ್ತು. ಇದೀಗ ನಿರ್ವಣವಾದ ಬಡಾವಣೆಗಳಿಗೂ ರಸ್ತೆಯಾಗಿದೆ. ಆದರೆ, 2019ರ ಪರಿಷ್ಕೃತ ಸಿಡಿಪಿ ನಕ್ಷೆಯಲ್ಲಿ ಅಂದಾಜು 3 ಕಿ.ಮೀ. ಉದ್ದದ ಈ ರಸ್ತೆಯನ್ನು ಬಿಆರ್​ಟಿಎಸ್ ಮುಖ್ಯ ರಸ್ತೆಯಿಂದ ಸುತಗಟ್ಟಿ ಕಡೆಗೆ ಅಂದಾಜು 1.5 ಕಿ.ಮೀ. ರಸ್ತೆ ತೆಗೆದು ಹಾಕಲಾಗಿದೆ. ಇದರಿಂದ ಅಕ್ಕಪಕ್ಕದ ಜಮೀನು ಇರುವ ರೈತರಿಗೆ ತೊಂದರೆಯಾಗಲಿದೆ. ಜನರ ಓಡಾಟಕ್ಕೂ ಸಮಸ್ಯೆಯಾಗಿದೆ. ಈ ಭಾಗಕ್ಕೆ ಇದೊಂದೇ ಮುಖ್ಯ ರಸ್ತೆಯಾಗಿದ್ದು ಹಳೆಯ ಸಿಡಿಪಿಯಲ್ಲಿ ಈ ರಸ್ತೆಯ ಉಲ್ಲೇಖ ಇದೆ. ಹೊಸ ಸಿಡಿಪಿಯಲ್ಲಿ ಇದನ್ನು ಕೈಬಿಟ್ಟಿದ್ದೇಕೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

    ಕೂಡಲೆ ಇದನ್ನು ಸರಿಪಡಿಸಿ ಹೊಸ ಸಿಡಿಪಿಯಲ್ಲಿ 24 ಮೀ. ಅಗಲದ ರಸ್ತೆ ನಮೂದಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಲ್ಲಪ್ಪ ನಾಗರಹಳ್ಳಿ, ಬಸಪ್ಪ ಹುಬ್ಬಳ್ಳಿ, ಬಸಪ್ಪ ಶಿಸನಳ್ಳಿ, ಅರ್ಜುನ ಹಂಚಿನಹಾಳ, ಸಿದ್ದಲಿಂಗ ಬಂಗಾರಿ, ಭೀಮರಾಯ ರಾಯಾಪುರ, ಸತೀಶ ವಾಡೇಕರ ಇತರರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts