More

    ಹರ್ಷ ಹತ್ಯೆಗೆ ಸಿಡಿದೆದ್ದ ಹಿಂದು ಸಮಾಜ

    ಬೀದರ್: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಹಾಗೂ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಥವಾ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾದ್ಯಂತ ಹಿಂದುಪರ ಸಂಘಟನೆಗಳು ಬುಧವಾರ ಬೃಹತ್ ನಡೆಸಿದವು.

    ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣದಲ್ಲಿ ಬೃಹತ್ ಹೋರಾಟ ನಡೆದಿವೆ. ರಾಜ್ಯದ ವಿವಿಧೆಡೆ ಹಿಂದುಪರ ಸಂಘಟನೆ ಯುವಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ವಿಶ್ವ ಹಿಂದು ಪರಿಷತ್, ಬಜರಂಗ ದಳ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳಿಂದ ನಗರದಲ್ಲಿ ರ್ಯಾಲಿ ನಡೆಯಿತು. ಗಣೇಶ ಮೈದಾನದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಅಂಬೇಡ್ಕರ್ ವೃತ್ತ, ಶಿವಾಜಿ ಮಹಾರಾಜ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದರು. ಕೆಲ ಮತೀಯ ಶಕ್ತಿಗಳು ಹಿಂದು ಯುವಕರನ್ನು ಹತ್ಯೆ ಮಾಡುವಂಥ ಹೀನ ಕೃತ್ಯದಲ್ಲಿ ತೊಡಗಿವೆ. ಇದಕ್ಕೆ ಸಕರ್ಾರ ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಧರ್ಮ ರಕ್ಷಣೆಗಾಗಿ ಜೀವನ ಮುಡಿಪಾಗಿಟ್ಟು, ತನ್ನದೆಲ್ಲವನ್ನೂ ಸಮಾಜಕ್ಕೆ ಸಮಪರ್ಿಸಿದ ಬಜರಂಗದಳ ಸಕ್ರಿಯ ಕಾರ್ಯಕರ್ತನಾಗಿದ್ದ ಹರ್ಷ ದ್ರೋಹಿಗಳ ಸಂಚಿಗೆ ಬಲಿಯಾಗಿದ್ದಾನೆ. ಪರಿಸ್ಥಿತಿ ಇದೇ ರೀತಿ ಬಿಟ್ಟರೆ ದೇಶಕ್ಕೆ ಗಂಡಾಂತರ ಕಾದಿದೆ. ಇಂಥ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ಸಾಳೆ, ಕಾರ್ಯದಶರ್ಿ ಸತೀಶ ನೌಬಾದೆ, ಬಜರಂಗದಳ ಜಿಲ್ಲಾ ಸಂಚಾಲಕ ಸುನೀಲ ದಳವೆ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಪ್ರಮುಖರಾದ ವೀರೇಂದ್ರ ಪ್ರತಾಪಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ಶಶಿ ಹೊಸಳ್ಳಿ, ಆಕಾಶ ಪಾಟೀಲ್, ಶಿವಶರಣಪ್ಪ ಪಾಟೀಲ್, ರಾಜೇಂದ್ರ ಪೂಜಾರಿ, ಮಹೇಶ ಕಟ್ಟೆ, ಸಿದ್ದು ಬೇಲೂರೆ, ರವಿ ಕೊಡಗೆ, ಶಿವು ಲೋಖಂಡೆ, ವಿಶಾಲ ಅತಿವಾಳ ನೌಬಾದ್, ರಾಜಕುಮಾರ ಅಳ್ಳೆ, ಧನರಾಜ ಕುಂಬಾರವಾಡ, ಮಹೇಶ ಕುಂಬಾರವಾಡ, ವಿಕ್ರಮ ಮುದಾಳೆ, ಭೂಷಣ ಪಾಠಕ್, ಗಣೇಶ ಭೋಸ್ಲೆ, ಯೋಗೇಶ ಬಿರಾದಾರ, ವಿಜಯ ಮೇತ್ರೆ, ಸಚಿನ್ ಚಿಮಕೋಡೆ, ಸುಭಾಷ ಮಡಿವಾಳ ಇತರರಿದ್ದರು.

    ಹರ್ಷ ಹತ್ಯೆ ದೇಶದ್ರೋಹಿ ಸಂಚಿನ ಪ್ರಕರಣ. ಹೀಗಾಗಿ ಎನ್ಐಎ, ಸಿಬಿಐಗೆ ಒಪ್ಪಿಸಿ ಇದರ ಹಿಂದಿರುವ ಸಮಾಜಘಾತುಕರನ್ನು ಬಯಲಿಗೆಳೆದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಮಾಜದ ಶಾಂತಿ ಕದಡುತ್ತಿರುವ ಪಿಎ್ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ಸಕರ್ಾರ ನಿಷೇಧಿಸಬೇಕು ಹಾಗೂ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಬೇಡಿಕೆಯ ಮನವಿಪತ್ರವನ್ನು ಜಿಲ್ಲಾಡಳಿತ ಮೂಲಕ ಗೃಹ ಸಚಿವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts