More

    ಹಳಿಯಾಳ ಡೌಗೇರಿ ಕೆರೆ ಲೋಕಾರ್ಪಣೆ

    ಹಳಿಯಾಳ: ಅಭಿವೃದ್ಧಿಯ ಕಾರ್ಯದಲ್ಲಿ ಸರ್ಕಾರದೊಂದಿಗೆ ಸರ್ವರೂ ಕೈಜೋಡಿಸಬೇಕು. ನೆರವು ನೀಡಲು ಮುಂದಾಗಬೇಕು. ಆಗ ಅಭಿವೃದ್ಧಿಯ ಕಲ್ಪನೆ, ಚಿತ್ರಣ, ಭಾಷೆಯೇ ಬದಲಾಗುತ್ತದೆ. ಇಂತಹ ಬದಲಾವಣೆಯ ಅವಶ್ಯಕತೆಯಿದೆ. ಸಮಾಜ ಇಂತಹ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

    ಪಟ್ಟಣದ ಶ್ರೀತುಳಜಾ ಭವಾನಿ ದೇವಾಲಯದ ಹಿಂಬದಿಯಲ್ಲಿರುವ ನವೀಕರಣಗೊಳಿಸಿದ ಡೌಗೇರಿ ಕೆರೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಶ್ರೀ ಸಿಮೆಂಟ್ ಅವರ ಸಾಮಾಜಿಕ ನೆರವಿನ ಯೋಜನೆಯಲ್ಲಿ ನೀಡಿದ 99 ಲಕ್ಷ ರೂ. ನಿಂದ ಡೌಗೇರಿ ಕೆರೆಯನ್ನು ನವೀಕರಣಗೊಳಿಸಲಾಗಿದೆ. ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದಿಂದ ನಿರೀಕ್ಷಿಸುವ ಬದಲು ಸ್ಥಿತಿವಂತರು, ದಾನಿಗಳು ನೆರವು ನೀಡಲು ಮುಂದೇ ಬರಬೇಕು ಎಂದರು.

    ನವೀಕರಣಗೊಂಡ ಡೌಗೇರಿ ಕೆರೆಯನ್ನು ಸಂರಕ್ಷಿಸುವ ಹಾಗೂ ಅದನ್ನು ಶುಚಿಯಾಗಿಡುವ ಜವಾಬ್ದಾರಿಯು ಈ ಭಾಗದ ನಿವಾಸಿಗಳದ್ದಾಗಿದೆ ಎಂದು ಕಿವಿಮಾತು ಹೇಳಿದರು.

    ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭಾ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಸದಸ್ಯ ಶಂಕರ ಬೆಳಗಾಂವಕರ, ಕಾಂಗ್ರೆಸ್ ಪ್ರಮುಖರಾದ ಅಲಿಂ ಬಸರಿಕಟ್ಟಿ, ಸಂಜು ಮಿಶಾಳೆ, ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ಪುರಸಭಾ ಮುಖ್ಯಾಧಿಕಾರಿ ಕೇಶವ ಚೌಗಲೆ, ಲೋಕೋಪಯೋಗಿ ಇಂಜಿನಿಯರ್​ಗಳಾದ ಸುದರ್ಶನ ಹೊನ್ನಾವರ, ಸಂಜು ನಾಯ್ಕ, ಪ್ರಮುಖರಾದ ಅಜರ್ ಹಲಸಿ, ಸಿಕಂದರ ಮುಜಾವರ, ಮಂಗೇಶ ತೇರಗಾಂವಕರ ಇದ್ದರು.

    ಹಲವು ವ್ಯವಸ್ಥೆ: ಕೆರೆಗೆ ಚರಂಡಿ ನೀರನ್ನು ಸೇರದಂತೆ ಕೆರೆಯ ಸುತ್ತ ಬೃಹತ್ ಚರಂಡಿ ನಿರ್ವಿುಸಲಾಗಿದೆ. ಕಸ-ತ್ಯಾಜಗಳನ್ನು ಎಸೆಯದಂತೆ ತಡೆಯಲು ತಂತಿಬೇಲಿಯನ್ನು ಹಾಕಲಾಗಿದೆ. ಕೆರೆಯ ಸುತ್ತ ಸಿಮೆಂಟ್ ಪೇವರ್ಸ್ ಹಾಕಿ ವಾಕಿಂಗ್ ಪಾತ್ ನಿರ್ವಿುಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts