More

    ಹಾಲಿನ ದರ ಪದೇಪದೆ ಇಳಿಕೆ -ನಾಳೆ ಉತ್ಪಾದಕರ ಪ್ರತಿಭಟನೆ

    ದಾವಣಗೆರೆ: ರೈತರು ನೀಡುವ ಹಾಲಿನ ದರ ಪದೇಪದೆ ಇಳಿಕೆ ಮಾಡುತ್ತಿರುವ ಹಾಲು ಒಕ್ಕೂಟದ ಕ್ರಮ ವಿರೋಧಿಸಿ ಜ.9ರ ಬೆಳಗ್ಗೆ 10.30ಕ್ಕೆ ಭಾರತೀಯ ಕಿಸಾನ್ ಸಂಘ ಶಿವಮೊಗ್ಗದ ಶಿಮೂಲ್ ಹಾಲು ಒಕ್ಕೂಟದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಶಿವಮೊಗ್ಗ,ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ಪ್ರತಿದಿನ 1 ಲಕ್ಷಕ್ಕೂ ಅಧಿಕ ರೈತರು ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಸರ್ಕಾರ ಹಾಲಿಗೆ ಸ್ಥಿರ ದರ ನಿಗದಿಸದೆ ನಿರಂತರ ಇಳಿಸುವ ಆಟವಾಡುತ್ತಿದೆ ಎಂದು ಕಿಸಾನ್ ಸಂಘದ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಪ್ರವೀಣ್ ಪಟೇಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಒಂದೆಡೆ ಹೈನುಗಾರಿಕೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಹಾಲಿನ ಖರೀದಿ ದರ ಹಾಗೂ ಪ್ರೋತ್ಸಾಹಧನ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರೈತರ ಮೇಲೆ ಹೇರುತ್ತಿದೆ. ಪಶು ಆಹಾರ ಮತ್ತು ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿವೆ. ಆದ್ದರಿಂದ ಹಾಲಿಗೆ ಉತ್ತಮ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
    ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ವ್ಯವಸ್ಥೆ ನೀಡಬೇಕೆಂದು ಸಹ ಒತ್ತಾಯಿಸಿದರು.
    ಜಿಲ್ಲಾಧ್ಯಕ್ಷ ಆರ್.ಎಚ್. ಚಿದಾನಂದ, ಜಿಲ್ಲಾ ಕಾರ್ಯದರ್ಶಿ ಧನಂಜಯ್, ತಾಲೂಕು ಕಾರ್ಯದರ್ಶಿ ಪ್ರಕಾಶ್ ನೇರಳಗಿ, ವಸಂತಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts