More

    ಹಳ್ಳಿಗೂ ಹಬ್ಬಿದ ಕರೊನಾ ಕಬಂಧಬಾಹು

    ಜಯತೀರ್ಥ ಪಾಟೀಲ ಕಲಬುರಗಿ: ಮಹಾನಗರಗಳಿಗೆ ಸೀಮಿತವಾಗಿದ್ದ ಕರೊನಾ ಮಹಾಮಾರಿ ಕಬಂಧಬಾಹು ಇದೀಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ಆರಂಭಿಸಿದೆ. ಇದರಿಂದ ಮತ್ತಷ್ಟು ಆತಂಕ ಸೃಷ್ಟಿಯಾಗಿದ್ದು, ಸೋಂಕು ಹರಡುವಿಕೆ ತಡೆಯುವುದು ಸಕರ್ಾರಕ್ಕೆ ಸವಾಲಾಗಿ ಪರಿಣಮಿಸಿದೆ.
    ಆರಂಭದಿಂದ ನಗರಕ್ಕೆ ಸೀಮಿತವಾಗಿದ್ದ ಸೋಂಕು ಕ್ರಮೇಣ ಶಹಾಬಾದ್, ವಾಡಿಗಳಿಗೆ ವಿಸ್ತರಿಸಿತು. ಇದಾದ ಬಳಿಕ ಹಂತ ಹಂತವಾಗಿ ತನ್ನ ವ್ಯಾಪ್ತಿ ವಿಸ್ತರಿಸುತ್ತ ಕವಲಗಾ ಗ್ರಾಮಕ್ಕೆ ದಾಪುಗಾಲಿರಿಸಿದೆ. ವಿಶೇಷವಾಗಿ ಎಳೆಯ ಕಂದಮ್ಮಗಳನ್ನೂ ಈ ಸೋಂಕು ಅಪ್ಪಿಕೊಳ್ಳುತ್ತಿರುವುದು ಆಘಾತ ಮೂಡಿಸಿದೆ.

    ಜಿಲ್ಲಾಡಳಿತಕ್ಕೆ ತಲೆನೋವು: ಕವಲಗಾದಲ್ಲಿ ಒಂದು ವರ್ಷದ ಮಗುವಿಗೆ ಸೋಂಕು ತಗುಲಿದ್ದು ಬುಧವಾರ ಖಚಿತವಾಗಿದೆ. ಮಗುವಿನ ತಾಯಿ ಹಬ್ಬಕ್ಕಾಗಿ ತವರು ಮನೆ ಹೋಗಿದ್ದ ಸರಡಗಿಯಲ್ಲೂ ಭಯ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ಎರಡೂ ಗ್ರಾಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರು ಹೊರಹೋಗದಂತೆ ಮತ್ತು ಹೊರಗಿನ ಜನ ಗ್ರಾಮ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.
    ಹಳ್ಳಿಗಳಲ್ಲಿ ಮನೆಗಳು ಅಕ್ಕಪಕ್ಕದಲ್ಲಿರುತ್ತವೆ. ಸುತ್ತಲಿನ ಮನೆ ಮಂದಿ ಒಟ್ಟಿಗೆ ಓಡಾಡುವುದು, ಹರಟೆ ಹೊಡೆಯುವುದು ಮಾಮೂಲು. ಸಾಮಾಜಿಕ ಅಂತರ ಎನ್ನುವುದು ಕಷ್ಟ ಸಾಧ್ಯ. ಇಂತಹ ಸ್ಥಿತಿಯಲ್ಲಿ ಹಳ್ಳಿಗಳಿಗೆ ಈ ಮಹಾಮಾರಿ ಕಾಮರ್ೋಡ ಬೀರಲು ಶುರು ಮಾಡಿದರೆ ತಡೆಯೊಡ್ಡುವುದೇ ಸವಾಲಾಗಲಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

    ಜನಸಹಕಾರದ್ದೇ ಸವಾಲು: ಕರೊನಾ ಸೋಂಕು ಭೀಕರವಾಗಿ ಹರಡುತ್ತಿದ್ದು, ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಸಿಟಿ ಮಂದಿ ಸಹಕಾರ ಶೂನ್ಯವಾಗಿದೆ. ಹೊರಗಡೆ ಬರಬೇಡಿ, ಮನೆಯಲ್ಲಿರಿ ಎಂದು ಸಾರಿ ಸಾರಿ ಹೇಳಿದರೂ ಗಾಡಿ ಹಾಕಿಕೊಂಡು ಹೊರಗಡೆ ತಿರುಗುತ್ತಲೇ ಇದ್ದಾರೆ. ಪೊಲೀಸರು ಹೇಳಿ ನೋಡಿದರು, ಮನವಿ ಮಾಡಿದರು, ಒಂದು ಹೆಜ್ಜೆ ಮುಂದೆ ಹೋಗಿ ಲಾಠಿ ರುಚಿಯನ್ನೂ ತೋರಿಸಿದರು. ಆದರೂ ಜನ ಒಂದಿಲ್ಲೊಂದು ನೆಪ ಮುಂದೆ ಮಾಡಿ ತಿರುಗುತ್ತಿರುವುದು ಸೋಂಕು ಹರಡುವಿಕೆ ಆತಂಕ ಹೆಚ್ಚಿಸಿದೆ.

    ಮೋದಿ ಲಕ್ಷ್ಮಣ ರೇಖೆ : ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 20ರವರೆಗೆ ಲಕ್ಷ್ಮಣ ರೇಖೆ ಹಾಕಿದ್ದಾರೆ. ಅನಂತರ ಕೆಲವೊಂದು ವಿನಾಯಿತಿ ಸಿಗುವ ಸಾಧ್ಯತೆ ಇದೆ. ಇದೊಂದು ವಾರ ಲಾಕ್ಡೌನ್ ಗಂಭೀರ ಪರಿಗಣಿಸಿ ಮನೆಯಲ್ಲಿ ಉಳಿಯುವುದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕರೊನಾ ಕಟ್ಟಿಹಾಕಲು ಜನ ಸಹಕರಿಸಬೇಕಿದೆ.

    ಕವಲಗಾ ಮಗುವಿಗೆ ಕರೊನಾ ಸೋಂಕು ತಗುಲಿರುವುದು ಆಘಾತ ತಂದಿದೆ. ಸೋಂಕು ಇದೀಗ ಹಳ್ಳಿಗಳಿಗೆ ಕಾಲಿಟ್ಟಿದ್ದು, ಇನ್ನಷ್ಟು ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಕೊಳ್ಳಬೇಕಿದೆ. ಈಗಾಗಲೇ ಕವಲಗಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
    | ಎಂ.ವೈ.ಪಾಟೀಲ್, ಶಾಸಕ, ಅಫಜಲಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts