More

    ಹಳಿಯಾಳದ ಬಾಲಕನಿಗೆ ಸೋಂಕು

    ಕಾರವಾರ: ಹಳಿಯಾಳದ 8 ವರ್ಷದ ಅಂಗವಿಕಲ ಬಾಲಕನಿಗೆ ಕರೊನಾ ಸೋಂಕು ಇರುವುದು ಗುರುವಾರ ಖಚಿತವಾಗಿದೆ.

    ಮಹಾರಾಷ್ಟ್ರದ ದಾರ್​ನಿಂದ ವಾಪಸಾಗಿದ್ದ ಹಳಿಯಾಳ ಸಿದ್ಧರಾಮೇಶ್ವರ ಗಲ್ಲಿಯ ಕುಟುಂಬದ 21 ವರ್ಷದ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ನಂತರ ರೋಗ ಇರುವುದು ಖಚಿತವಾಗಿತ್ತು. ಈಗ ಆಕೆಯ ಮಗನಿಗೆ (ಯುಕೆ-125)ರೋಗ ಇರುವುದು ಕಂಡುಬಂದಿದೆ. ಅವರ ಸಂಪರ್ಕಕ್ಕೆ ಬಂದ ಇನ್ನೂ ಏಳು ಜನರ ಗಂಟಲ ದ್ರವದ ಮಾದರಿಯ ವರದಿ ಬರುವುದು ಬಾಕಿ ಇದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 125 ಕ್ಕೆ ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts