More

    ಹಾಕಿ ಕ್ಯಾಂಪ್​ಗೆ ಹಾರಿದ ಪವನ

    ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

    ಉಪ್ಪಿನಬೆಟಗೇರಿ ಇದೀಗ ರಾಷ್ಟ್ರದ ಗಮನ ಸೆಳೆದಿದೆ. ಇದಕ್ಕೆ ಕಾರಣ ಪವನ ಮಡಿವಾಳ. ರಾಷ್ಟ್ರೀಯ ಹಾಕಿ ತಂಡದ ಕ್ಯಾಂಪ್​ಗೆ ಪವನ ಆಯ್ಕೆಯಾಗುವ ಮೂಲಕ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ. ಖೇಲೋ ಇಂಡಿಯಾದಲ್ಲಿ ಈತನ ಆಟ ಕಂಡು ಇಡೀ ದೇಶವೇ ಭೇಷ್ ಎಂದಿದೆ.

    ಶಿಕ್ಷಕ ಫಕೀರಪ್ಪ ಮಡಿವಾಳ ಹಾಗೂ ಸುನಂದಾ ಅವರ ಪುತ್ರನಾದ ಪವನ, 5ನೇ ತರಗತಿಗೆ ಧಾರವಾಡದ ಕ್ರೀಡಾ ಶಾಲೆಗೆ ಸೇರಿದ. ಧಾರವಾಡದ ಕ್ರೀಡಾ ಶಾಲೆಯ ಹಾಕಿ ತರಬೇತುದಾರ ಚಂದ್ರಶೇಖರ ನಾಯ್ಕರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಶಾಲಾ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡದ ಗೆಲುವಿಗೆ ಕಾರಣನಾದ. 8 ರಿಂದ 10ನೇ ತರಗತಿವರೆಗೆ ಕೊಡಗು ಜಿಲ್ಲೆಯ ಕೂಡಗಿಯಲ್ಲಿನ ಕ್ರೀಡಾ ಶಾಲೆ ಸೇರಿದ. ಕಿರಿಯರ, ಹಿರಿಯರ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶಾಲೆಗೆ ಪ್ರಥಮ ಸ್ಥಾನ ಪಡೆದು ಸೈ ಎನಿಸಿಕೊಂಡ. ಬಳಿಕ ಬೆಂಗಳೂರಿನ ಶಾಂತಿನಗರದಲ್ಲಿರುವ ಕರ್ನಾಟಕ ಹಾಕಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆದ. ಬೆಂಗಳೂರಿನ ಆಲ್ ಅಮೀನ್ ಕಾಲೇಜ್​ನಲ್ಲಿ ಪದವಿ ಪೂರ್ಣಗೊಳಿಸಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. 5ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಪಂದ್ಯಗಳನ್ನಾಡಿ ಪ್ರಶಸ್ತಿಗಳನ್ನು ಪಡೆದಿದ್ದಾನೆ. ಇದುವರೆಗೆ ಜಿಲ್ಲೆ, ರಾಜ್ಯ, ಅಂತಾರಾಜ್ಯಮಟ್ಟದ 17ಕ್ಕೂ ಅಧಿಕ ಪಂದ್ಯಗಳನ್ನಾಡಿ ಹಲವು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆ ಎನ್ನುವಂತೆ ನವದೆಹಲಿಯ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಿಂದ ರಾಷ್ಟ್ರೀಯ ಹಾಕಿ ತಂಡದ ಕ್ಯಾಂಪ್​ಗೆ ಆಯ್ಕೆಯಾಗಿದ್ದಾಗಿ ಪವನಗೆ ಸಂದೇಶ ಬಂದಿದೆ. ತರುವಾಯ ನವದೆಹಲಿಗೆ ಹಾರಿರುವ ಪವನ, ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ. ಈ ಕ್ಯಾಂಪ್​ಗೆ ಆಯ್ಕೆಯಾದವರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಅಂತಿಮವಾಗಿ ಉತ್ತಮ ಪ್ರದರ್ಶನ ನೀಡಿದವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.

    ನಾವು ಏನು ಆಗಬೇಕು ಎಂಬ ಕನಸು ಕಾಣುವುದಕ್ಕಿಂತ ಏನು ಮಾಡಬೇಕು ಎಂಬುದನ್ನು ಶ್ರದ್ಧೆಯಿಂದ ಮಾಡಿದಾಗ ನಮ್ಮ ಕನಸು ನನಸಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಪ್ರೇರಣೆಯಾಯಿತು. ನಾನು ಕೂಡ ಕ್ರೀಡಾಪಟು ಆಗಬೇಕು ಎಂಬ ಕನಸು ಕಾಣುವುದಕ್ಕಿಂತ ಶ್ರೇಷ್ಠ ಕ್ರೀಡಾಪಟುವಾಗಲು ಏನು ಮಾಡಬೇಕೆಂಬ ದಿಸೆಯಲ್ಲಿ ಸತತ ಪರಿಶ್ರಮ, ಶ್ರದ್ಧೆ ಮೈಗೂಡಿಸಿಕೊಂಡೆ. ಕಾರಣ ಇಂದು ನಾನು ಒಬ್ಬ ಹಾಕಿ ಕ್ರೀಡಾಪಟುವಾಗುವ ಕನಸು ನನಸಾಗಿದೆ.
    | ಪವನ ಮಡಿವಾಳರ ಹಾಕಿ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts