More

    ಹಂಪಿ ಪ್ರಾಧಿಕಾರ ಅನುಮತಿಯೇ ಅಂತಿಮ

    ಧಾರವಾಡ: ಹಂಪಿಯಲ್ಲಿನ ವಿಶ್ವ ಪರಂಪರೆ ಕ್ಷೇತ್ರದ ರಕ್ಷಣೆಯ ನಿಟ್ಟಿನಲ್ಲಿ ಇಲ್ಲಿಯ ಹೈಕೋರ್ಟ್ ಪೀಠ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಹಂಪಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಾಣಿಜ್ಯ ಉದ್ದೇಶಕ್ಕೆ ಲೈಸೆನ್ಸ್ ಅಥವಾ ಅನುಮತಿ ಕೊಡುವ ಅಧಿಕಾರ ಪಂಚಾಯಿತಿ ಅಥವಾ ಸ್ಥಳೀಯ ಆಡಳಿತಕ್ಕೆ ಇಲ್ಲ. ಇಡೀ ಹಂಪಿ ಪ್ರದೇಶದಲ್ಲಿ ಪ್ರಾಧಿಕಾರದ ಅನುಮತಿಯ ಹೊರತು ಉಳಿದವರು ಅನುಮತಿ ಕೊಡಲು ಬರುವುದಿಲ್ಲ ಎಂದು ಪೀಠ ಆದೇಶ ನೀಡಿದೆ. ವಿರೂಪಾಪುರ ಗಡ್ಡೆಯ ಲಕ್ಷ್ಮೀ ಗೋಲ್ಡನ್ ಬೀಚ್ ರೆಸಾರ್ಟ್​ಗೆ ಅನುಮತಿ ನೀಡಿದ ವಿಚಾರವಾಗಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಜೂ. 24ರಂದು ವಿಚಾರಣೆ ಪೂರ್ಣಗೊಳಿಸಿದ್ದ ವಿಭಾಗೀಯ ಪೀಠ, ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿಗಳಾದ ಸುಜಾತಾ ಮತ್ತು ಶಿವಶಂಕರ ಅಮರಣ್ಣವರ ಅವರಿದ್ದ ವಿಭಾಗೀಯ ಪೀಠ ಜೂ. 29ರಂದು ಮಹತ್ವದ ತೀರ್ಪು ಪ್ರಕಟಿಸಿದೆ. ಹಂಪಿ ಪ್ರಾಧಿಕಾರದ ಪರವಾಗಿ ರಾಘವೇಂದ್ರ ಎಸ್. ಶ್ರೀವತ್ಸ ಅವರು ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts