More

    ಹಮಾವಾನಕ್ಕೆ ಹೊಂದುವ ಬೆಳೆ ಬೆಳೆಯಿರಿ

    ಯಾದಗಿರಿ: ರೈತರು ವಿವಿಧ ಮಾದರಿಯ ಬೇಸಾಯ ಪದ್ಧತಿಗಳು, ಬಗೆಬಗೆಯ ತಳಿಗಳ ಪಶುಸಂಗೋಪನೆ ಸಾಕಾಣಿಕೆ ಪದ್ದತಿ ಜತೆಗೆ ನವ ತಂತ್ರಜ್ಞಾನದ ಸಹಾಯದಿಂದ ಹೆಚ್ಚಿನ ಆದಾಯ ಪಡೆದು ಅಭಿವೃದ್ಧಿ ಹೊಂದುವುದು ಸರಕಾರಗಳ ಉದ್ದೇಶವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.

    ಶುಕ್ರವಾರ ಸುರಪುರ ತಾಲೂಕಿನ ಕವಡಿಮಟ್ಟಿಯಲ್ಲಿ ಗ್ರಾಮದ ಕೃಷಿ ವಿಜ್ಙಾನ ಕೇಂದ್ರದ ಆವರಣದಲ್ಲಿ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೆವಿಕೆ ಆಡಳಿತ ಭವನ ಮತ್ತು ರೈತ ವಸತಿ ನಿಲಯ ಲೋಕಾರ್ಪಣೆಗೊಳಿಸಿ ಮಾತನಡಿ, ರೈತರು ಕೃಷಿ ವಿಜ್ಞಾನಿಗಳ ಮೂಲಕ ಉಳುಮೆ ಭೂಮಿ, ಅದರ ವ್ಯಾಪ್ತಿಯ ವಾತಾವರಣ ಹಾಗೂ ಅದಕ್ಕೆ ಅನುಗುಣವಾಗಿ ಬೆಳೆಯುವ ಬೆಳೆಗಳ ಜತೆಗೆ ಹೆಚ್ಚು ಆದಾಯ ನೀಡುವ ಕೃಷಿಗೆ ಸಂಬಂಧಿಸಿದ ಮಾಹಿತಿ, ತರಬೇತಿ ಮತ್ತು ಸಹಾಯ ಪಡೆದು ದ್ವಿಗುಣ ಆದಾಯ ಪಡೆಯಬೇಕು. ಆಗ ಮಾತ್ರ ರೈತರು ಉನ್ನತಿ ಹೊಂದಲು ಸಾಧ್ಯ ಎಂದರು.

    ಹವಾಮಾನಕ್ಕೆ ಹೊಂದುಕೊಳ್ಳುವ 1500 ಕ್ಕೂ ಹೆಚ್ಚು ಬಗೆಯ ಬಿತ್ತನೆ ಬೀಜಗಳನ್ನು ದೇಶದಲ್ಲಿ ಸಂಶೋಧನೆ ಮಾಡಲಾಗಿದೆ. ಇವುಗಳ ಸದುಪಯೋಗ ಪಡೆದುಕೊಂಡು ದೇಶದ ಹಸಿವು ನೀಗಿಸಿ, ಭಾರತದ ಆರ್ಥಿಕತೆಯ ಜಿಗಿತಕ್ಕೆ ಪಾತ್ರರಾಗಬೇಕು. ಕಳೆದ 2 ವರ್ಷದಲ್ಲಿ ತರಕಾರಿ, ಹಣ್ಣು, ಮಾಂಸ ಮತ್ತು ಹೂವುಗಳು ರಫ್ತುವಿನಲ್ಲಿ ಭಾರತ ಪ್ರಪಂಚದ 8ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹುಮ್ಮಿದೆ. 340 ಮೆಟ್ರಿಕ್ ಟನ್ ಆಹಾರಧಾನ್ಯ, 240 ಮೆಟ್ರಿಕ್ ಟನ್ ಹಣ್ಣುಗಳನ್ನು ಬೆಳೆಯುತ್ತಿದ್ದು ರೈತರ ಶ್ರಮದಿಂದ ಎಂದು ಗುಣಗಾನ ಮಾಡಿದ ಸಚಿವರು, ಕೇಂದ್ರ ಸರಕಾರ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸಲು 1 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ ಎಂದರು ಸಕರ್ಾರದ ಯೋಜನೆಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts