More

    ಹಿಂದು ರಾಷ್ಟ್ರಸೇನಾ ಗಣೇಶ ವಿಸರ್ಜನೆ: ರಿಪ್ಪನ್‌ಪೇಟೆಯಲ್ಲಿ 20 ಗಂಟೆಗಳ ಸುದೀರ್ಘ ರಾಜಬೀದಿ ಉತ್ಸವ

    ರಿಪ್ಪನ್‌ಪೇಟೆ: ಬರೋಬ್ಬರಿ 20 ಗಂಟೆಗಳ ಸುದೀರ್ಘ ರಾಜಬೀದಿ ಉತ್ಸವದ ಮೂಲಕ ಪಟ್ಟಣದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾದ ಗಣೇಶನನ್ನು ಭಾನುವಾರ ಮಧ್ಯಾಹ್ನ 12.45ಕ್ಕೆ ಗವಟೂರು ತಾವರೆ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. ಈ ಮೂಲಕ 11 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿದ 56ನೇ ವರ್ಷದ ಗಣೇಶೋತ್ಸವ ಸಂಪನ್ನಗೊಂಡಿತು.
    ಕಳದೆರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ನಿತ್ಯಪೂಜೆಯೊಂದಿಗೆ 3 ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ 11 ದಿನಗಳವರೆಗೆ ಪ್ರತಿಷ್ಠಾಪಿಸಿ ವಿವಿಧ ಮನೋರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ಶನಿವಾರ ಸಂಜೆಯಿಂದ ಬೆಳಗಿನವರೆಗೆ ಜಿಟಿಜಿಟಿ ಮಳೆಯಲ್ಲೂ ಯುವಕ-ಯವತಿಯರ ಹರ್ಷೋದ್ಗಾರ ನೃತ್ಯದ ಜತೆ ಕುಂದದ ಉತ್ಸಾಹದೊಂದಿಗೆ 20 ಗಂಟೆಗಳ ಸುಧೀರ್ಘ ರಾಜಬೀದಿ ಉತ್ಸವದಲ್ಲಿ ವಿವಿಧ ಬಗೆಯ ಮಂಗಳವಾದ್ಯ ಸಹಿತ ಜಾನಪದ ಮತ್ತು ಸಾಂಸ್ಕೃತಿಕ ಕಲಾತಂಡದಿಂದ ಮನರಂಜನೆ ಹಾಗೂ ವಿನಾಯಕ ವೃತ್ತದಲ್ಲಿ ತಡರಾತ್ರಿಯಿಂದ ಮುಂಜಾನೆವರೆಗೆ ಶಿವಮೊಗ್ಗ ತಂಡದಿಂದ ರಸಮಂಜರಿ ಕಾರ್ಯಕ್ರಮ ನೀಡಲಾಯಿತು. ಹತ್ತಾರು ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಯಾಗಿತ್ತು.
    ರಾಜಬೀದಿ ಉತ್ಸವದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭಾಗವಹಿಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಹೊಸನಗರ ತಹಶಿಸೀಲ್ದಾರ್ ರಾಜೀವ್, ಕೆಂಚನಾಲ ಗ್ರಾಪಂ ಅಧ್ಯಕ್ಷ ಗಾಳಿಬೈಲು ಉಬೇದುಲ್ಲಾ ಷರೀಫ್ ಹಾಗೂ ವಿವಿಧ ಬಡಾವಣೆಗಳು, ಸಂಘಸಂಸ್ಥೆಗಳಿಂದ ಮಾಲಾರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts