More

    ಹಿಂಬಾಕಿ ಸಮೇತ ಸಂಬಳ ನೀಡಿ

    ಹುಬ್ಬಳ್ಳಿ: 7ನೇ ವೇತನ ಆಯೋಗದ ವರದಿಯಂತೆ ಸಂಬಳ ನೀಡುತ್ತಿಲ್ಲ. ಶೀಘ್ರವೇ ಹಿಂಬಾಕಿ ಸಮೇತ ಸಂಬಳ ನೀಡಬೇಕು ಎಂದು ಒತ್ತಾಯಿಸಿ ಕಿಮ್್ಸ ಟೀಚರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಮನವಿ ಸಲ್ಲಿಸಿದರು.

    ಏಪ್ರಿಲ್ 1ರಿಂದಲೇ ಹಿಂಬಾಕಿ ಸಮೇತ ಸೆಪ್ಟೆಂಬರ್​ವರೆಗೆ ಸಂಬಳ ನೀಡಬೇಕಿತ್ತು. ರಾಜ್ಯದ ಇತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಈಗಾಗಲೇ ನೀಡಲಾಗಿದೆ. ಆದರೆ, ಕಿಮ್ಸ್​ನಲ್ಲಿ ಇದುವರೆಗೆ ಕೊಟ್ಟಿಲ್ಲ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಶೀಘ್ರವೇ ಸಂಬಳ ನೀಡಬೇಕು. ಇಲ್ಲವಾದರೆ ಸೆ. 21ರಂದು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಮಣಿಯದಿದ್ದರೆ ಸೆ. 28ರಿಂದ ತುರ್ತಚಿಕಿತ್ಸೆ ಹೊರತುಪಡಿಸಿ ಇತರ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಸಮಸ್ಯೆ ಆಲಿಸಿದ ಡಾ. ರಾಮಲಿಂಗಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದರು. ಸಂಬಳ ನೀಡುವ ಕುರಿತು ರ್ಚಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕ ಡಾ. ಎಸ್.ವೈ. ಮುಲ್ಕಿಪಾಟೀಲ, ಅಸೋಸಿಯೇಷನ್ ಅಧ್ಯಕ್ಷ ಡಾ.ಎಸ್.ಎಸ್. ಶಿರೋಳ, ಕಾರ್ಯದರ್ಶಿ ಡಾ. ಅರುಣ ವಾಳ್ವೇಕರ, ಡಾ.ಕೆ.ಎಫ್. ಕಮ್ಮಾರ, ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ರವೀಂದ್ರ ಗದಗ, ಡಾ. ಈಶ್ವರ ಹೊಸಮನಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts