More

    ಹುತಾತ್ಮ ಯೋಧ ವೆಂಕಟ್ ಪ್ರತಿಮೆಗೆ ಮಾಲಾರ್ಪಣೆ

    ಅರಕಲಗೂಡು: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಪಟ್ಟಣದ ನಿವೇದಿತಾ ವಿದ್ಯಾಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಬುಧವಾರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ತಾಲೂಕಿನ ಅಗ್ರಹಾರ ಗ್ರಾಮದ ಯೋಧ ವೆಂಕಟ್ ಅವರ ಸಮಾಧಿ ಬಳಿಗೆ ತೆರಳಿ, ವೆಂಕಟ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

    ಮುಖ್ಯ ಶಿಕ್ಷಕಿ ಬಿ.ಎಂ.ರಾಗಿಣಿ ಮಾತನಾಡಿ, ದೇಶದ ಗಡಿಯನ್ನು ಅತಿಕ್ರಮ ಪ್ರವೇಶ ಮಾಡಿದ್ದ ಶತ್ರು ದೇಶದ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಯೋಧರ ಶೌರ್ಯ ಮತ್ತು ಅವರ ಬಲಿದಾನದಿಂದ ಇಂದು ಕಾರ್ಗಿಲ್ ಪ್ರದೇಶ ನಮ್ಮ ದೇಶದಲ್ಲೇ ಉಳಿಯುವಂತಾಯಿತು. ದೇಶ ರಕ್ಷಣೆಯಲ್ಲಿ ನಮ್ಮ ಯೋಧರು ತಮ್ಮ ಕುಟುಂಬವನ್ನು ತೊರೆದು ನಮಗಾಗಿ ಗಡಿ ಕಾಯುತ್ತಿದ್ದಾರೆ. ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಹೀಗಿರುವಾಗ ನಮಗೆ ನಮ್ಮ ಯೋಧರು ಆದರ್ಶವಾಗಬೇಕು. ಪ್ರತಿಯೊಬ್ಬ ಭಾರತೀಯನೂ ದೇಶಭಕ್ತನಾಗಿ ತನ್ನ ದೇಶಕ್ಕೆ ಕೃತಜ್ಞತೆಯಿಂದ ಇರಬೇಕು. ತಾನು ಮಾಡುವ ಕಾಯಕವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ದೇಶಕ್ಕೆ ತಾವು ಸಲ್ಲಿಸುವ ನಿಜವಾದ ದೇಶಭಕ್ತಿ ಪ್ರಕಟಿಸಿದಂತಾಗುತ್ತದೆ ಎಂದರು.

    ಇದೇ ವೇಳೆ ಹುತಾತ್ಮ ಯೋಧ ವೆಂಕಟ್ ಅವರ ವೀರ ಬಲಿದಾನದ ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎ.ಆರ್. ಸುಬ್ಬರಾವ್, ಶಿಕ್ಷಕಿ ಬೇಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts