More

    ಹಾಲು ವಿತರಿಸಿದ ರೋಣ ಪುರಸಭೆ ಮುಖ್ಯಾಧಿಕಾರಿ

    ರೋಣ: ಇಲ್ಲಿನ ಕೃಷ್ಣಾಪುರದ ಮಹಿಳೆಗೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಗ್ರಾಮಕ್ಕೆ ತರಕಾರಿ ಹಾಗೂ ಹಾಲು ವಿತರಣೆಗೆ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ನೂರೂಲ್ಲಾಖಾನ್ ಖುದ್ದಾಗಿ ಕಚೇರಿ ಸಿಬ್ಬಂದಿಯೊಂದಿಗೆ ಬುಧವಾರ ಗ್ರಾಮಕ್ಕೆ ತೆರಳಿ ತರಕಾರಿ ಹಾಗೂ ಹಾಲು ವಿತರಿಸುತ್ತಿದ್ದಾರೆ.

    ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ತರಕಾರಿ, ಹಾಲು ಪೂರೈಕೆ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಮದ ಕೆಲ ಮಹಿಳೆಯರು ಬೀದಿಗಿಳಿದು ಮಂಗಳವಾರ ಪ್ರತಿಭಟನೆ ನಡೆಸಿದ್ದರು.

    ಪುರಸಭೆ ಮುಖ್ಯಾಧಿಕಾರಿಗಳು ಎಚ್ಚೆತ್ತು, ಪಟ್ಟಣದಲ್ಲಿ ಹಾಲು ಹಾಗೂ ತರಕಾರಿ ವಿತರಕರನ್ನು ಕರೆದು ಕೃಷ್ಣಾಪುರಕ್ಕೆ ತೆರಳಿ ಅಲ್ಲಿ ಹಾಲು ಹಾಗೂ ತರಕಾರಿ ವಿತರಿಸಬೇಕು. ನಿಮಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದರು. ಆದರೂ ಯಾರೊಬ್ಬರು ಮುಂದೆ ಬಂರಲಿಲ್ಲ. ಹೀಗಾಗಿ ಸ್ವತಹ ಮುಖ್ಯಾಧಿಕಾರಿವರೇ ಮುಂದೆ ನಿಂತು ಕಾಯಿಪಲ್ಲೆ ಮಾರಾಟ ಮಾಡಿದ್ದಾರೆ.

    ಸ್ವಂತ ಖರ್ಚಿನಲ್ಲಿ ಹಾಲು ವಿತರಣೆ: ಈ ಘಟನೆ ದಿಢೀರನೆ ಸಂಭವಿಸಿರುವುದರಿಂದ ಪುರಸಭೆ ಮುಖ್ಯಾಧಿಕಾರಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಲು ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪರಿಹಾರ ಹಣ ಬಂದಿಲ್ಲವೇ?:

    ಕರೊನಾ ಲಾಕ್​ಡೌನ್ ಸಮಯದಲ್ಲಿ ತುರ್ತು ಕಾರ್ಯಗಳಿಗಾಗಿ ಸರ್ಕಾರ ತಾಲೂಕಾಡಳಿತಕ್ಕೆ ಪರಿಹಾರಧನ ಬಿಡುಗಡೆ ಮಾಡುತ್ತದೆ. ಆದರೆ, ಇಂಥ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸ್ವಂತ ಹಣ ಖರ್ಚು ಮಾಡಿ ಕೃಷ್ಣಾಪುರದಲ್ಲಿ ಜನರಿಗೆ ಹಲು ವಿತರಿಸಿರುವುದಾಗಿ ತಿಳಿದು ಬಂದಿದೆ. ಹಾಗಾದರೆ ಸರ್ಕಾರ ಬಿಡುಗಡೆ ಮಾಡಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts