More

    ಹಲವರಿಗೆ ಲೆಕ್ಕಕ್ಕಿಲ್ಲ ಲಾಕ್​ಡೌನ್

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಠಿಣ ಲಾಕ್​ಡೌನ್ ಮುಂದುವರಿದಿದ್ದರೂ ಹಲವರು ಲಾಕ್​ಡೌನ್​ಗೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸಿದ್ದು ಹಣ್ಣು, ತರಕಾರಿ ಅಂಗಡಿಗಳು ಹಾಗೂ ಬಾರ್​ಗಳ ಎದುರು ಸೋಮವಾರ ಬೆಳಗ್ಗೆ ಕಂಡುಬಂದಿತು.
    ನಗರದ ಸಿದ್ಧೇಶ್ವರ ಪಾರ್ಕ್​ನಲ್ಲಿ ಬೆಳಗ್ಗೆ ತರಕಾರಿ ಮಾರುಕಟ್ಟೆ ಭರ್ತಿಯಾಗಿತ್ತು. ಕರೊನಾ ಕಾಡುವುದಕ್ಕಿಂತ ಮೊದಲಿನಂಥದ್ದೇ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ತರಕಾರಿ ಖರೀದಿಗೆ ಅವಕಾಶ ನೀಡಿದ್ದರಿಂದ ನೂರಾರು ಜನ ಏಕಾಏಕಿ ಖರೀದಿಗೆ ಮುಗಿಬಿದ್ದಿದ್ದರು. 8 ಗಂಟೆ ನಂತರ ಪೊಲೀಸರು ತಡೆಯುತ್ತಾರೆಂದು ಹಲವರು ಧಾವಂತದಲ್ಲಿದ್ದರು. ಇದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿತ್ತು. ಬಾರ್​ಗಳ ಮುಂದೆ ಮದ್ಯಪ್ರಿಯರು ಬೆಳಗ್ಗೆ 5 ಗಂಟೆಯಿಂದಲೇ ಕಾಯುತ್ತ ಕುಳಿತಿದ್ದರು. ಮದ್ಯದ ಪಾರ್ಸೆಲ್ ಪೂರೈಕೆ ಆರಂಭವಾಗಿದ್ದು, ಪರಸ್ಪರ ಅಂತರ ನಿರ್ವಹಣೆಯತ್ತ ಹೆಚ್ಚಿನವರು ಗಮನ ಹರಿಸಲಿಲ್ಲ.
    ಕಿತ್ತೂರು ಚನ್ನಮ್ಮ ವೃತ್ತ, ರಾಯಣ್ಣ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸರು ತಪಾಸಣೆ ಮುಂದುವರಿಸಿದ್ದರು. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಜಪ್ತಿ ಮಾಡಿದರು. ಹಳೇ ಹುಬ್ಬಳ್ಳಿ, ಕಸಬಾಪೇಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಜನ ಸಂಚಾರ ಹೆಚ್ಚಾಗಿತ್ತು.
    ಹೋಟೆಲ್​ಗಳು ರಶ್: ಹೋಟೆಲ್​ಗಳಲ್ಲಿ ಪಾರ್ಸೆಲ್ ಮತ್ತು ಹೋಂ ಡಿಲೆವರಿಗೆ ಸೋಮವಾರದಿಂದ ಮತ್ತೆ ಅವಕಾಶ ದೊರೆತಿದೆ. ಬೆಳಗ್ಗೆ 8ರವರೆಗೂ ಬಹುತೇಕ ಹೋಟೆಲ್​ಗಳ ಎದುರು ದಟ್ಟಣೆ ಕಂಡುಬಂದಿತು. ಹೋಂ ಡಿಲೆವರಿ ಕಂಪನಿಗಳ ಪ್ರತಿನಿಧಿಗಳು ಮತ್ತೆ ರಸ್ತೆಗೆ ಇಳಿದಿದ್ದರು.
    ರೋಗಿ ಸ್ಥಿತಿಗತಿ ತಿಳಿಯಲು ಸಹಾಯವಾಣಿ
    ಕಿಮ್್ಸ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳ ಸ್ಥಿತಿಗತಿಯನ್ನು ಅವರ ಸಂಬಂಧಿಕರಿಗೆ ತಿಳಿಸುವ ಉದ್ದೇಶದಿಂದ ಕಿಮ್್ಸ ಆಡಳಿತ ಮಂಡಳಿ ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕರು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೆ ದೂ.ಸಂಖ್ಯೆ 0836-2951508ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಕಿಮ್್ಸ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    267 ಪ್ರಕರಣ ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ 267 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ. 655 ಜನ ಬಿಡುಗಡೆಯಾಗಿದ್ದು, 5360 ಸಕ್ರಿಯ ಪ್ರಕರಣಗಳಿವೆ. 551 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts