More

    ಹಸಿರು ನಗರವಾಗಲಿ ದಾವಣಗೆರೆ- ಚಿಂತಕ ಜಿ.ಪಿ. ಬಸವರಾಜು – ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮ

    ದಾವಣಗೆರೆ: ದಾವಣಗೆರೆಯನ್ನು ಹಸಿರು ಹಾಗೂ ಸಾಂಸ್ಕೃತಿಕ ನಗರವನ್ನಾಗಿಸಬೇಕು. ಜತೆಗೆ ಸಾರ್ವಜನಿಕ ಉದ್ಯಮವಾಗಿ ಬೆಳೆಸಲು ಪ್ರಯತ್ನ ನಡೆಸಬೇಕಾಗಿದೆ ಎಂದು ಚಿಂತಕ ಮೈಸೂರಿನ ಜಿ.ಪಿ. ಬಸವರಾಜು ಸಲಹೆ ನೀಡಿದರು.
    ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹತ್ತಿ ಹಾಗೂ ಎಣ್ಣೆ ಗಿರಣಿಗಳ ನಾಡಾಗಿದ್ದ ದಾವಣಗೆರೆ ನಗರ ಈಗ ಸ್ಮಾರ್ಟ್‌ಸಿಟಿಯಾದ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಕಾಂಕ್ರಿಟೀಕರಣ ಆಗುತ್ತಿದೆ. ಗಿಡ, ಮರಗಳು ಬಲಿಯಾಗುತ್ತಿವೆ.

    ಪಂಪಾಪತಿ ಅವರಂತೆ ಇಲ್ಲಿ ಮತ್ತೆ ಹಸಿರು ನಗರವನ್ನು ರೂಪಿಸಲು ಸಾರ್ವಜನಿಕರು, ರಾಜಕಾರಣಿಗಳು ಸೇರಿ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
    ಬೆಂಗಳೂರಿನಲ್ಲಿ ನೆಲೆಗೊಂಡಿರುವ ಹಲವು ಅಕಾಡೆಮಿಗಳು ದಾವಣಗೆರೆಗೆ ಬರುವ ಮೂಲಕ ವಿಕೇಂದ್ರಿಕರಣ ಆಗಬೇಕು. ಮೈಸೂರು, ಧಾರವಾಡದಲ್ಲಿ ಇರುವ ಸಂಗೀತ ಅಕಾಡೆಮಿ ಹಾಗೂ ವಿವಿಗಳು ಮಧ್ಯ ಕರ್ನಾಟಕಕ್ಕೂ ಬರಬೇಕು. ಚಿತ್ರಕಲಾ ವಿದ್ಯಾಲಯ ಎಲ್ಲ ಆಯಾಮಗಳಲ್ಲೂ ಬೆಳೆಯವಂತಾಗಬೇಕು ಎಂದು ಆಶಿಸಿದರು.
    ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡಿರುವ ನಗರದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವುಗಳ ಜತೆಯಲ್ಲಿ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳು ಬೆಳೆಯಬೇಕು. ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾಯಕರು ಹಾಗೂ ಜನತೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
    ಪ್ರಾಚಾರ್ಯ ಡಾ.ಎಂ.ಮಂಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿಗೆ ಒಂದು ಸಭಾಭವನದ ಅಗತ್ಯವಿದೆ. ಸಂಬಂಧಪಟ್ಟವರು ಭವನ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
    ಪ್ರಾಧ್ಯಾಪಕರಾದ ಕೆ. ಮಲ್ಲಿಕಾರ್ಜುನಗೌಡ ತೂಲಹಳ್ಳಿ, ಜಿ.ಎಸ್.ಸತೀಶ್, ಶಿವರಾಜ್, ಡಾ.ಭೀಮಪ್ಪ, ಅಧೀಕ್ಷಕ ಟಿ. ಶೇಷಪ್ಪ ಇತರರು ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts