More

    ಹಳ್ಳಿಗರ ಮನ ಮುಟ್ಟುವಲ್ಲಿ ಯಶಸ್ಸಿ

    ಕಲಬುರಗಿ: ಅಂತರವಾಣಿ 90.8 ಸಮುದಾಯ ಬಾನುಲಿ ಕೇಂದ್ರದಲ್ಲಿ ಬಿತ್ತರಗೊಂಡ ಮಾಹಿತಿಗಳು ಹಳ್ಳಿಗರ ಮನ ಮುಟ್ಟುವಲ್ಲಿ ಯಶಸ್ಸಿಯಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬೋರ್ಡ ಆಫ್ ಗವರ್ರ್ಸ್ ಸದಸ್ಯೆ ಡಾ.ದಾಕ್ಷಾಯಿಣಿ ಅಪ್ಪ ಅಭಿಪ್ರಾಯಪಟ್ಟರು.
    ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಂತರ್ವಾಣಿ ಸಮುದಾಯ ರೇಡಿಯೋ ಕೇಂದ್ರದ ನವೀಕರಣಗೊಂಡ ಸ್ಟುಡಿಯೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಆಶಯದಂತೆ ಈ ಕೇಂದ್ರ ಅಭಿವೃದ್ಧಿ ಪಥದತ್ತ ಸಾಗಿ, ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಲಿ ಎಂದು ಶುಭ ಕೋರಿದರು.
    ನವೀಕರಣಗೊಂಡ ಸ್ಟುಡಿಯೊವನ್ನು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಉದ್ಘಾಟಿಸಿದರು.
    ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಮತ್ತು ಡೀನ್ ಡಾ. ಲಕ್ಷ್ಮೀ ಪಾಟೀಲ್, ಮಾಕಾ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಪ್ರಾಚಾರ್ಯ ಡಾ. ನೀಲಾಂಬಿಕಾ ಶೇರಿಕಾರ, ಡಾ. ಸುರೇಶಕುಮಾರ ನಂದಗಾವ, ಡಾ.ಶಿವರಾಜ ಶಾಸ್ತ್ರಿ ಹೇರೂರ ಉಪಸ್ಥಿತರಿದ್ದರು.

    2008 ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಅಂತರವಾಣಿ 90.8 ಸಮುದಾಯ ಬಾನುಲಿ ಕೇಂದ್ರ ಕಲ್ಯಾಣ ಕನರ್ಾಟಕ ಭಾಗದಲ್ಲಿ ಏಕೈಕ ಹಾಗೂ ಪ್ರಪ್ರಥಮ ಬಾರಿಗೆ ಖಾಸಗಿ ಬಾನುಲಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    | ಡಾ. ದಾಕ್ಷಾಯಿಣಿ ಅಪ್ಪ, ಚೇರ್ ಪರ್ಸನ್ಶ ರಣಬಸವೇಶ್ವರ ವಿದ್ಯಾವರ್ಧಕ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts