More

    ಹಿರಿ ಮನೆಗೆ ಹಿರಿಯ ನಾಯಕ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಮ್ಮೆ ಚೈತನ್ಯ ಬಂದಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರವೇಶ ಇದಕ್ಕೆ ಕಾರಣ.
    ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸೋಲು ಹೀನಾಯ ಅನುಭವಿಸಿದ್ದ ಕಾಂಗ್ರೆಸ್ಗೆ ಖರ್ಗೆ ಪ್ರವೇಶ ಹೊಸ ಶಕ್ತಿ ತುಂಬಿದೆ. ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಖಚಿತ ಎಂಬುದು ಹಿರಿಯ ನಾಯಕರ ಅಂಬೋಣವಾಗಿತ್ತು. ದುರ್ದೈವವಶಾತ್ ಅದೃಷ್ಟ ಕೈಕೊಟ್ಟಿತು. ಪರಿಣಾಮ ಖರ್ಗೆ ಸೋಲು ಅನುಭವಿಸಿದರು. ಇವರ ಸೋಲು ಕಾಂಗ್ರೆಸ್ ಕಂಪನಗೊಳಿಸಿದ್ದಲ್ಲದೆ ದೊಡ್ಡ ನಷ್ಟ ಉಂಟು ಮಾಡಿತು. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಗಟ್ಟಿತನ ಹೊಂದಿದ್ದ ಖರ್ಗೆಯವರೇ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
    ಖರ್ಗೆ ಒಬ್ಬ ಸಮರ್ಥ ನಾಯಕ ಎಂಬ ಮಾತನ್ನು ಸ್ವತಃ ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ. ಅವರ ಸೋಲಿನಿಂದಾಗಿ ಲೋಕಸಭೆಯಲ್ಲಿ ತಮಗೆ ಎದುರಾಳಿಯೇ ಇಲ್ಲ ಎನ್ನುವಂತೆ ಮೋದಿ ಭಾವಿಸಿದ್ದರು. ಖರ್ಗೆ ಸೋಲು ಸ್ವತಃ ಸೋನಿಯಾ ಗಾಂಧಿ ಸೇರಿ ಎಲ್ಲ ಪ್ರಶ್ನಾತೀತ ನಾಯಕರನ್ನು ಕಂಗೆಡಿಸಿತು. ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಅವರನ್ನೇ ಒಪ್ಪದ ನಾಯಕರು, ಖರ್ಗೆ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು.
    ಹೀಗಿರುವಾಗ ರಾಜ್ಯಸಭೆಗೆ ಎದುರಾದ ಚುನಾವಣೆಯಲ್ಲಿ ನಾವಿಕನಿಗೆ ಹುಲ್ಲು ಕಡ್ಡಿಯೇ ಆಸರೆ ಎನ್ನುವಂತಾಗಿ ಕೈ ಪಕ್ಷಕ್ಕೆ ವರವಾಯಿತು. ಸೋನಿಯಾ ಗಾಂಧಿ ಹಿಂದೆ-ಮುಂದೆ ನೋಡದೆ ಖರ್ಗೆ ಅವರನ್ನೇ ಅಭ್ಯರ್ಥಿ ಘೋಷಿಸಿ ಮೊದಲ ಬಾರಿ ಧೈರ್ಯ ಮೆರೆದರು. ರಾಜ್ಯಸಭೆಗೆ ಖರ್ಗೆ ಆಯ್ಕೆ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಮಂದಹಾಸ ಮೂಡಿತು. ಮತ್ತೆ ರಾಜ್ಯದಲ್ಲಿ ಪಕ್ಷ ಬಲಪಡಿಸಬಹುದು ಎಂಬ ವಿಶ್ವಾಸವೂ ಇಮ್ಮಡಿಗೊಂಡಿತು.
    ಗಟ್ಟಿತನದಿಂದ ಮಾತನಾಡಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ನಾಯಕ ಖರ್ಗೆ ಎಂಟ್ರಿ ರಾಜ್ಯಸಭೆಗೆ ಆಗಿದೆ. ಜತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಪಡಿಸಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ.
    ಸುದೀರ್ಘ ರಾಜಕೀಯ ಜೀವನದ ಹಿರಿಯ ನಾಯಕ ಐದು ದಶಕ ಒಂದೇ ಪಕ್ಷದಲ್ಲಿದ್ದು, 9 ಬಾರಿ ಶಾಸಕ ಹಾಗೂ ಎರಡು ಸಲ ಸಂಸದರಾಗಿ ಕೆಲಸ ಮಾಡಿದ್ದಾರೆ. ಹಿರಿಯ ವಯಸ್ಸಿನಲ್ಲಿಯೂ ಯುವಕರಂತೆ ಚಾಕಚಕ್ಯತೆಯಿಂದ ಓಡಾಡಿಕೊಂಡಿದ್ದಾರೆ.
    ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಮತ್ತು ಮಾಜಿ ಸಚಿವ ಖಮರುಲ್ ಇಸ್ಲಾಂ ಸಾವು ಪಕ್ಷವನ್ನು ಕಂಗೆಡುವಂತೆ ಮಾಡಿತ್ತು. ಇಂಥದರಲ್ಲಿ ಪಕ್ಷದಲ್ಲಿದ್ದ ಹಿರಿಯರು ಬಿಜೆಪಿಗೆ ಹೋದರು. ಹೀಗಾಗಿ ಒಂಟಿಯಾಗಿ ಪಕ್ಷವನ್ನು ಕಟ್ಟಬೇಕಾದ ಜವಾಬ್ದಾರಿ ಖರ್ಗೆ ಮೇಲೆ ಬಿದ್ದಿತು. ಹಾಗಂತ, ಅವರೇನು ಹೆದರಿಲ್ಲ, ಕುಗ್ಗಿಲ್ಲ. ಈಗ ರಾಜ್ಯಸಭೆ ಪ್ರವೇಶಿಸಿ ಹೊಸ ಅಧ್ಯಾಯ ಬರೆಯಲು ಅಣಿಯಾಗಿದ್ದಾರೆ. ಈ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದ್ದಾರೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನಾನಾ ಖಾತೆಗಳ ಸಚಿವರಾಗಿ ಸಮರ್ಥ ನಿಭಾಯಿಸಿದ ಖರ್ಗೆ ಅವರು ರಾಜ್ಯಸಭೆಗೆ ಆಯ್ಕೆ ಆಗಿರುವುದು ಕಾಂಗ್ರೆಸ್ಗೆ ಹೆಮ್ಮೆ ವಿಷಯ. ಇವರ ಅನುಭವ, ದೂರದೃಷ್ಟಿತ್ವದ ಚಿಂತನೆಗಳು ಸಹಜವೇ ಕಲ್ಯಾಣ ಕರ್ನಾಟಕದ ವಿಕಾಸಕ್ಕೆ ಪೂರಕವಾಗುವ ಭರವಸೆ ಮೂಡಿಸಿವೆ.
    | ಲತಾ ರವಿ ರಾಠೋಡ್
    ಜಿಲ್ಲಾಧ್ಯಕ್ಷೆ, ಮಹಿಳಾ ಕಾಂಗ್ರೆಸ್

    ರಾಜ್ಯಸಭೆಗೆ ಖರ್ಗೆ ಪ್ರವೇಶ ನಿಜಕ್ಕೂ ಎಲ್ಲರಲ್ಲಿ ಸಂತಸ ತಂದಿದೆ. ರಾಜ್ಯಸಭೆಗೆ ಹಿರಿಯ ನಾಯಕನ ಅಗತ್ಯವಿತ್ತು. ಅಂತೆಯೇ ಸೋನಿಯಾಜಿ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಸೂಕ್ತ ನಿರ್ಧಾರ ಕೈಗೊಂಡರು. ಇದೀಗ ಖರ್ಗೆ ಆಯ್ಕೆ ಕಾಂಗ್ರೆಸ್​ ಚೈತನಕ್ಕೆ ಕಾರಣವಾಗಿದೆ.
    | ಸವಿತಾ ಸಜ್ಜನ್
    ಮಹಿಳಾ ಕಾಂಗ್ರೆಸ್ ಮುಖಂಡರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts