More

    ಹಾಲು ವಿತರಣೆಯಲ್ಲಿ ತಾರತಮ್ಯ ಆರೋಪ

    ರೋಣ: ಬಡಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ಹಾಲು ವಿತರಿಸುತ್ತಿದೆ. ಆದರೆ, ಪುರಸಭೆಯವರು ಹಾಲು ವಿತರಣೆಯಲ್ಲಿ ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ 11ನೇ ವಾರ್ಡ್​ನ ಜನತಾ ಪ್ಲಾಟ್​ನ ಬಡ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ ಒಂದು ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳ ಪಟ್ಟಿ ತಯಾರಿಸಿ ಆ ಕುಟುಂಬಗಳಿಗೆ ಹಾಲು ಹಂಚುವುದಾಗಿ ತಿಳಿಸಿದ್ದರು. ಆದರೆ, ಆ ಪಟ್ಟಿಯ ಪ್ರಕಾರ ವಿತರಿಸದೇ ಕೆಲ ನಿರ್ದಿಷ್ಟ ಬಡಾವಣೆಗಳಿಗೆ ಮಾತ್ರ ವಿತರಿಸುತ್ತಿದ್ದಾರೆ. ಬಡವರೇ ಹೆಚ್ಚಾಗಿ ವಾಸಿಸುವ ಮುದೇನಗುಡಿ ರಸ್ತೆಯಲ್ಲಿರುವ ಜನತಾ ಪ್ಲಾಟ್​ನತ್ತ ಯಾವೊಬ್ಬ ಅಧಿಕಾರಿಯೂ ಸುಳಿಯುತ್ತಿಲ್ಲ. ಇಲ್ಲಿನ ಪುರಸಭೆ ಸಿಬ್ಬಂದಿ ಜನರ ಮುಖ ನೋಡಿ ಹಾಲು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಇಲ್ಲಿರುವ ಕಡು ಬಡವರನ್ನು ಗುರುತಿಸಿ ಜನತಾ ಪ್ಲಾಟ್ ಮಾಡಿ ನಮಗೆ ಮನೆ ನೀಡಿದೆ. ಇಲ್ಲಿ ಎಸ್​ಸಿ. ಎಸ್​ಟಿ, ಅಲ್ಪಸಂಖ್ಯಾತ ಬಡ ಕುಟುಂಬಗಳು ವಾಸಿಸುತ್ತಿದ್ದು, ವಾಸ್ತವವಾಗಿ ಇಲ್ಲಿ ಉಚಿತವಾಗಿ ಹಾಲು ಪೂರೈಕೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

    | ಮುದಿಯವ್ವ ಹಲಗಿ, ಜನತಾ ಪ್ಲಾಟ್ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts