More

    ಹುಬ್ಬಳ್ಳಿ ಎಪಿಎಂಸಿಗೆ ಶೇಂಗಾ ಆವಕ ಹೆಚ್ಚಳ

    ಹುಬ್ಬಳ್ಳಿ: ಸತತ ಮಳೆಯ ಮಧ್ಯೆಯೂ ಅಷ್ಟು ಇಷ್ಟು ಶೇಂಗಾ ಬೆಳೆದು ಇದುವರೆಗೆ ಕಾಪಾಡಿಕೊಂಡು ಬಂದಿರುವ ರೈತರು, ಇದೀಗ ಮಾರುಕಟ್ಟೆಗೆ ತರುತ್ತಿದ್ದಾರೆ.

    ಹೆಚ್ಚು ಮಳೆಯಿಂದಾಗಿ ದರ ಕಡಿಮೆ ಅಷ್ಟೇ ಅಲ್ಲ ಆವಕವೂ ಇಳಿಕೆಯಾಗಿ ಎಪಿಎಂಸಿ ಭಣಗುಡುತ್ತಿತ್ತು. ದಸರಾ ನಂತರ ಎಪಿಎಂಸಿಗೆ ಶೇಂಗಾ ಆವಕದಲ್ಲಿ ಏರಿಕೆಯಾಗಿದ್ದು, ದರವೂ ಚೇತರಿಸಿಕೊಂಡಿದೆ. ಇದೀಗ ಒಣ ಹವೆ, ಬಿಸಿಲು ಇರುವುದರಿಂದ ಶೇಂಗಾ ಒಂದಿಷ್ಟು ಒಣಗಿಸಿ ತರುತ್ತಿರುವುದರಿಂದ ದರ ಉತ್ತಮವಾಗುತ್ತಿದೆ. ಇದರ ಪರಿಣಾಮವಾಗಿ ಎಪಿಎಂಸಿ ಕಾಳು ಕಡಿ ವಿಭಾಗದ ಮಳಿಗೆಗಳಿರುವ ರಸ್ತೆಗಳಲ್ಲಿ ನಿತ್ಯ ಶೇಂಗಾ ರಾಸಿಗಳು ಕಾಣುತ್ತಿವೆ.

    ಈ ವರ್ಷ ಧಾರವಾಡ ಜಿಲ್ಲೆಯಲ್ಲಿ 58,244 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಗುರಿಗಿಂತ ಒಂದಿಷ್ಟು ಕಡಿಮೆಯಾಗಿದ್ದು, 51,367 ಹೆಕ್ಟೇರ್ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ.

    ಆದಾಗ್ಯೂ ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮ ಮಳೆಯಿಂದಾಗಿ ಬೆಳೆ ಚೆನ್ನಾಗಿ ಬಂದಿತ್ತು. ಫಸಲು ಕೈಗೆ ಬರುವ ಹೊತ್ತಿಗೆ ಸುರಿದ ಸತತ ಮಳೆ ಬಹುತೇಕ ಬೆಳೆಯನ್ನು ನೀರು ಪಾಲು ಮಾಡಿತ್ತು. ಅದರ ಮಧ್ಯೆಯೂ ರೈತರು ಒಂದಿಷ್ಟು ಬೆಳೆ ಕಾಪಾಡಿಕೊಂಡು ಇದೀಗ ಮಾರುಕಟ್ಟೆಗೆ ಶೇಂಗಾ ತರುತ್ತಿದ್ದಾರೆ.

    ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ ಸುಮಾರು 5 ಸಾವಿರ ರೂ. ವರೆಗೆ ಬೆಲೆ ಸಿಗುತ್ತಿದೆ. ಬುಧವಾರದಂದು ನಡೆದ ಟೆಂಡರ್​ನಲ್ಲಿ ಶೇಂಗಾ (ಗೆಜ್ಜೆ) ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 1669ರಿಂದ ಗರಿಷ್ಠ 5680 ರೂ.ವರೆಗೆ ಮಾರಾಟವಾಗಿದೆ. 4105 ಚೀಲ ಶೇಂಗಾ ಆವಕವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts