More

    ಹೆಚ್ಚಿದ ತಾಯಿ, ಶಿಶು ಮರಣ

    ತುಮಕೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 2023ರ ಜನವರಿಯಿಂದ ಮಾರ್ಚ್‌ವರೆಗೆ ಹೆರಿಗೆಯಾದ 31,006 ಶಿಶುಗಳ ಪೈಕಿ ಬರೋಬ್ಬರಿ 401 ಶಿಶುಗಳು ಹಾಗೂ 16 ತಾಯಂದಿರು ಮರಣ ಹೊಂದಿರುವುದು ಆತಂಕ ಸೃಷ್ಟಿಸಿದೆ.

    ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 613 ಹೆರಿಗೆಗಳ ಪೈಕಿ 19 ಶಿಶುಗಳು ಒಬ್ಬರು ತಾಯಿ ಸಾವನ್ನಪ್ಪಿದ್ದಾರೆ. ಗುಬ್ಬಿಯಲ್ಲಿ 1,323 ಹೆರಿಗೆ ಪೈಕಿ 11 ಶಿಶುಗಳು ಹಾಗೂ ಒಬ್ಬರು ತಾಯಿ, ಕೊರಟಗೆರೆಯಲ್ಲಿ 566 ಹೆರಿಗೆಗಳಲ್ಲಿ ಒಬ್ಬರು ತಾಯಿ, 11 ಶಿಶುಗಳು ಮೃತಪಟ್ಟಿವೆ. ಕುಣಿಗಲ್ ತಾಲೂಕಿನಲ್ಲಿ 1,235 ಹೆರಿಗೆಯಾಗಿದ್ದು 15 ಶಿಶು, ಒಬ್ಬರು ತಾಯಿ, ಮಧುಗಿರಿಯಲ್ಲಿ 1,210 ಹೆರಿಗೆಯಾಗಿದ್ದು ಇಬ್ಬರು ತಾಯಂದಿರು, 17 ಶಿಶುಗಳು, ಗಡಿನಾಡು ಪಾವಗಡದಲ್ಲಿ 3,745 ಹೆರಿಗೆಯಾಗಿದ್ದು, 4 ಶಿಶುಗಳು ಹಾಗೂ ಒಬ್ಬರು ತಾಯಿ ಸಾವನ್ನಪ್ಪಿದ್ದಾರೆ.

    ತುಮಕೂರು ನಗರ ಹೊರತುಪಡಿಸಿದರೆ ಶಿರಾ ತಾಲೂಕಿನಲ್ಲಿ ಹೆಚ್ಚು 5,325 ಹೆರಿಗೆಯಾಗಿದ್ದು ಬರೋಬ್ಬರಿ 43 ಶಿಶುಗಳು, ಇಬ್ಬರು ತಾಯಂದಿರು, ತಿಪಟೂರಿನಲ್ಲಿ 4353 ಹೆರಿಗೆಯ ಪೈಕಿ 24 ಶಿಶುಗಳು, ಒಬ್ಬರು ತಾಯಿ ವಿವಿಧ ಕಾರಣದಿಂದ ಸಾವನ್ನಪ್ಪಿದ್ದಾರೆ. ಜನನ ಲಿಂಗಾನುಪಾತ 1,081 ಇರುವ ತುರುವೇಕೆರೆಯಲ್ಲಿ 716 ಹೆರಿಗೆಯಾಗಿದ್ದು 16 ಶಿಶುಗಳು ಮೃತಪಟ್ಟಿವೆ. ತುಮಕೂರು ನಗರದಲ್ಲಿ 11,920 ಹೆರಿಗೆಯಾಗಿದ್ದು 241 ಶಿಶುಗಳ, 6 ತಾಯಂದಿರು ಸಾವನ್ನಪ್ಪಿದ್ದಾರೆ.

    ಲಿಂಗಾನುಪಾತ 928: ಜಿಲ್ಲೆಯಲ್ಲಿ 27.91ಲಕ್ಷ ಜನಸಂಖ್ಯೆ ಹೊಂದಿದ್ದು 2023 ಜನವರಿಯಿಂದ ಮಾರ್ಚ್‌ವರೆಗೂ 36,444 ಗರ್ಭಿಣಿಯರ ನೊಂದಣಿಯಾಗಿದ್ದು 31,006 ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಾಗಿದೆ. ಜಿಲ್ಲೆಯ ಒಟ್ಟು ಲಿಂಗಾನುಪಾತ 928ಕ್ಕೆ ಕುಸಿದಿದೆ. ತುರುವೇಕೆರೆಯಲ್ಲಿ ಅತೀ ಹೆಚ್ಚು 1,081, ಚಿಕ್ಕನಾಯಕನಹಳ್ಳಿ 1,023, ಕೊರಟಗೆರೆ 1,010, ಗುಬ್ಬಿ 933, ಕುಣಿಗಲ್ 905, ಮಧುಗಿರಿ 977, ಪಾವಗಡ 913, ಶಿರಾ 912, ತಿಪಟೂರು 935, ತುಮಕೂರಿನಲ್ಲಿ 918 ಲಿಂಗಾನುಪಾತವಿದೆ. ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಸಲು ಭ್ರೂಣಹತ್ಯೆ ಪತ್ತೆಗೆ ಅವಕಾಶವಿಲ್ಲದಂತೆ ಸ್ಕಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ಇಡಲಾಗಿದೆ.

    ಸಿಬ್ಬಂದಿ ನೇಮಕ ಮಾಡಿ: ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಹಾಗೂ ಮಕ್ಕಳ ಸಾವಿನ ಪ್ರಕರಣಗಳು ಕಡಿಮೆಯಾದರಷ್ಟೇ ಜನರು ಧೈರ್ಯವಾಗಿ ಆಸ್ಪತ್ರೆಗೆ ಬರುತ್ತಾರೆ. ಸಾವಿನ ಪ್ರಕರಣಗಳನ್ನು ತಗ್ಗಿಸಲು ಅಗತ್ಯ ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಎಲ್ಲ ಆಸ್ಪತ್ರೆಗಳಿಗೂ ನೇಮಕವಾಗಬೇಕಿದೆ. ಪ್ರತಿನಿತ್ಯ ನೂರಾರು ಹೆರಿಗೆ ಮಾಡುವ ತಜ್ಞ ವೈದ್ಯರು ತಾಯಿ, ಮಗುವಿನ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಆರೈಕೆಗಾಗಿ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು, ಜಿಲ್ಲೆಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳಿದ್ದು, ವೈದ್ಯಕೀಯ ವಿದ್ಯಾರ್ಥಿಗಳನ್ನಾದರೂ ಸರ್ಕಾರಿ ಆಸ್ಪತ್ರೆಗಳಿಗೆ ಯೋಜಿಸಿಕೊಂಡು ಅಗತ್ಯ ನೆರವು ನೀಡಲು ಸಾಧ್ಯತೆಯಿದೆ. ವೈದ್ಯರ ಜತೆಗೆ ಆರೈಕೆ ಸಿಬ್ಬಂದಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿರಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಬೇಕಿದೆ. ಲಿಂಗಾನುಪಾತ ಸರಿದೂಗಿಸಲು ಭ್ರೂಣಲಿಂಗ ಪತ್ತೆ ಅಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯ ತಪಾಸಣೆ ನಡೆಸಬೇಕಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಹಾಗೂ ಶಿಶುಗಳ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಈ ಬಗ್ಗೆ ವರದಿ ನೀಡುವಂತೆ ಡಿಎಚ್‌ಒಗೆ ಸೂಚನೆ ನೀಡಿದ್ದೇನೆ, ಖುದ್ದು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ. | ಕೆ.ಶ್ರೀನಿವಾಸ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts