More

    ಹಿಮಾಚಲ, ಹರಿಯಾಣ ಚಾಂಪಿಯನ್

    ನರಗುಂದ: ಮೂರು ದಿನಗಳ ಅಖಿಲ ಭಾರತ ಪುರುಷ ಹಾಗೂ ಮಹಿಳೆಯರ ಎ ಶ್ರೇಣಿ ಆಹ್ವಾನಿತ ಕಬಡ್ಡಿ ಅಂತಿಮ ಪಂದ್ಯಾವಳಿ ಶನಿವಾರ ಬೆಳಗಿನ ಜಾವದವರೆಗೂ ರೋಚಕವಾಗಿ ನಡೆದವು.

    ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ವಿಜೇತ ತಂಡಗಳ ಕ್ರೀಡಾಪಟುಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ರೆಫರಿಗಳು, ಯೂನಿವರ್ಸಿಟಿ ಬ್ಲೂ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಮತಕ್ಷೇತ್ರದ ಎಲ್ಲ ಕಬಡ್ಡಿ ಕ್ರೀಡಾಪಟುಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಸನ್ಮಾನಿಸಿದರು.

    ನಂತರ ಮಾತನಾಡಿದ ಅವರು, ‘ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಬಿಜೆಪಿ, ಲಯನ್ಸ್ ಕ್ಲಬ್, ಸಿ.ಸಿ. ಪಾಟೀಲ ಅಭಿಮಾನಿ ಬಳಗದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಒಟ್ಟು 3 ದಿನ ನರಗುಂದದಲ್ಲಿ ಯುವ ಮಹೋತ್ಸವ, ಕಬಡ್ಡಿ ವೈಭವದ ಕಾರ್ಯಕ್ರಮಕ್ಕೆ ನಿರ್ಣಾಯಕರು ನಿರಂತರ ಶ್ರಮಿಸಿದ್ದಾರೆ. ಪ್ರೊ. ಕಬಡ್ಡಿ ಮಾದರಿಯಲ್ಲಿ ನಾಲ್ಕು ಅಂಕಣಗಳನ್ನು ಸಿದ್ಧಪಡಿಸಿ ಏಕಕಾಲಕ್ಕೆ ಸ್ಪರ್ಧೆಗಳನ್ನು ಆಯೋಜನೆ ಮಾಡಿರುವುದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ’ ಎಂದರು.

    ಸ್ವದೇಶಿ ಉತ್ಪನ್ನಗಳನ್ನು ಪ್ರೇರೆಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ವೋಕಲ್ ಫಾರ್ ಲೋಕಲ್ (ಆತ್ಮನಿರ್ಭರ ಭಾರತ) ಯೋಜನೆಯಡಿ ಮತಕ್ಷೇತ್ರದ 17 ವಿವಿಧ ಸ್ವಸಹಾಯ ಸಂಘಗಳಿಂದ ಸ್ವದೇಶಿ ಉತ್ಪನ್ನಗಳ ಮಾರಾಟ ಮಾಡಲಾಗಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಸಾವಿರಾರು ರೂಪಾಯಿ ಲಾಭವಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಆಧಾರ್ ಕಾರ್ಡ್, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಪಡಿತರ ಚೀಟಿ ಸೇರಿ ಸರ್ಕಾರದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದು, 30ಕ್ಕೂ ಅಧಿಕ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು.

    ಹಸನ ನವದಿ, ಚಂದ್ರು ದಂಡಿನ, ನಾಗರಾಜ ನೆಗಳೂರ, ಮಂಜುನಾಥ ಮೆಣಸಗಿ, ಸಂಗನಗೌಡ ಹಾಲಗೌಡ್ರ, ಮಲ್ಲಪ್ಪ ಮೇಟಿ, ಸಂಗನಗೌಡ ಪಾಟೀಲ, ಮಹೇಶಗೌಡ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಸ್ನೇಹಾ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ಪಾಟೀಲ, ಹನುಮಂತ ಹವಾಲ್ದಾರ, ದೇವಣ್ಣ ಕಲಾಲ, ಪ್ರಕಾಶ ಹಾದಿಮನಿ, ಸಿದ್ದೇಶ ಹೂಗಾರ, ಶಿವರಾಜ ಕಲ್ಲಾಪೂರ, ರಾಮು ಕಾಳೆ, ವಿಠ್ಠಲ ಹವಾಲ್ದಾರ, ಪಕ್ಷದ ಕಾರ್ಯಕರ್ತರು ಇದ್ದರು.

    ಪುರುಷರ ವಿಭಾಗ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುರುಷರ ಅಂತಿಮ ಕಬಡ್ಡಿ ಪಂದ್ಯಾವಳಿಯಲ್ಲಿ ಹಿಮಾಚಲ ಪ್ರದೇಶದ ತಂಡ ಪ್ರಥಮ ಬಹುಮಾನ 2.50 ಲಕ್ಷ ರೂ., ರೆಡ್ ಆರ್ವಿು ತಂಡ ದ್ವಿತೀಯ 2 ಲಕ್ಷ ರೂ. ಹಾಗೂ ಎಂಡಿ ಯುನಿವರ್ಸಿಟಿ ರೋಹ್ಟಕ್ ತೃತೀಯ 1.50 ಲಕ್ಷ ರೂ., ಮತ್ತು ಇನ್​ಕಂ ಟ್ಯಾಕ್ಸ್ ಚೆನ್ನೈ ತಂಡ ನಾಲ್ಕನೇ ಸ್ಥಾನ ಪಡೆದು 1.50 ಲಕ್ಷ ರೂ. ಜತೆಗೆ ಎಲ್ಲ ತಂಡಗಳು ಟ್ರೋಫಿ ಪಡೆದá-ಕೊಂಡವು.

    ಮಹಿಳೆಯರ ವಿಭಾಗ: ಗುರುಕುಲ ಹರಿಯಾಣ ಕಬಡ್ಡಿ ತಂಡ ಪ್ರಥಮ 2 ಲಕ್ಷ ರೂ., ಎಂಡಿ ಯುನಿವರ್ಸಿಟಿ ರೋಹ್ಟಕ್ ದ್ವಿತೀಯ 1.50 ಲಕ್ಷ ರೂ., ಶ್ರೀ ಸಾಯಿ ಸೋನಿಪತ್ ತಂಡ ತೃತೀಯ 1 ಲಕ್ಷ ರೂ. ಹಿಮಾಚಲ ಪ್ರದೇಶದ ಮಹಿಳೆಯರ ಕಬಡ್ಡಿ ತಂಡ ನಾಲ್ಕನೇ ಸ್ಥಾನ ಪಡೆದು 1 ಲಕ್ಷ ರೂ. ಪಡೆಯಿತು. ಜತೆಗೆ ಎಲ್ಲ ತಂಡಗಳಿಗೆ ಟ್ರೋಫಿ ನೀಡಲಾಯಿತು.

    25 ಸಾವಿರ ರೂ. ಬಹುಮಾನ: ಪಂದ್ಯಾವಳಿಯಲ್ಲಿ ಬೆಸ್ಟ್ ರೈಡರ್ ಮೋಹಿತ್ ಮೊಯಿಲೆ, ಬೆಸ್ಟ್ ಡಿಪೆಂಡರ್ ಸಂಜು, ಬೆಸ್ಟ್ ಆಲ್ ರೌಂಡರ್ ಮಯಾಂಕ್. ಮಹಿಳೆಯರ ವಿಭಾಗದ ಬೆಸ್ಟ್ ರೈಡರ್ ತನು, ಬೆಸ್ಟ್ ಡಿಪೆಂಡರ್ ಸಾಕ್ಷಿ, ಬೆಸ್ಟ್ ಆಲ್ ರೌಂಡರ್ ಪೂಜಾ ಅವರಿಗೆ ತಲಾ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts