More

    ಹಾಗೆ ಬಂದು ಹೀಗೆ ಹೋದ ಅಧಿಕಾರಿಗಳು

    ಹಿರೇಬಾಗೇವಾಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಜಾಗ ನೋಡಲು ಬಂದಿದ್ದ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಗ್ರಾಮಸ್ಥರು ಜಾಗ ಗುರುತಿಸದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದ ಘಟನೆ ಶನಿವಾರ ನಡೆದಿದೆ.

    ಹಿರೇಬಾಗೇವಾಡಿಯಲ್ಲಿ ಅವೈಜ್ಞಾನಿಕವಾದ ಹೆದ್ದಾರಿ ಮತ್ತು ಕೆಳ ಸೇತುವೆಗಳ ನಿರ್ಮಾಣದಿಂದಾಗಿ ಜನ-ಜಾನುವಾರುಗಳು ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಜಾನುವಾರು ಮಾರುಕಟ್ಟೆಗೆ ಮತ್ತು ಹೊಲಗಳಿಗೆ ಹೋಗಲು ರೈತರಿಗೆ ದಾರಿ ಇಲ್ಲದೆ ಹೆದ್ದಾರಿಯಲ್ಲೇ ಸಂಚರಿಸಿ ಪ್ರಾಣ ಕಳೆದುಕೊಂಡದ್ದಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರಿಗೆ ಮತ್ತು ಅಶೋಕಾ ಬಿಲ್ಡ್‌ಕಾನ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಿಯಾದ ಮಾರ್ಗವಿಲ್ಲದೆ ಜನ ಅಪಾಯದ ಅಂಚಿನಲ್ಲಿ ಬದುಕಬೇಕಾಗಿದೆ. ಪದೇ ಪದೆ ಸಂಭವಿಸುತ್ತಿರುವ ಅಪಘಾತಗಳಿಗೆ ಬೇಸತ್ತು ಗ್ರಾಮಸ್ಥರು ಸಂಬಂಧಿತ ಅಧಿಕಾರಿಗಳಿಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಹೀಗಾಗಿ ಶನಿವಾರ ಸ್ಥಳ ವೀಕ್ಷಣೆಗೆ ಹೆದ್ದಾರಿ ಪ್ರಾಧಿಕಾರದ ಸ್ಥಾನಿಕ ಇಂಜಿನಿಯರ್ ಮತ್ತು ಅಶೋಕಾ ಬಿಲ್ಡ್‌ಕಾನ್‌ನ ಇಂಜಿನಿಯರ್ ನರಸಿಂಹಲು ಗ್ರಾಮಕ್ಕೆ ಅಗಮಿಸಿದ್ದರು.

    ಅವರೊಂದಿಗೆ ಸಾರ್ವಜನಿಕರು ಹೆದ್ದಾರಿಗೆ ಕೆಳ ಸೇತುವೆ ನಿರ್ಮಿಸಲು ಸರಿಯಾದ ಜಾಗ ಗುರುತಿಸಲು ಸುದೀರ್ಘ ಚರ್ಚೆ ನಡೆಸಿದ್ದಾರೆ. ಕೆಳಸೇತುವೆ ನಿರ್ಮಾಣದಿಂದಾಗಬಹುದಾದ ಸಾಧಕ-ಬಾಧಕಗಳ ಚರ್ಚೆ ನಡೆದಿದೆ. ಇಲ್ಲಿ ಬೇಡ, ಅಲ್ಲಿ ಬೇಡ ಎನ್ನುವುದರಲ್ಲೇ ಸಮಯ ಕಳೆದಿದೆ. ಕೊನೆಗೂ ಅಧಿಕಾರಿಗಳು ಯಾವುದೇ ನಿರ್ಣಯ ತೆಗೆದುಕೊಳ್ಳದೆ ಹಿಂತಿರುಗಿದ್ದಾರೆ. ಮುಂಬರುವ ಹತ್ತು ದಿನಗಳಲ್ಲಿ ಗ್ರಾಪಂನಲ್ಲಿ ಸಾರ್ವಜನಿಕರ ಠರಾವಿನೊಂದಿಗೆ ಸರಿಯಾದ ಜಾಗ ಗುರುತಿಸಲಿದ್ದಾರೆ. ಅಧಿಕಾರಿಗಳನ್ನು ಕರೆಯಿಸಿ ಕಾಮಗಾರಿ ಪ್ರಾರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
    ಖಾದ್ರಿ ದರ್ಗಾದ ಪೀಠಾಧಿಪತಿ ಅಶ್ರಫ್ ಪೀರಾ ಕಾದ್ರಿ, ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ, ಗ್ರಾಪಂ ಸದಸ್ಯರಾದ ಆನಂದಗೌಡ ಪಾಟೀಲ, ಬಸವರಾಜ ತೋಟಗಿ, ನಿಂಗಪ್ಪ ತಳವಾರ, ಗೌಡಪ್ಪ ಹಾದಿಮನಿ, ಗ್ರಾಮಸ್ಥರಾದ ನಾಗಪ್ಪ ಶಿಂತ್ರಿ, ಇಮ್ತಿಯಾಜ್ ಕರಿದಾವಲ, ಸಮೀರ್ ದೇವಲಾಪುರ, ಮುದಸ್ಸರ್ ನೇಸರಗಿ, ಜೈರೊದ್ದೀನ್ ನೇಸರಗಿ, ಇಸಾಕ್ ಕಿತ್ತೂರ, ಆನಂದ ಪಾಟೀಲ, ಬಸವರಾಜ ಸಿದ್ದನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts