More

    ಹಣ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸಿ


    ಯಾದಗಿರಿ: ಖರೀದಿಸಿದ ಹತ್ತಿಗೆ ಹಣ ಕೊಡದೆ ವ್ಯಾಪಾರಿಯೊಬ್ಬ ವಂಚಿಸಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನರ್ಾಟಕ ರಾಜ್ಯ ರೈತ ಸಂಘ (ರೈತ ಸೇನೆ)ದಿಂದ ಇಲ್ಲಿನ ಅಪರ ಜಿಲ್ಲಾಕಾರಿಗೆ ಮನವಿ ಸಲ್ಲಿಸಲಾಯಿತು.

    ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಹತ್ತಿ ವ್ಯಾಪಾರಿ ರೈತರಿಂದ ಸಮಾರು 20 ಲಕ್ಷ ರೂ.ಗಳಿಂಗಿಂತ ಹೆಚ್ಚು ಹತ್ತಿ ಖರೀದಿಸಿದ್ದಾನೆ. ಒಟ್ಟು 13 ರೈತರು 25ರಿಂದ 30 ಕ್ವಿಂಟಾಲ್ನಷ್ಟು ಆತನಿಗೆ ಮಾರಾಟ ಮಾಡಿದ್ದಾರೆ. ಒಂದು ವಾರದ ಬಳಿಕ ಹಣ ಕೊಡುವುದಾಗಿ ನಂಬಿಸಿ, ಇದೀಗ ತಲೆಮರೆಸಿಕೊಂಡಿದ್ದು, ರೈತರು ಇದೀಗ ದಿಕ್ಕು ತೋಚದಂತಾಗಿದೆ ಎಂದು ಸಂಘದ ಪದಾಕಾರಿಗಳು ತಿಳಿಸಿದರು.

    ಮೊದಲು ಒಂದೆರಡು ವರ್ಷ ರೈತರ ಜತೆ ಹಣಕಾಸಿನ ವ್ಯವಹಾರ ಚನ್ನಾಗಿ ಇಟ್ಟುಕೊಂಡಿದ್ದ ಈ ವ್ಯಾಪಾರಿಯನ್ನು ಅನ್ನದಾತರು ನಂಬಿದ್ದಾರೆ. ಅದರಂತೆ ಈ ವರ್ಷ ಸಹ ಆತನ ಬಳಿ ಹತ್ತಿ ಮಾರಾಟ ಮಾಡಿದ್ದಾರೆ. ಒಂದು ತಿಂಗಳ ಒಳಗಾಗಿ ಹಣ ಕೊಡುವದಾಗಿ ಹೇಳಿ ಇದೀಗ ತನ್ನ ಮೊಬೈಲ್ ಸಹ ಬಂದ್ ಮಾಡಿಕೊಂಡಿದ್ದಾನೆ. ಲಕ್ಷಾಂತರ ರೂ.ಸಾಲ ಮಾಡಿ ಹತ್ತಿ ಬೆಳೆದವರು ಕಂಗಾಲಾಗುವಂತಾಗಿದೆ ಎಂದು ಹೇಳಿದರು.

    ಕೂಡಲೇ ಈ ವಂಚಕ ವ್ಯಾಪಾರಿ ವಿರುದ್ಧ ಜಿಲ್ಲಾಡಳಿತ ಕ್ರಿಮಿನಲ್ ಕೇಸ್ ದಾಖಲಿಸಿ, ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು. ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಪಾಟೀಲ್, ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಉಪಾಧ್ಯಕ್ಷ ನಿಂಗಪ್ಪ ಹೊನಿಗೇರಿ, ರವಿ ರಾಠೋಡ, ಸಾಬಣ್ಣ ಸಿಂಗಾಣಿ, ಶ್ರೀನಿವಾಸ ಚಾಮನಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts