More

    ಹಲವು ಆಯಾಮಗಳಲ್ಲಿ ಚಿನ್ನದ ಬಿಸ್ಕತ್ ತನಿಖೆ

    ಭಟ್ಕಳ: ದಾಖಲೆಗಳಿಲ್ಲದೆ ಚಿನ್ನದ ಬಿಸ್ಕತ್​ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಭಟ್ಕಳ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಕೆಲ ವ್ಯಕ್ತಿಗಳಿಗೆ ಭಟ್ಕಳ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

    ಹುಬ್ಬಳ್ಳಿಯ ದುರ್ಗದ ಬೈಲ್ ನಿವಾಸಿ ಶೈಲೇಶ ಮಹಾದೇವ ಪಾಟೀಲ, ಮಹಾರಾಷ್ಟ್ರದ ಸತಾರ ಕಟಾವ್ ತಾಲೂಕಿನ ವಿಪುಲ್ ತಂದೆ ಸಂಜಯ್ ದೇಶಮುಖ ಎಂಬುವವರನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಬಂಧಿತರನ್ನು ಜನಾರ್ಧನ ಸಿಲ್ವರ್ ರಿಫೈನರಿ ಎನ್ನುವ ಹುಬ್ಬಳ್ಳಿ ಆಭರಣ ತಯಾರಿಕೆ ಕಂಪೆನಿಗೆ ಸಂಬಂಧಿಸಿದ ವ್ಯಕ್ತಿಗಳು ಎಂದು ಪತ್ತೆ ಹಚ್ಚಿದ್ದಾರೆ.

    ಇವರಿಗೆ ಮತ್ತು ಭಟ್ಕಳಕ್ಕೆ ಇರುವ ನಂಟು ಏನು? ಎಷ್ಟು ಬಾರಿ ಭಟ್ಕಳಕ್ಕೆ ಬಂದಿದ್ದಾರೆ ?ಇಷ್ಟೊಂದು ಚಿನ್ನವನ್ನು ಎಲ್ಲಿಂದ ಪಡೆದಿದ್ದಾರೆ ಎಂದೆಲ್ಲಾ ವಿಚಾರಣೆ ನಡೆಸಿದ್ದಾರೆ. ಇವರು ಸಿಲ್ವರ ರಿಫೈನರಿ ಸಂಸ್ಥೆಯ ಸಿಬ್ಬಂದಿ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದರಿಂದ ಸಿಲ್ವರ ರಿಫೈನರಿ ಸಂಸ್ಥೆಯ ಮಾಲಿಕರಿಗೆ ಸಮನ್ಸ್ ನೀಡಿರುವುದಾಗಿ ತಿಳಿದು ಬಂದಿದೆ.

    ಕೇರಳಕ್ಕಿದೆಯೇ ನಂಟು..?: ಇತ್ತೀಚೆಗೆ ಭಾರಿ ಸದ್ದ ಮಾಡಿದ್ದ ಕೇರಳದ ಬಂಗಾರ ಕಳ್ಳ ಸಾಗಾಟ ಜಾಲಕ್ಕೇನಾದರೂ ನಂಟು ಇದೆಯಾ? ಎನ್ನುವ ದಿಸೆಯಲ್ಲೂ ಪೊಲೀಸರ ತನಿಖೆ ಆರಂಭವಾಗಿದೆ ಎನ್ನಲಾಗಿದೆ.

    ಅಲ್ಲದೆ ಈಗಾಗಲೆ ಕಸ್ಟಮ್್ಸ, ಜಿಎಸ್​ಟಿ, ಐಟಿ ಸೆಲ್​ಗಳಿಗೆ ಭಟ್ಕಳ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ಹಣದ ಅಗತ್ಯ ಉಳ್ಳವರು ತಮ್ಮಲ್ಲಿರುವ ಚಿನ್ನವನ್ನು ಇವರಿಗೆ ಮಾರಾಟ ಮಾಡುತ್ತಿದ್ದು ಅದನ್ನು ಪಡೆದವರು ಚಿನ್ನದ ಬಿಸ್ಕೆಟ್​ಗಳನ್ನಾಗಿ ಪರಿವರ್ತಿಸಿ ಹುಬ್ಬಳ್ಳಿಯ ಸಂಸ್ಥೆಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts