More

    ಹುಬ್ಬಳ್ಳಿಗೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗರಿ

    ಆನಂದ ಅಂಗಡಿ ಹುಬ್ಬಳ್ಳಿ

    ಇಡೀ ದೇಶದಲ್ಲಿಯೇ ಮಾದರಿಯಾಗುವಂತಹ ಬೃಹತ್ ಸಮಗ್ರ ಕ್ರೀಡಾ ಸಂಕೀರ್ಣ ಹುಬ್ಬಳ್ಳಿಯ ಆರ್.ಎಂ. ಲೋಹಿಯಾ ನಗರದಲ್ಲಿ ನಿರ್ವಣಗೊಳ್ಳಲಿದೆ.

    ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿಯ 150 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ ಖೇಲೊ ಇಂಡಿಯಾ ಯೋಜನೆಯ 8 ಕೋಟಿ ರೂ. ಸೇರಿ ಒಟ್ಟು 158 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ತಲೆ ಎತ್ತಲಿದೆ. ಹಲವಾರು ಕ್ರೀಡೆಗಳ ತರಬೇತಿ ಹಾಗೂ ಸ್ಪರ್ಧೆಗಳನ್ನು ಒಂದೇ ಸಂಕೀರ್ಣದಡಿ ಒದಗಿಸುವಂತಹ ಕಟ್ಟಡ ನಿರ್ವಣವಾಗುತ್ತಿರುವುದು ಉತ್ತರ ಕರ್ನಾಟಕದಲ್ಲಿಯೇ ಇದೇ ಮೊದಲನೆಯದ್ದಾಗಿದೆ.

    ಅಂದಾಜು 15 ಎಕರೆ ವಿಸ್ತೀರ್ಣದ ಈ ಕ್ರೀಡಾ ಸಂಕೀರ್ಣದ ನೀಲಿ ನಕಾಶೆ ಸಿದ್ಧಗೊಂಡಿದ್ದು, ಕಳೆದ ಬುಧವಾರ ಟೆಂಡರ್ ಕರೆಯ ಲಾಗಿದೆ. ಮಾ. 19ರಂದು ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಕ್ರೀಡಾ ಸಂಕೀರ್ಣ ನಿರ್ವಣಗೊಳ್ಳಲಿರುವ ಸ್ಥಳದಲ್ಲಿದ್ದ ಗಿಡಗಂಟಿ ತೆರವುಗೊಳಿಸಿದ್ದು, ಮೇ ಅಥವಾ ಜೂನ್​ನಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ನಂತರದ 2 ವರ್ಷಗಳಲ್ಲಿ ಅತ್ಯಾಧುನಿಕ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳ ಸೌಲಭ್ಯ ಇರುವ ಸಂಕೀರ್ಣ ತಲೆ ಎತ್ತಲಿದೆ. ಜಿ ಪ್ಲಸ್ 3 (ನೆಲಮಹಡಿ ಹಾಗೂ ಮೂರಂತಸ್ತು) ಮಾದರಿಯ ಸಂಕೀರ್ಣದ ಕಟ್ಟಡದಲ್ಲಿ ಒಟ್ಟು 5 ಬ್ಲಾಕ್​ಗಳು ನಿರ್ಮಾಣ ಗೊಳ್ಳಲಿವೆ. 2.75 ಎಕರೆಯಲ್ಲಿ ಕಟ್ಟಡ, 6.75 ಎಕರೆಯಲ್ಲಿ ಹೊರಾಂಗಣ ಕ್ರೀಡಾಂಗಣ ತಲೆ ಎತ್ತಲಿದೆ. ಕ್ರೀಡಾ ಸಾಮಗ್ರಿ ಮಾರಾಟ ಮಾಡುವ ಮಳಿಗೆಗಳು, ಹೊರ ರಾಜ್ಯ ಅಥವಾ ವಿದೇಶದಿಂದ ಬರುವ ಕ್ರೀಡಾಪಟುಗಳಿಗೆ ತಂಗಲು ಕೋಣೆಗಳು, ಮಕ್ಕಳನ್ನು ತರಬೇತಿಗೆ ಕರೆತರುವ ಪಾಲಕರಿಗೆ ವಿಶ್ರಾಂತಿ ಕೊಠಡಿ, ಕ್ಯಾಂಟೀನ್, ಯೋಗ ತರಬೇತಿ ಕೇಂದ್ರ, ಕನಿಷ್ಠ 180 ಜನರು ಕುಳಿತುಕೊಳ್ಳುವಂತಹ ಸಭಾಂಗಣ, 200ಕ್ಕೂ ಹೆಚ್ಚು ವಾಹನಗಳಿಗೆ ರ್ಪಾಂಗ್ ಜಾಗ ಹಾಗೂ ಇತರ ಸೌಲಭ್ಯಗಳು ಇಲ್ಲಿ ಇರಲಿವೆ.

    ಕ್ರೀಡೆಗಳ ಬೆಳವಣಿಗೆಗೆ ಬೇಕಾದ ಎಲ್ಲ ಸೌಲಭ್ಯಗಳು ಈ ಸಂಕೀರ್ಣದಲ್ಲಿ ಇರಲಿವೆ. ಇಡೀ ದೇಶದಲ್ಲಿಯೇ ಇದೊಂದು ಅತ್ಯುತ್ತಮ ಸೌಲಭ್ಯಗಳುಳ್ಳ ಸಮಗ್ರ ಕ್ರೀಡಾ ಸಂಕೀರ್ಣ ವಾಗಲಿದೆ.
    |ಅರವಿಂದ ಬೆಲ್ಲದ ಶಾಸಕ, ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರ

    ಒಳಾಂಗಣ ಕ್ರೀಡಾ ಸೌಲಭ್ಯ
    ಬ್ಯಾಡ್ಮಿಂಟನ್​ನ 12 ಅಂಕಣ (ಸಿಂಥೆಟಿಕ್), ಟೇಬಲ್ ಟೆನಿಸ್​ನ 6 ಟೇಬಲ್, ಆರ್ಚರಿ ರೇಂಜ್ 25 ಮೀ. 4 ಲೈನ್, ಪಿಸ್ತೂಲ್ ಮತ್ತು ರೈಫಲ್ ಶೂಟಿಂಗ್ ರೇಂಜ್​ಗೆ 10 ಮೀಟರ್​ನ 6 ಲೈನ್, ಕುಸ್ತಿಯ 1 ಅಂಕಣ, ಕಬಡ್ಡಿಯ 1 ಅಂಕಣ, ಬಾಸ್ಕೆಟ್ ಬಾಲ್​ನ 2 ಅಂಕಣ, ಮಾರ್ಷಲ್ ಆರ್ಟ್ಸ್ ನ 2 ಅಂಕಣ, ಸ್ಕಾ ್ವ್ನ 2 ಅಂಕಣ, ಕುಸ್ತಿಯ 1 ಮಣ್ಣಿನ ಅಂಕಣ.

    ತರಬೇತಿಗೆ ಬರುವ ಕ್ರೀಡಾಸಕ್ತರಿಗೆ ಶುಲ್ಕ ನಿಗದಿಪಡಿಸಲಾಗುವುದು. ಸ್ಥಳೀಯರಿಗೆ ಶುಲ್ಕದಲ್ಲಿ ವಿನಾಯಿತಿ ನೀಡುವ ಉದ್ದೇಶ ಇದೆ.
    | ಎಸ್.ಎಚ್. ನರೇಗಲ್ಲ ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts