More

    ಹಿಂದು ಮಹಾಸಭಾ ಗಣಪತಿ ವಿಸರ್ಜನೆಗೆ ಭರ್ಜರಿ ಸಿದ್ಧತೆ; ಕುರುಕ್ಷೇತ್ರದ ಪರಿಕಲ್ಪನೆಯಲ್ಲಿ ಮಹಾದ್ವಾರ ನಿರ್ಮಾಣ

    ಶಿವಮೊಗ್ಗ: ನಗರದ ಹಿಂದು ಮಹಾಸಭಾ ಗಣೇಶ ಮೂರ್ತಿ ಮೆರವಣಿಗೆಗೆ ಇನ್ನೆರಡು ದಿನ ಬಾಕಿ ಉಳಿದಿರುವಂತೆಯೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ವರ್ಷಗಳಿಂದ ಆಕರ್ಷಕ ಮಹಾದ್ವಾರ ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿರುವ ಹಿಂದು ಮಹಾಸಭಾ ಈ ಬಾರಿಯೂ ಮಹಾದ್ವಾರದ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದೆ.
    ಗಣಪತಿ ಮೆರವಣಿಗೆ ಸಾಗುವ ಮಾರ್ಗವನ್ನು ಅಲಂಕಾರ ಮಾಡಲಾಗುತ್ತದೆ. ಎಲ್ಲೆಲ್ಲೂ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಗಾಂಧಿ ಬಜಾರ್ ಸಂಪೂರ್ಣ ಕೇಸರಿಮಯವಾಗಲಿದ್ದು, ಗಾಂಧಿ ಬಜಾರ್ ಹಾಗೂ ನೆಹರು ರಸ್ತೆಯ ಪ್ರವೇಶ ದ್ವಾರವನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ.
    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರ ಮಾದರಿ, ಸಿಂಹಾಸನದ ಮೇಲೆ ಕುಳಿತ ಛತ್ರಪತಿ ಶಿವಾಜಿ ಮಹಾರಾಜರ ಕಲಾಕೃತಿ ಈ ಹಿಂದೆ ಸಾಕಷ್ಟು ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಇವು ವೈರಲ್ ಆಗಿದ್ದವು. ಈ ಬಾರಿಯೂ ಅಂಥದ್ದೇ ವಿಶಿಷ್ಟ ಮಹಾದ್ವಾರ ನಿರ್ಮಾಣಕ್ಕೆ ಹಿಂದು ಮಹಾಸಭಾದ ಅಲಂಕಾರ ಸಮಿತಿ ಮುಂದಾಗಿದೆ.
    ಪಾಂಡವರು-ಕೌರವರ ಯುದ್ಧ ಸಂದರ್ಭದಲ್ಲಿ ಗೊಂದಲಕ್ಕೆ ಒಳಗಾಗುವ ಅರ್ಜುನನಿಗೆ ಕೃಷ್ಣ ಗೀತೆಯನ್ನು ಉಪದೇಶಿಸಿ ಬಳಿಕ ಯದ್ಧಭೂಮಿಯಲ್ಲಿ ಮುನ್ನುಗ್ಗುವ ಕುರುಕ್ಷೇತ್ರದ ಪರಿಕಲ್ಪನೆಯೊಂದಿಗೆ ಈ ಬಾರಿ ಗಾಂಧಿ ಬಜಾರ್ ಪ್ರವೇಶ ದ್ವಾರ ನಿರ್ಮಾಣವಾಗುತ್ತಿದೆ. ರಥದ ಮೇಲೆ ಸಾರಥಿಯಾಗಿರುವ ಶ್ರೀಕೃಷ್ಣ, ಅರ್ಜುನ ಹಾಗೂ ಕುದುರೆಯ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸುವ ಕಾರ್ಯ ಬಹುತೇಕ ಮುಕ್ತಾಯವಾಗಿದೆ.
    ನಗರದ ಜನರಿಗೆ ಈ ಕಲಾಕೃತಿಗಳನ್ನು ವೀಕ್ಷಿಸುವ ಅವಕಾಶ ಶೀಘ್ರದಲ್ಲೇ ಸಿಗಲಿದೆ. ಬಳಿಕ ಪ್ರತಿವರ್ಷದಂತೆ ಕೆಲವು ದಿನ ಇದು ಸೆಲ್ಫಿ ಪಾಯಿಂಟ್ ಆಗಿ ಪರಿವರ್ತನೆಯಾದರೂ ಆಶ್ಚರ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts